ಕರ್ನಾಟಕದಲ್ಲಿ ಕೊರೋನಾ ಕೊಂಚ ಏರಿಕೆ: ಇಲ್ಲಿದೆ ಮಂಗಳವಾರದ ಅಂಕಿ-ಸಂಖ್ಯೆ

By Suvarna NewsFirst Published Dec 8, 2020, 8:40 PM IST
Highlights

ಕರ್ನಾಟಕದಲ್ಲಿ ಹೊಸ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಮತ್ತೆ ಏರಿಯಾಗಿದೆ. ಹಾಗಾದ್ರೆ ಮಂಗಳವಾರ ಅಂಕಿ-ಸಂಖ್ಯೆ ಈ ಕೆಳಗಿನಂತಿದೆ.

ಬೆಂಗಳೂರು, (ಡಿ.08): ರಾಜ್ಯದಲ್ಲಿ  ನಿನ್ನೆ (ಸೋಮವಾರ)ಕ್ಕಿಂತ ಇಂದು (ಮಂಗಳವಾರ) ಕೊರೋನಾ ಏರಿಕೆ ಕಂಡಿದೆ.

ಕಳೆದ 24 ಗಂಟೆಗಳಲ್ಲಿ 1,280 ಹೊಸ  ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 8,95,284ಕ್ಕೆ ಏರಿಕೆಯಾಗಿದೆ. ಇನ್ನು ಆಸ್ಪತ್ರೆಯಿಂದ 1060 ಜನರು ಡಿಸ್ಚಾರ್ಜ್ ಆಗಿದ್ದಾರೆ.

 ಇದರೊಂದಿಗೆ ರಾಜ್ಯದಲ್ಲಿ ಒಟ್ಟು  8,58,370 ಜನರು ಗುಣಮುಖರಾದಂತಾಗಿದೆ. ಇದರಿಂದ ಸದ್ಯ ರಾಜ್ಯದಲ್ಲಿ 25,015 ಸಕ್ರೀಯ ಕೇಸ್‌ಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕರ್ನಾಟಕದಲ್ಲಿ ಸೋಮವಾರ ಇಳಿಕೆ ಕಂಡ ಕೊರೋನಾ..!

ಮಂಗಳವಾರ ಮೃತಪಟ್ಟವರ ಸಂಖ್ಯೆ 13ರೊಂದಿಗೆ ಇದುವರಗೆ 11,880 ಜನರು ಸಾವನ್ನಪ್ಪಿದ್ದಾರೆ. 275 ಜನರು ರಾಜ್ಯದ ವಿವಿಧ ಆಸ್ಪತ್ರೆಗಳ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ರಾಜ್ಯದಲ್ಲಿ ಸಾವನ್ನಪ್ಪುವವರ ಪ್ರಮಾಣ ಶೇ 1.01ರಷ್ಟಿದೆ.

ಮಂಗಳವಾರ 18103 ಆಂಟಿಜೆನ್, 70595 ಆರ್‌ಟಿಪಿಸಿಆರ್ ಪರೀಕ್ಷೆ ಸೇರಿದಂತೆ ಒಟ್ಟು 88696 ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗಿದೆ. ಇದುವರೆಗೂ ರಾಜ್ಯದಲ್ಲಿ 11878413 ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗಿದೆ.

click me!