ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಐವರ ದಾರುಣ ಸಾವು

By Santosh NaikFirst Published Dec 17, 2023, 10:57 PM IST
Highlights

ಉತ್ತರ ಕನ್ನಡ ಶಿರಸಿಯಲ್ಲಿ ಐವರು ದಾರುಣ ಸಾವು ಕಂಡಿದ್ದಾರೆ. ಶಾಲ್ಮಲಾ ನದಿಯ ಭೀಮನಗುಂಡಿಯಲ್ಲಿ ಮುಳುಗಿ ಇವರು ಸಾವು ಕಂಡಿದ್ದಾರೆ.

ಶಿರಸಿ (ಡಿ.17): ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಐವರ ದಾರುಣವಾಗಿ ಸಾವು ಕಂಡಿದ್ದಾರೆ. ಶಾಲ್ಮಲಾ‌ ನದಿಯ ಭೀಮನಗುಂಡಿಯಲ್ಲಿ ಇವರು ಸಾವು ಕಂಡಿದ್ದಾರೆ. ಇಲ್ಲಿನ ರಾಮನಬೈಲ್‌ ಹಾಗೂ ಕಸ್ತೂರಬಾ ನಗರ ನಿವಾಸಿಗಳು ದಾರುಣ ಸಾವು ಕಂಡಿದ್ದಾರೆ. ಭಾನುವಾರದ ಹಿನ್ನೆಲೆ ಶಾಲ್ಮಲಾ ನದಿಯ ಭೀಮನಗುಂಡಿಯ ಹೊಳೆಯಲ್ಲಿ ಇವರುಗಳು ಈಜಾಡಲು ತೆರಳಿದ್ದರು. ಈ ವೇಳೆ ನೀರಲ್ಲಿ ಮುಳುಗಿ ಸಾವು ಕಂಡಿದ್ದಾರೆ. ರಾಮನಬೈಲಿನ ನಿವಾಸಿಗಳಾದ ಮೌಲಾನ ಮಹಮ್ಮದ್ ಸಲೀಮ್ ಕಲೀಲ್ ರೆಹಮಾನ್ (44),  ನಾದಿಯಾ ನೂರ್ ಅಹಮದ್ ಶೇಖ್ (20), ನಬಿಲ್ ನೂರ್ ಅಹಮದ್ ಶೇಖ್(22), ವಿದ್ಯಾರ್ಥಿ ಉಮರ್ ಸಿದ್ದಿಕ್ (14) ಹಾಗೂ ಕಸ್ತೂರಬಾ ನಗರದ ವಿದ್ಯಾರ್ಥಿ ಮಿಸ್ಬಾ ತಬಸುಮ್ (21) ಸಾವಿಗೀಡಾದವರಾಗಿದ್ದಾರೆ.

ನೀರಲ್ಲಿ ಮುಳುಗಿ ಸಾವಿಗೀಡಾದವರು ಒಂದೇ ಕುಟುಂಬದವರು ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಶಿರಸಿ ಪೊಲೀಸರು ಹಾಗೂ ಅಗ್ನಿಶಾಮಕದಳ ಭೇಟಿ ನೀಡಿದೆ. ಸಾಕಷ್ಟು ಶೋಧ ಕಾರ್ಯಗಳ ಬಳಿಕ ಐವರ ಮೃತದೇಹ ಪತ್ತೆ ಮಾಡಲಾಗಿದೆ. ಭಾನುವಾರದ ಹಿನ್ನೆಲೆ ಶಾಲ್ಮಲಾ ನದಿಯ ಭೀಮನಗುಂಡಿಯ ಹೊಳೆಯತ್ತ ತೆರಳಿದ್ದರು. ಅಲ್ಲೇ ಊಟ ಮಾಡಿ ರಜಾ ದಿನವನ್ನು ಕಳೆಯುವ ಉದ್ದೇಶದಿಂದ ಉಳಿದವರ ಜತೆ ಐವರು ಆಗಮಿಸಿದ್ದರು. ಈ ವೇಳೆಗಾಗಲೇ ಇವರ ಜತೆಯಿದ್ದ ಮಗುವೊಂದು ಆಟವಾಡುತ್ತಾ ನೀರಿಗೆ ಬಿದ್ದಿತ್ತು ಎನ್ನಲಾಗಿದೆ.

ಉತ್ತಮ ಶಿಕ್ಷಣ ಕೊಡಿಸುವುದು ದೇವರ ಕೆಲಸಕ್ಕೆ ಸಮ: ಸಚಿವ ಮಧು ಬಂಗಾರಪ್ಪ

ಇದೇ ವೇಳೆ ನಾದಿಯಾ ನೂರ್ ಅಹಮದ್ ಶೇಖ್, ನಬಿಲ್ ನೂರ್ ಅಹಮದ್ ಶೇಖ್, ಉಮರ್ ಸಿದ್ದಿಕ್ ಹಾಗೂ ಮಿಸ್ಬಾ ತಬಸುಮ್ ಕೂಡಾ ಮಗುವಿನ ರಕ್ಷಣೆಗಾಗಿ ನೀರಿಗಿಳಿದಿದ್ದರು. ಮಗುವನ್ನು ರಕ್ಷಣೆ ಮಾಡಿದರಾದರೂ  ನೀರಿಗಿಳಿದ ಉಳಿದವರನ್ನು ರಕ್ಷಣೆ ಮಾಡಲಾಗಲಿಲ್ಲ. ನೀರಿಗಿಳಿದ ಇತರರ ರಕ್ಷಣೆಗೆ ಯತ್ನಿಸುತ್ತಾ ಸಲೀಮ್ ಕಲೀಲ್ ರೆಹಮಾನ್ ಸಾವು ಕಂಡಿದ್ದಾರೆ. ಮೃತರ ಪೈಕಿ ನಾದಿಯಾ ನೂರ್ ಅಹಮದ್ ಶೇಖ್ ಎಂಬವರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು ಎಂಬ ಮಾಹಿತಿ ಮೃತ ದೇಹಗಳನ್ನುಶಿರಸಿ ಠಾಣಾ ಪೊಲೀಸರು  ಸಂಬಂಧಿಕರಿಗೆ ಒಪ್ಪಿಸಿದ್ದಾರೆ.

Uttara Kannada: ಶಿಕ್ಷಣ ಸಂಸ್ಥೆಗೆ ಜಾಗದ ಮಾಲೀಕರಿಂದ ತೊಂದರೆ?: ಆರೋಪಿಗಳ ಜತೆ ಪೊಲೀಸರು ಶಾಮೀಲು!

click me!