ಹಾವುಗಳ ಬಗ್ಗೆ ಅರಿತುಕೊಳ್ಳಲು ಹಾಗೂ ಹಾವು ಕಡಿತದ ತಡೆಗಟ್ಟುವಿಕೆಯ ಬಗ್ಗೆ ನಾಗರಿಕರಿಗೆ ಶಿಕ್ಷಣ ನೀಡಲು ಕರ್ನಾಟಕದಲ್ಲಿ ಮೊದಲ ಬಾರಿಗೆ ವಾಟ್ಸಾಪ್ಚಾಟ್ ಬಾಟ್ ಅನ್ನು ಪ್ರಾರಂಭಿಸಲಾಗಿದೆ.
ಮೈಸೂರು (ಜೂ.02): ಹಾವುಗಳ ಬಗ್ಗೆ ಅರಿತುಕೊಳ್ಳಲು ಹಾಗೂ ಹಾವು ಕಡಿತದ ತಡೆಗಟ್ಟುವಿಕೆಯ ಬಗ್ಗೆ ನಾಗರಿಕರಿಗೆ ಶಿಕ್ಷಣ ನೀಡಲು ಕರ್ನಾಟಕದಲ್ಲಿ ಮೊದಲ ಬಾರಿಗೆ ವಾಟ್ಸಾಪ್ಚಾಟ್ ಬಾಟ್ ಅನ್ನು ಪ್ರಾರಂಭಿಸಲಾಗಿದೆ. ದಲಯಾನಾ ಟ್ರಸ್ಟ್ ಸಹಯೋಗದಲ್ಲಿ ಹ್ಯೂಮೇನ್ಸೊಸೈಟಿ ಇಂಟರ್ ನ್ಯಾಶನಲ್/ಇಂಡಿಯಾ ಪ್ರಾರಂಭಿಸಿದ ಚಾಟ್ ಬಾಟ್, ಸ್ಥಳೀಯ ಸುತ್ತಮುತ್ತಲಿನ ಪ್ರದೇಶದಲ್ಲಿ ಕಂಡುಬರುವ ಹಾವು ಪ್ರಭೇದಗಳ ಬಗ್ಗೆ ತಿಳಿಸಿಕೊಡುತ್ತದೆ. ಅಲ್ಲದೆ. ಹಾವು ಕಡಿತದಿಂದ ಜೀವ ಉಳಿಸಿಕೊಳ್ಳಬಹುದಾದ ಪ್ರಥಮ ಚಿಕಿತ್ಸೆ, ಹಾವು ಕಡಿತದ ತಡೆಗಟ್ಟುವಿಕೆ ಸಲಹೆಗಳು ಹಾಗೂ ಹಾವುಗಳ ಬಗ್ಗೆ ಇರುವ ತಪ್ಪು ಮಾಹಿತಿಯ ಮಿಥ್ಯೆ ಹಾಗೂ ಅದರಿಂದ ಆಗಬಹುದಾದ ಕ್ರೌರ್ಯದ ಕೃತ್ಯಗಳಿಗೆ ಕಾರಣದ ಬಗ್ಗೆಯೂ ತಿಳಿಸುತ್ತದೆ.
