ಮೋದಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತನಿಗೆ ಮಾಜಿ ಸಚಿವ ಸೊಗಡು ಶಿವಣ್ಣ ಕಪಾಳ ಮೋಕ್ಷ!

By Ravi Janekal  |  First Published Sep 17, 2024, 4:32 PM IST

ಪ್ರಧಾನಿ ಮೋದಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಬಿಜೆಪಿ ಮುಖಂಡ, ಮಾಜಿ ಸಚಿವ ಸೊಗಡು ಶಿವಣ್ಣ ಕಾರ್ಯಕರ್ತನೋರ್ವನಿಗೆ ಕಪಾಳಮೋಕ್ಷ ಮಾಡಿದ ಘಟನೆ ತುಮಕೂರು ನಗರದ ಪ್ರವಾಸಿ ಮಂದಿರದಲ್ಲಿ ನಡೆದಿದೆ.


ತುಮಕೂರು (ಸೆ.17): ಪ್ರಧಾನಿ ಮೋದಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಬಿಜೆಪಿ ಮುಖಂಡ, ಮಾಜಿ ಸಚಿವ ಸೊಗಡು ಶಿವಣ್ಣ ಕಾರ್ಯಕರ್ತನೋರ್ವನಿಗೆ ಕಪಾಳಮೋಕ್ಷ ಮಾಡಿದ ಘಟನೆ ತುಮಕೂರು ನಗರದ ಪ್ರವಾಸಿ ಮಂದಿರದಲ್ಲಿ ನಡೆದಿದೆ.

ಇಂದು ಪ್ರಧಾನಿ ಮೋದಿ ಅವರ 74 ವರ್ಷದ ಹುಟ್ಟು ಹಬ್ಬ ಹಿನ್ನೆಲೆ ಪ್ರವಾಸಿ ಮಂದಿರದ ಮುಂಭಾಗದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಆಗಮಿಸಿದ್ದರು.  ನೂರಾರು ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ತುಸು ನೂಕಾಟ ತಳ್ಳಾಟ ಆಗಿದೆ. ಮಾಜಿ ಸಚಿವರನ್ನ ಕಾರ್ಯಕರ್ತ ತಳ್ಳಿದ್ದಾರೆ.

Tap to resize

Latest Videos

undefined

ನಮ್ಮೂರಿಗೆ ರಾಧಿಕಾ ಟೀಚರ್ ಬೇಡ: ಶಾಲೆಗೆ ಬೀಗ ಜಡಿದ ಗ್ರಾಮಸ್ಥರು

ಇಷ್ಟಕ್ಕೆ ಕೇಂದ್ರ ಸಚಿವರ ಮುಂದೆಯೇ ಸೊಗಡು ಶಿವಣ್ಣ ಕಾರ್ಯಕರ್ತನಿಗೆ ಚಟಾರ್ ಅಂತಾ ಬಾರಿಸಿದರು. ಈ ವೇಳೆ ಮುಖ ಪ್ರೇಕ್ಷಕರಾಗಿ ನಿಂತು ನೋಡುತ್ತಿದ್ದ ನಗರ ಶಾಸಕ ಜಿಬಿ ಜ್ಯೋತಿಗಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ. ಕೊನೆಗೆ ಕೇಂದ್ರ ಸಚಿವ ವಿ ಸೋಮಣ್ಣ ಮುಂದಾಗಿ 'ಬಿಡಣ್ಣ ಹೋಗ್ಲಿ ಇಷ್ಟಕ್ಕೆ ಯಾಕೆ ಜಗಳ' ಎಂದು ಕೈಮುಗಿದರು. ಸಚಿವರು ಕಾರ್ಯಕ್ರಮಕ್ಕೆ ತೆರಳಿದ ಬಳಕವೂ ತಣ್ಣಗಾಗದ ಗಲಾಟೆ. ಗಲಾಟೆಯಲ್ಲಿ ತುಮಕೂರು ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ.
 

click me!