ಶಿವಮೊಗ್ಗ ವಿಮಾನ ನಿಲ್ದಾಣದಿಂದ ಆಗಸ್ಟ್ 31 ರಿಂದ ವಿಮಾನಯಾನ ಆರಂಭಗೊಳ್ಳಲಿದೆ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದರು.
ಶಿವಮೊಗ್ಗ (ಜು.29) : ಶಿವಮೊಗ್ಗ ವಿಮಾನ ನಿಲ್ದಾಣದಿಂದ ಆಗಸ್ಟ್ 31 ರಿಂದ ವಿಮಾನಯಾನ ಆರಂಭಗೊಳ್ಳಲಿದೆ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದರು.
ಇಂದು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂಸದರು, ಬಾಂಬ್ ತ್ರೆಟ್ ಕಂಟಿನಿಟಿ ಪ್ಲಾನ್ ತಮ್ಮ ಅನುಮತಿಯನ್ನು ಹಿಂಪಡೆದ ಹಿನ್ನೆಲೆಯಲ್ಲಿ ಆಗಸ್ಟ್ 30 ಕ್ಕೆ ವಿಮಾನ ಸಂಚಾರ ಆರಂಭ ಮುಂದೂಡಿದ್ದರು. ಇದಕ್ಕೆ ನೀಡಿದ ಅನುಮತಿ ಇದೇ 18ಕ್ಕೆ ಪಡೆದ ಹಿನ್ನೆಲೆಯಲ್ಲಿ ಹೊಸ ವ್ಯವಸ್ಥೆ ಮಾಡಿ ನಂತರ ವಿಮಾನಯಾನ ಆರಂಭಿಸಬೇಕಿದೆ ಎಂದರು. ಉಡಾನ್ ಯೋಜನೆಯಡಿ ಮೂರು ವಿಮಾನ ಮಾರ್ಗಗಳಿಗೆ ಟೆಂಡರ್ ಕರೆಯಲಾಗಿದೆ. ಸ್ಪೈಸ್ ಜೆಟ್, ಸ್ಟಾರ್ ಏರ್ಲೈನ್ಸ್, ರಿಲಯನ್ಸ್ ಏರ್ ಎಂಬ ಮೂರು ವಿಮಾನಯಾನ ಸಂಸ್ಥೆಗಳು ಈ ಟೆಂಡರ್ ನಲ್ಲಿ ಪಾಲ್ಗೊಂಡಿವೆ ಎಂದರು.
ಶಿವಮೊಗ್ಗ ಏರ್‌ಪೋರ್ಟ್‌ನಿಂದ ವಿಮಾನ ಹಾರಾಟಕ್ಕೆ ಕೊನೆಗೂ ಮುಹೂರ್ತ ಫಿಕ್ಸ್..!
ಶಿವಮೊಗ್ಗ-ಗೋವಾ ಶಿವಮೊಗ್ಗ- ಹೈದರಾಬಾದ್ ಶಿವಮೊಗ್ಗ- ತಿರುಪತಿ ಶಿವಮೊಗ್ಗ- ಬೆಂಗಳೂರು ವಿಮಾನಯಾನ ಮಾರ್ಗಗಳಿಗೆ ಅನುಮತಿ ಸಿಕ್ಕಿದೆ. ಮೊದಲ ಮೂರು ತಿಂಗಳಕಾಲ ಹಗಲು ಮಾತ್ರ ಕಾರ್ಯಚರಣೆ ನಡೆಸಲಿವೆ ನಂತರದಲ್ಲಿ ರಾತ್ರಿ ವೇಳೆ ಕಾರ್ಯಚರಣೆ ನಡೆಯಲಿದೆ. ಬಾಂಬೆ ನಗರಕ್ಕೂ ಶಿವಮೊಗ್ಗದಿಂದ ವಿಮಾನ ಮಾರ್ಗದಲ್ಲಿ ವಿಮಾನ ಸಂಚಾರ ನಡೆಸಲು ಕೋರಿಕೆ ಸಲ್ಲಿಸಿದೆ ಎಂದರು.
225 ಮೊಬೈಲ್ ಟವರ್‌ಗಳಿಗೆ ಅನುಮೋದನೆ
225 ಮೊಬೈಲ್ ಟವರ್ ಗಳನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಥಾಪನೆ ಮಾಡಲು ಅನುಮೋದನೆ ಸಿಕ್ಕಿದೆ. ಸಾಗರ ತೀರ್ಥಹಳ್ಳಿ ಹೊಸನಗರ ಮೊದಲಾದ ಮಲೆನಾಡು ಕಡೆಗಳಲ್ಲಿ ಟವರ್ ನಿರ್ಮಾಣ ಮಾಡಲು ಅರಣ್ಯ ಇಲಾಖೆಯ ಅನುಮತಿ ಬೇಕಿದೆ ಎಂದರು. ಇದೇ ವೇಳೆ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ, ಪುನಶ್ಚೇತನ ಕುರಿತ ಮಾತನಾಡಿದ ಅವರು, ಕಾರ್ಖಾನೆಯಲ್ಲಿ ಉತ್ಪಾದನೆ ಹೆಚ್ಚಿಸಲು ಅಗತ್ಯ ಕಚ್ಚಾ ವಸ್ತುಗಳನ್ನು ನೀಡಲು ಮಾಹಿತಿ ಯನ್ನು ಕೇಂದ್ರದ ಸರ್ಕಾರ ತರಿಸಿಕೊಂಡಿದೆ. ಮೊದಲು ಖಾಸಗಿಕರಣಕ್ಕೆ ಪ್ರಸ್ತಾಪ, ನಂತರ 50-50 ಪಾಲುದಾರಿಕೆಯಲ್ಲಿ ಬಂಡವಾಳ ಹೂಡಿಕೆ ಪ್ರಸ್ತಾಪ , ಕೊನೆಗೆ ಕಾರ್ಖಾನೆ ಮುಚ್ಚುವ ಪ್ರಸ್ತಾಪಗಳನ್ನು ತೆಗೆದು ಕೊಳ್ಳಲಾಗಿತ್ತು. ನಾನು ದೇವರು ಮೆಚ್ಚುವ ರೀತಿಯಲ್ಲಿ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ, ಉಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದೇನೆ. ಕಾರ್ಖಾನೆಯ ಕಾರ್ಮಿಕರು ಯಾವುದಕ್ಕೂ ಹೆದರಬೇಕಿಲ್ಲ ಎಂದು ಧೈರ್ಯ ತುಂಬಿದರು.