ಸ್ವಯಂ ಚಾಲಿತ ಚಾಟ್ ಬಾಟ್ ಅನ್ನು, ಕ್ಯೂಆರ್ಕೋಡ್ಮೂಲಕ ಪ್ರವೇಶಿಸಬಹುದು ಅಥವಾ ಮೊ. 91541 90472ಗೆ ಹಾಯ್ ಸಂದೇಶ ಕಳುಹಿಸುವ ಮೂಲಕ ಇಂಗ್ಲಿಷ್ ಅಥವಾ ಕನ್ನಡದಲ್ಲಿ ಪ್ರಸಾರವಾಗುವ ದೃಶ್ಯವಿಷಯವನ್ನು ವೀಕ್ಷಿಸಬಹುದು. ಇದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಚಾಟ್ಬಾಟ್ಮೂಲಕ ಹಾವುಗಳೊಂದಿಗೆ ಸಹಬಾಳ್ವೆಯನ್ನು ಬೆಳೆಸಿಕೊಳ್ಳುವ ಬಗ್ಗೆ ಹಾಗೂ ಹಾವು ಕಡಿತ ತಡೆಗಟ್ಟುವ ನಿಟ್ಟಿನಲ್ಲಿ, ಮೈಸೂರಿನಲ್ಲಿ ಈ ವರ್ಷ ಕನಿಷ್ಠ ಒಂದು ಲಕ್ಷ ಬಳಕೆದಾರರನ್ನು ತಲುಪುವ ಗುರಿಯನ್ನು ಎರಡೂ ಸಂಸ್ಥೆಗಳು ಹೊಂದಿವೆ.
undefined
ಪ್ರವಾಹ ಎದುರಿಸಲು ಕೊಡಗು ಪೊಲೀಸರು ಸಜ್ಜು: ಹಾರಂಗಿ ಜಲಾಶಯದ ಆಳ ನೀರಿನಲ್ಲಿ ಕಟ್ಟುನಿಟ್ಟಿನ ತಾಲೀಮು
ಪ್ರಪಂಚದಲ್ಲಿನ ಇತರ ಎಲ್ಲಾ ದೇಶಗಳಿಗಿಂತ ಹೆಚ್ಚು ಹಾವು ಕಡಿತವನ್ನು ಹೊಂದಿರುವ ಭಾರತವು ಕುಖ್ಯಾತಿ ಹೊಂದಿದೆ. ಜಗತ್ತಿನಾದ್ಯಂತ ನಡೆಯುವ ಪ್ರಕರಣಗಳಲ್ಲಿ ಭಾರತ ಒಂದರಲ್ಲಿಯೇ ಸುಮಾರು ಶೇ. 50ರಷ್ಟು ಹಾವು ಕಡಿತದ ಸಾವುಗಳು ಕಂಡುಬರುತ್ತವೆ. ಭಾರತವು ವರ್ಷಕ್ಕೆ ಹತ್ತು ಲಕ್ಷ ಹಾವು ಕಡಿತದ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಇದು ವಾರ್ಷಿಕವಾಗಿ ಸುಮಾರು 58,000 ಮಾನವ ಹಾವು ಕಡಿತಕ್ಕೆ ಸಂಬಂಧಿಸಿದ ಸಾವು ಗಳಿಗೆ ಮತ್ತು ಸುಮಾರು 2,00,000 ಕಾಯಿಲೆಯ ಪ್ರಕರಣಗಳಿಗೆ ಕಾರಣವಾಗುತ್ತದೆ. ಕರ್ನಾಟಕವೊಂದರಲ್ಲೇ 2023ರಲ್ಲಿ 6,500 ಹಾವು ಕಡಿತದ ಪ್ರಕರಣ ವರದಿಯಾಗಿವೆ.
