ಬೆಂಗಳೂರಿನಿಂದ ಇನ್ನೂ 5 ನಗರಕ್ಕೆ ವಿಮಾನ ಸೇವೆ

By Kannadaprabha NewsFirst Published Feb 19, 2021, 7:22 AM IST
Highlights

ಮಾಸಾಂತ್ಯಕ್ಕೆ ರಾಜ್‌ಕೋಟ್‌, ದುರ್ಗಾಪುರ್‌, ದಿಬ್ರೂಗರ್‌ಗೆ ಸಂಚಾರ| ಮಾರ್ಚಲ್ಲಿ ಆಗ್ರಾ, ಕರ್ನೂಲ್‌ಗೆ ವಿಮಾನ ಹಾರಾಟ ಆರಂಭಕ್ಕೆ ಸಿದ್ಧತೆ| ಕೊರೋನಾ ಲಾಕ್‌ಡೌನ್‌ ಅನ್‌ಲಾಕ್‌ ಬಳಿಕ ನಗರದಿಂದ ಮೆಟ್ರೋಯೇತರ ನಗರಗಳಿಗೆ ವಿಮಾನ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ| 

ಬೆಂಗಳೂರು(ಫೆ.19): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ (ಕೆಐಎ) ನಿಲ್ದಾಣದಿಂದ ದೇಶದ ಐದು ಮೆಟ್ರೋಯೇತರ ನಗರಗಳಿಗೆ ಶೀಘ್ರದಲ್ಲೇ ವಿಮಾನ ಸೇವೆ ಆರಂಭವಾಗಲಿದೆ.

ಕೆಐಎಯಿಂದ ಈ ಮಾಸಾಂತ್ಯದ ವೇಳೆಗೆ ಗುಜರಾತ್‌ನ ರಾಜ್‌ಕೋಟ್‌, ಪಶ್ಚಿಮ ಬಂಗಾಳದ ದುರ್ಗಾಪುರ್‌, ಅಸ್ಸಾಂನ ದಿಬ್ರೂಗರ್‌ ಮತ್ತು ಮಾಚ್‌ರ್‍ನಲ್ಲಿ ಉತ್ತರಪ್ರದೇಶದ ಆಗ್ರಾ ಮತ್ತು ಆಂಧ್ರಪ್ರದೇಶದ ಕರ್ನೂಲ್‌ಗೆ ವಿಮಾನ ಹಾರಾಟ ಆರಂಭಿಸಲು ಸಿದ್ಧತೆ ನಡೆದಿದೆ.

ಬೆಂಗಳೂರು ಸೇರಿ ದೇಶದ ನಗರಗಳಿಗೆ 22 ಹೊಸ ವಿಮಾನ ಸೇವೆ ಘೋಷಿಸಿದ ಇಂಡಿಗೋ!

ಪ್ರಸ್ತುತ ಕೆಐಎ ವಿಮಾನ ನಿಲ್ದಾಣವು ದೇಶದ 61 ಸ್ಥಳಗಳಿಗೆ ವಿಮಾನ ಸಂಪರ್ಕ ಹೊಂದಿದೆ. ಕೊರೋನಾ ಪೂರ್ವದಲ್ಲಿ ದೇಶದ 58 ಸ್ಥಳಗಳಿಗೆ ವಿಮಾನ ಸಂಪರ್ಕ ಹೊಂದಿತ್ತು. ಜನವರಿಯಲ್ಲಿ ಹೊಸದಾಗಿ ಅಸ್ಸಾಂನ ಜೋರ್‌ಹಾತ್‌, ಒಡಿಸ್ಸಾದ ಜ​ರ್‍ಸ್ಗುಡ ಮತ್ತು ಉತ್ತರಪ್ರದೇಶದ ಗೋರಖ್‌ಪುರ್‌ ನಗರಗಳಿಗೆ ವಿಮಾನ ಸೇವೆ ಆರಂಭಿಸಿದ್ದು, ಪ್ರಯಾಣಿಕರದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕೊರೋನಾ ಲಾಕ್‌ಡೌನ್‌ ಅನ್‌ಲಾಕ್‌ ಬಳಿಕ ನಗರದಿಂದ ಮೆಟ್ರೋಯೇತರ ನಗರಗಳಿಗೆ ವಿಮಾನ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಜನವರಿಯಲ್ಲಿ ಪ್ರತಿ ದಿನ ಮೆಟ್ರೋಯೇತರ ನಗರಗಳಿಗೆ ದಿನಕ್ಕೆ ಸುಮಾರು 270 ವಿಮಾನಗಳು ಸಂಚರಿಸಿದ್ದು, ಸರಾಸರಿ 30 ಸಾವಿರ ಮಂದಿ ಪ್ರಯಾಣಿಸಿದ್ದಾರೆ. 2019-20ರ ಆರ್ಥಿಕ ವರ್ಷದಲ್ಲಿ ಮೇಟ್ರೋಯೇತರ ನಗರಗಳ ಪ್ರಯಾಣಿಕರ ಪಾಲು ಶೇ.55 ಇದ್ದು, 2020-21ನೇ ಸಾಲಿನಲ್ಲಿ ಶೇ.64ಕ್ಕೆ ಏರಿಕೆಯಾಗಿದೆ ಎಂದು ಬಿಐಎಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.
 

click me!