ಹೋಂ ಕ್ವಾರೆಂಟೈನ್ ಉಲ್ಲಂಘಿಸಿದ್ರೆ FIR: ಸಿಎಂ ಕಟ್ಟುನಿಟ್ಟಿನ ಸೂಚನೆ

By Suvarna NewsFirst Published Jun 3, 2020, 12:19 PM IST
Highlights

ಬಿ. ಎಸ್‌. ಯಡಿಯೂರಪ್ಪ ಹೋಂ ಕ್ವಾರೆಂಟೈನ್‌ ಉಲ್ಲಂಘಿಸಿದವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ. 14 ದಿನಗಳ ಹೋಂ ಕ್ವಾರೆಂಟೈನ್‌ ಉಲ್ಲಂಘಿಸಿದವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ.

ಬೆಂಗಳೂರು(ಜೂ. 03): ರಾಜ್ಯದಲ್ಲಿ ಈಗಾಗಲೇ ಕೊರೋನಾ ತಾಂಡವ ಹೆಚ್ಚಾಗಿದ್ದು, ದಿನಂಪತ್ರಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಬೆಚ್ಚಿ ಬೀಳಿಸುವಂತಿದೆ. ಮಹಾರಾಷ್ಟ್ರ ಸೋಂಕಿನ ಕಾಟಕ್ಕೆ ರಾಜ್ಯ ತತ್ತರಿಸಿದೆ.

ಈ ಬೆನ್ನಲ್ಲೇ ಸಿಎಂ ಬಿ. ಎಸ್‌. ಯಡಿಯೂರಪ್ಪ ಹೋಂ ಕ್ವಾರೆಂಟೈನ್‌ ಉಲ್ಲಂಘಿಸಿದವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ. 14 ದಿನಗಳ ಹೋಂ ಕ್ವಾರೆಂಟೈನ್‌ ಉಲ್ಲಂಘಿಸಿದವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ.

ಕೊರೋನಾ ಆತಂಕ: ಮುಂಬೈ-ಗದಗ ರೈಲು ಮೂಲಕ ವಿಜಯಪುರ ಜಿಲ್ಲೆಗೆ 210 ಜನ ಆಗಮನ

ಲಾಕ್‌ಡೌನ್ ಸಡಿಲಿಕೆಯ ಬೆನ್ನಲ್ಲೇ ಅತೀ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಮುಂಜಾಗೃತಾ ಕ್ರಮವಾಗಿ ಈ ರೀತಿ ಸೂಚನೆ ನೀಡಲಾಗಿದೆ. ಅಂತಾರಾಜ್ಯ ಸಾರಿಗೆಯೂ ಆರಂಭವಾಗಿ ಇನ್ನಷ್ಟು ತೊಂದರೆ ಎದುರಾಗಿದೆ.

ಅನ್‌ಲಾಕ್‌ನ ನಂತರ ಮಹಾರಾಷ್ಟ್ರದಿಂದ ಬರುತ್ತಿರುವವರ ಸಂಖ್ಯೆ ಏರುತ್ತಲೇ ಇದ್ದು, ಕೊರೋನಾ ನಿಯಂತ್ರಣಕ್ಕಾಗಿ ಸಿಎಂ ಈ ರೀತಿಯ ಸೂಚನೆ ಕೊಟ್ಟಿದ್ದಾರೆ. ಹಾಗೆಯೇ ಪ್ರಕರಣಗಳು ಹೆಚ್ಚಿರುವ ಉಡುಪಿ, ರಾಯಚೂರು, ಕಲಬುರಗಿ, ವಿಜಯಪುರ, ಯಾದಗಿರಿ, ಬೆಳಗಾವಿಯ ಬಗ್ಗೆಯೂ ಸಿಎಂ ಹೆಚ್ಚಿನ ಒತ್ತು ನೀಡಿದ್ದಾರೆ. ರಾಜ್ಯಾದ್ಯಂತ ಕ್ವಾರೆಂಟೈನ್‌ನಲ್ಲಿರುವವರ ಬಗ್ಗೆ ವಿಶೇಷ ಗಮನ ನೀಡಬೇಕೆಂದು ಸಿಎಂ ಹೇಳಿದ್ದಾರೆ.

ತಾಲೂಕು ಕೇಂದ್ರಗಳಲ್ಲಿರುವಂತೆ ಡಿಸಿ, ಎಸ್ಪಿಗಳಿಗೆ ಸೂಚನೆ:

ಅನ್‌ಲಾಕ್‌ನ ನಂತರ ಕ್ವಾರೆಂಟೈನ್ ರೀತಿಗಳು ಬದಲಾಗಲಿವೆ. ಹೋಂ ಕ್ವಾರೆಂಟೈನ್‌ನ ಮೇಲೆ ನಿಗಾ ವಹಿಸಲು ಹೆಚ್ಚಿನ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಸರ್ಕಾರಿ ಕ್ವಾರೆಂಟೈನ್‌ ವ್ಯವಸ್ಥೆ ಮುಂದುವರಿಸುವುದು ಕಷ್ಟವಾಗಿರುವುದರಿಂದ ಹೋಂ ಕ್ವಾರೆಂಟೈನ್ ಮಾಡಿ ಅದರ ಬಗ್ಗೆ ನಿಗಾ ವಹಿಸಲಾಗುತ್ತದೆ. ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೂ ತಾಲೂಕು ಮುಖ್ಯ ಕಷೇರಿಯಲ್ಲಿದ್ದಿ, ಹೋಂ ಕ್ವಾರೆಂಟೈನ್ ಮೇಲೆ ನಿಗಾ ಇಡುವಂತೆ ಸೂಚಿಸಿದ್ದಾರೆ.

click me!