ಈ ವಿಷಯವು ಒಂದು ನಿರ್ಲಕ್ಷಿತ ವಿಷಯ ಎಂದು ವಿಶ್ವಸಂಸ್ಥೆಯಿಂದ ವರ್ಗೀಕರಿಸಲ್ಪಟ್ಟಿದ್ದು ಹಾಗೂ ಕುಟುಂಬಗಳ ಸಾಮಾಜಿಕ ಆರ್ಥಿಕತೆ ಮತ್ತು ಪೀಡಿತರ ಮಾನಸಿಕ ಆರೋಗ್ಯದ ಮೇಲೆ ವಿನಾಶಕಾರಿ ಪರಿಣಾಮವನ್ನುಂಟು ಮಾಡುತ್ತದೆ. ಹಾವುಗಳ ಬಗ್ಗೆ ಅರ್ಥಪೂರ್ಣ ಮಾಹಿತಿಯ ಕೊರತೆಯೂ ಸೇರಿದಂತೆ ಇರಬಹುದಾದ ವಿವಿಧ ಕಾರಣಗಳಿಗಾಗಿ ಅನೇಕ ಜನರು ಸಹಜವಾಗಿಯೇ ಅವುಗಳ ಬಗ್ಗೆ ಭಯವನ್ನು ಹೊಂದಿದ್ದಾರೆ. ಇದರಿಂದಾಗಿ ಸಾಮಾನ್ಯವಾಗಿ ಹಾವುಗಳನ್ನು ಕೊಲ್ಲುವ ಅಥವಾ ಅನ್ಯಲೋಕದ ಆವಾಸ ಸ್ಥಾನಗಳಿಗೆ ಸ್ಥಳಾಂತರಿಸುವ ಪರಿಣಾಮಗಳಿಗೆ ಕಾರಣವಾಗಿದೆ.
ಹ್ಯೂಮೇನೋ ಸೊಸೈಟಿ ಇಂಟರ್ ನ್ಯಾಷನಲ್, ಇಂಡಿಯಾದಲ್ಲಿ ಮಾನವ-ವನ್ಯಜೀವಿ ಸಹಬಾಳ್ವೆಯ ವ್ಯವಸ್ಥಾಪಕ ವಿನೋದ್ಕೃಷ್ಣ, ಹಾವು ಕಡಿತವು ಒಂದು ಸಾಮೂಹಿಕ ಸಮಸ್ಯೆಯಾಗಿದ್ದು, ಅದಕ್ಕಾಗಿ ಸಾಮೂಹಿಕ ಪರಿಹಾರದ ಅಗತ್ಯತೆ ಇದೆ. ಮೈಸೂರು ಜಿಲ್ಲೆಯಲ್ಲಿ ನಮ್ಮ ಸಮೀಕ್ಷೆಯ ಪ್ರಕಾರ, ವಾಟ್ಸ್ ಆಪ್ ಹೆಚ್ಚು ಬಳಕೆಯಾಗುವ ಡಿಜಿಟಲ್ ಆ್ಯಪ್ ಗಳಲ್ಲಿ ಒಂದು. ಆದ್ದರಿಂದ, ಮಾನವ ಜೀವಗಳನ್ನು ಉಳಿಸುವ ಮತ್ತು ಹಾವಿನ ಕಿರುಕುಳ ತಡೆಯುವ ಪ್ರಮುಖ ಮಾಹಿತಿಯೊಂದಿಗೆ ಅನೇಕ ಜನರನ್ನು ತಲುಪಲು ಇದು ಸುಲಭವಾದ ವೇದಿಕೆಯಾಗಿದೆ.
ಹಗರಣಗಳಲ್ಲೇ ಮುಳುಗಿದ ಕಾಂಗ್ರೆಸ್ ಸರ್ಕಾರ: ಸಿ.ಪಿ.ಯೋಗೇಶ್ವರ್
ಹಾವಿನ ಕಡಿತದಿಂದ ಪೀಡಿತರಾದವರಿಗೆ ಗುಣಮಟ್ಟದ ಆರೈಕೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ವಿಷದ ಸಂಶೋಧನೆ ಮತ್ತು ಒಟ್ಟಾರೆ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ ಸಂದರ್ಭದಲ್ಲಿ, ಹಾವಿನ ಕಚ್ಚುವಿಕೆಯು ಸಂಭವಿಸುವುದನ್ನು ತಡೆಯುವುದು ಮತ್ತು ಹಾವಿನ ಕಚ್ಚುವಿಕೆಯು ಒಮ್ಮೆ ಸಂಭವಿಸಿದಾಗ ಸರಿಯಾದ ಪ್ರಥಮ ಚಿಕಿತ್ಸೆ ನೀಡುವುದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.