ಗ್ರೀನ್‌ ಝೋನ್‌ನಲ್ಲಿದ್ದ ದಾವಣಗೆರೆಯಲ್ಲಿ ಕೊರೋನಾಗೆ ಮೊದಲ ಬಲಿ

By Kannadaprabha NewsFirst Published May 2, 2020, 7:36 AM IST
Highlights

ಗ್ರೀನ್‌ ಝೋನ್‌ನಲ್ಲಿದ್ದ ದಾವಣಗೆರೆಯಲ್ಲಿ ಮಹಾಮಾರಿ ವೈರಸ್‌ಗೆ ವೃದ್ಧರೊಬ್ಬರು ಶುಕ್ರವಾರ ರಾತ್ರಿ ಬಲಿಯಾಗಿದ್ದಾರೆ. ಇಲ್ಲಿನ ಜಾಲಿ ನಗರದ 59 ವರ್ಷದ ಕೊರೋನಾ ಸೋಂಕಿತ ವ್ಯಕ್ತಿ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.

ದಾವಣಗೆರೆ(ಮೇ.02): ಗ್ರೀನ್‌ ಝೋನ್‌ನಲ್ಲಿದ್ದ ದಾವಣಗೆರೆಯಲ್ಲಿ ಮಹಾಮಾರಿ ವೈರಸ್‌ಗೆ ವೃದ್ಧರೊಬ್ಬರು ಶುಕ್ರವಾರ ರಾತ್ರಿ ಬಲಿಯಾಗಿದ್ದಾರೆ. ಇಲ್ಲಿನ ಜಾಲಿ ನಗರದ 59 ವರ್ಷದ ಕೊರೋನಾ ಸೋಂಕಿತ ವ್ಯಕ್ತಿ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.

ಪಿ-556 ಎಂಬ ಸೋಂಕಿತನಾದ ಈ ವೃದ್ಧನಿಂದ ಮಗ, ಮೂವರು ಸೊಸೆಯಂದಿರು, 1 ವರ್ಷದ ಮಗುವಿಗೂ ಸೋಂಕು ತಗುಲಿರುವ ಬಗ್ಗೆ ಬೆಳಿಗ್ಗೆಯಷ್ಟೇ ಜಿಲ್ಲಾಡಳಿತ ತಿಳಿಸಿತ್ತು.

ಮತ್ತೊಬ್ಬರಿಗೆ ಕೊರೋನಾ ಸೋಂಕು ದೃಢ: ಹುಬ್ಬಳ್ಳಿ ಅಕ್ಷರಶಃ ತಲ್ಲಣ

ವೃದ್ಧನಲ್ಲಿ ಸೋಂಕಿರುವುದು ಗುರುವಾರವಷ್ಟೇ ದೃಢಪಟ್ಟಿತ್ತು. ತಕ್ಷಣವೇ ಜಿಲ್ಲಾಸ್ಪತ್ರೆಯ ಐಸೋಲೇಷನ್‌ ವಾರ್ಡ್‌ನಲ್ಲಿ ವೆಂಟಿಲೇಟರ್‌ನಲ್ಲಿ ವೃದ್ಧನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಬೆಂಗಳೂರಿನ ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಜಿಲ್ಲೆಯ ತಜ್ಞ ವೈದ್ಯರ ತಂಡವೇ ಐಸೋಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ನೀಡುತ್ತಿತ್ತು.

ತೀವ್ರ ಅಸ್ವಸ್ಥಗೊಂಡಿದ್ದ ಪಿ.556 ಎಂಬ ವೃದ್ಧನಿಗೆ ಗುರುವಾರದಿಂದಲೇ ಬಿಪಿ ಲೋ ಆಗಿತ್ತು.ಆಸ್ಪತ್ರೆಗೆ ದಾಖಲಾದ ಕ್ಷಣದಿಂದಲೇ ಚಿಕಿತ್ಸೆ ನೀಡಲಾರಂಭಿಸಿದ್ದ ವೈದ್ಯರು ಬೆಂಗಳೂರಿನ ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ.

ಕೊರೋನಾ ಸೋಂಕಿಗೆ ದಾವಣಗೆರೆಯಲ್ಲಿ ಮೊದಲ ಬಲಿಯಾಗಿರುವುದು ಜನರನ್ನು ಬೆಚ್ಚಿ ಬೀಳಿಸಿದೆ. ಇದೇ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಮಗ, ಮೂವರು ಸೊಸೆಯಂದಿರುವ ಹಾಗೂ 1 ವರ್ಷದ ಮಗು ಸಹ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

click me!