
ಕಿರಣ್.ಕೆ.ಎನ್ ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಮಾ.10): ಅದು ಮಧ್ಯರಾತ್ರಿ ಸಮಯ. ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಕೈ ಹಾಗೂ ಕಮಲ ಕಾರ್ಯಕರ್ತರು ಫ್ಲೆಕ್ಸ್ ಗಳನ್ನು ಹಾಕುತಿದ್ದರು. ಆದ್ರೆ ಈ ವೇಳೆ ಮುಖಾಮುಖಿಯಾದ ಎರಡು ಪಕ್ಷದವರ ನಡುವೆ ಜಗಳವಾಗಿತ್ತು. ಆದ್ರೆ ಈ ಘಟನೆಯಲ್ಲಿ ಬಿಜೆಪಿ ಮುಖಂಡ ಕಟ್ಟಾ ಸುಬ್ರಮಣ್ಯನ ಪುತ್ರನ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಕೈ ಕಾರ್ಯಕರ್ತರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇಂತಹದೊಂದು ಗಂಭೀರ ಆರೋಪ ಬಿಜೆಪಿ ಮುಖಂಡ ಕಟ್ಟಾ ಸುಬ್ರಮಣ್ಯ ನಾಯ್ಡು ಪುತ್ರನ ವಿರುದ್ಧ ಕೇಳಿ ಬಂದಿದೆ. ನೆನ್ನೆ ರಾತ್ರಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರುಗಳು ತಮ್ಮ ತಮ್ಮ ಕಾರ್ಯಕ್ರಮಗಳ ಹಿನ್ನಲೆ ಬ್ಯಾನರ್, ಫ್ಲೆಕ್ಸ್ ಹಾಕುತಿದ್ದರಂತೆ.. ಆದ್ರೆ ಈ ವೇಳೆ ನಾಗಶೆಟ್ಟಿಹಳ್ಳಿಯ ಮೈದಾನದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಫ್ಲೆಕ್ಸ್ ಹಾಕುವ ವೇಳೆ ಬಿಜೆಪಿ ಕಾರ್ಯಕರ್ತರು ಬಂದು ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ನಾಗಶೆಟ್ಟಿ ಹಳ್ಳಿಯ ಇದೇ ಮೈದಾನದಲ್ಲಿ 11ರಂದು ಕಾಂಗ್ರೆಸ್ ನಿಂದ ಶ್ರೀನಿವಾಸ ಕಲ್ಯಾಣೋತ್ಸವ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಎಲ್ಲೆಡೆ ಫ್ಲೆಕ್ಸ್ ಗಳನ್ನು ಹಾಕಲಾಗುತ್ತಿದೆ. ಇನ್ನು ಅದೇ ದಿನ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಹ ನಡೆಸುತ್ತಿದೆ. ಈ ಹಿನ್ನಲೆ ಎರಡು ಪಾರ್ಟಿಯ ಕಾರ್ಯಕರ್ತರು ಕ್ಷೇತ್ರದ ತುಂಬೆಲ್ಲಾ ಫ್ಲೆಕ್ಸ್ ಬಾವುಟಗಳನ್ನು ಹಾಕುತಿದ್ದಾರೆ. ಇನ್ನು ಇದೇ ರೀತಿ ನೆನ್ನೆ ರಾತ್ರಿ ಕಾಂಗ್ರೆಸ್ ಕಾರ್ಯಕರ್ತ ಸಂತೋಷ ಹಾಗೂ ಆತನ ಜೊತೆಗಾರ ಫ್ಲೆಕ್ಸ್ ಹಾಕುವ ಸಂದರ್ಭದಲ್ಲಿ ಬಂದ ಕಟ್ಟಾಸುಬ್ರಮಣ್ಯ ನಾಯ್ಡು ಹಾಗೂ ಆತನ ಜೊತೆ ಏಳು ಜನರ ಗುಂಪು, ಇಬ್ಬರ ಮೇಲೆ ಹಲ್ಲೆ ಮಾಡಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ. ಇನ್ನು ಇದೇ ವಿಚಾರವಾಗಿ ಠಾಣೆಗೆ ಬಂದ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಇದು ರಾಜಕೀಯ ಪ್ರೇರಿತ ಕೃತ್ಯ ಅಂತ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಹೊತ್ತಿ ಉರಿದ ಬಿಎಂಟಿಸಿ: ಬಸ್‌ನಲ್ಲೇ ಕಂಡಕ್ಟರ್ ಸಜೀವ ದಹನ
ಇನ್ನು ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಜಗದೀಶ್ ತಂದೆ ಬಿಜೆಪಿ ಮುಖಂಡ ಕಟ್ಟ ಸುಬ್ರಮಣ್ಯ ನಾಯ್ಡು ಇದು ಸುಳ್ಳು ಆರೋಪ ಎಂದಿದ್ದಾರೆ. ಘಟನೆ ವೇಳೆ ತನ್ನ ಪುತ್ರ ಅಲ್ಲಿರಲಿಲ್ಲ ಎಂಬ ಮಾಹಿತಿ ನನಗಿದೆ.. ಫ್ಲೆಕ್ಸ್ ಹಾಕುವ ವಿಚಾರಕ್ಕೆ ತಳ್ಳಾಟ ನಡೆದಿದೆ. ಗಲಾಟೆಯಾಗಿಲ್ಲ. ಹೊಡೆದರೆ ಯಾರಿಗಾದರೂ ರಕ್ತ ಬರಬೇಕು ಅಥವ ಗಾಯವಾಗಬೇಕು ಆಥರ ಸುದ್ದಿ ಬಂದಿಲ್ಲ.. ಸದ್ಯ ದೂರು ನೀಡಿದ್ದಾರೆ. ವಿಚಾರಣೆ ಆಗತ್ತೆ ಕಾನೂನಾತ್ಮಕವಾಗಿ ತನಿಖೆ ನಡೆಯುತ್ತೆ ಎಂದರು.
ಹಾಸನದ ವಸತಿ ಶಾಲೆಯೊಂದರಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ,
ಸದ್ಯ ಘಟನೆ ಸಂಬಂಧ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ, ಕಿಡ್ನಾಪ್ ಯತ್ನ ಹಾಗೂ ಜಾತಿ ನಿಂದನೆಯ ಆರೋಪ ಮಾಡಿದ್ದಾರೆ. ಈ ಸಂಬಂಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಸಹ ದೂರು ದಾಖಲಾಗಿದೆ. ಸದ್ಯ ದೂರು ಹಿನ್ನಲೆ ಸಿಸಿಟಿವಿ ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸುತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