
ಬೆಂಗಳೂರು (ಜೂ.22): ಬೈಕ್ ಟ್ಯಾಕ್ಸಿ ಚಾಲಕರು, Ola, Uber, Rapido ಆಗ್ರಗೆಟರ್ ಕಂಪನಿಗಳು ಮತ್ತು ಉದ್ಯಮಿ ಮೋಹನ್ ದಾಸ್ ಪೈ ಅವರ ಟ್ವಿಟ್ಟರ್ ಖಾತಾಯ ಬರಹದ ಪ್ರೇರೆಪಣೆ, ಕುಮ್ಮಕ್ಕುನಿಂದ ನಿಂದ ಬೈಕ್ ಟ್ಯಾಕ್ಸಿ ಚಾಲಕರು ವಿಧಾನ ಸೌದದ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಇದರಿಂದ ನ್ಯಾಯಾಲಯ ಆದೇಶ ಮತ್ತು ಕಾನೂನು ಉಲ್ಲಂಘನೆ ಆಗಿದ್ದು, ಮೋಹನ್‌ದಾಸ್ ಸೇರಿದಂತೆ ಬೈಕ್ ಟ್ಯಾಕ್ಸಿ ಚಾಲಕರ ವಿರುದ್ಧ ಕ್ರಮ ಜರುಗಿಸುವಂತೆ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಅಧ್ಯಕ್ಷ ನಟರಾಜ ಶರ್ಮಾ ದೂರು ನೀಡಿದ್ದಾರೆ. ಜೊತೆಗೆ, ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡಿದ ಬೈಕ್ ಟ್ಯಾಕ್ಸಿ ಚಾಲಕರ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ.
ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಅಧ್ಯಕ್ಷ ನಟರಾಜ ಶರ್ಮಾ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ' ವಿಧಾನ ಸೌದದ ಮುಂದೆ ಶನಿವಾರ ನ್ಯಾಯಾಲಯದ ಆದೇಶದ ವಿರುದ್ಧವಾಗಿ, ಪೊಲೀಸ್ ಅನುಮತಿ ಇಲ್ಲದೇ, ಬೈಕ್ ಟ್ಯಾಕ್ಸಿ ಚಾಲಕರು ಪ್ರತಿಭಟನೆ ನಡೆಸಿದ್ದು, ಇದಕ್ಕೆ ಪ್ರೇರೇಪಣೆ ನೀಡಿದ ಉದ್ಯಮಿ ಮೋಹನ್‌ದಾಸ್ ಪೈ ಮತ್ತು ಅಧಿಕೃತ ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು. ಬೈಕ್ ಟ್ಯಾಕ್ಸಿ ಚಾಲಕರು ಕಾನೂನು ಬಾಹೀರವಾಗಿ, ಪೊಲೀಸ್ ಅನುಮತಿ ಇಲ್ಲದೇ ಪ್ರತಿಭಟನೆ ನಡೆಸಿರುತ್ತಾರೆ.
ಮಾನ್ಯ ಉಚ್ಚ ನ್ಯಾಯಾಲಯ ರಾಜ್ಯದಲ್ಲಿ ಸಂಚರಿಸುತ್ತಿರುವ ಬೈಕ್ ಟ್ಯಾಕ್ಸಿ ಸೇವೆ ಕಾನೂನು ಬಾಹಿರವೆಂದು ಆದೇಶ ನೀಡಿ, ಕಳೆದ 16 ನೆ ತಾರೀಕಿನಿಂದ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ನಿರ್ಬಂಧ ಹೇರಿದೆ. ಈ ಸೇವೆಯನ್ನು ಸ್ಥಗಿತ ಗೊಳಿಸಲು ಬೇಕಾದ ಕ್ರಮವನ್ನು ಸಾರಿಗೆ ಇಲಾಖೆ ತೆಗೆದುಕೊಳ್ಳಲು ಸೂಚಿಸಿದೆ. ಆದರೆ, ಬೈಕ್ ಟ್ಯಾಕ್ಸಿ ಚಾಲಕರು, Ola, Uber, Rapido ಆಗ್ರಗೆಟರ್ ಕಂಪನಿಗಳು ಮತ್ತು ಉದ್ಯಮಿ ಮೋಹನ್ ದಾಸ್ ಪೈ ಅವರ ಟ್ವಿಟ್ಟರ್ ಖಾತೆಯ ಬರಹದ ಪ್ರೇರೆಪಣೆ, ಕುಮ್ಮಕ್ಕುನಿಂದ ನಿಂದ ಬೈಕ್ ಟ್ಯಾಕ್ಸಿ ಚಾಲಕರು ಮತ್ತು ಬೈಕ್ ಟ್ಯಾಕ್ಸಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನ್ಯಾಯಾಲಯದ ಆದೇಶವನ್ನು ಲೆಕ್ಕಿಸದೆ ವಿಧಾನ ಸೌದದ ಮುಂದೆ ಹಾಗೂ ಇತರ ಜಾಗಗಳಲ್ಲಿ ಪ್ರತಿಭಟನೆ ನಡೆಸಿರುತ್ತಾರೆ. ಇದು ಕಾನೂನು ಬಾಹಿರ ಮತ್ತು 'ಫ್ರೀಡಂ ಪಾರ್ಕ್ ಹೊರತು ಪಡಿಸಿ ನಗರದ ಯಾವುದೇ ಜಾಗದಲ್ಲಿ ಪ್ರತಿಭಟನೆಗೆ ಅವಕಾಶ ನೀಡದಂತೆ ಉಚ್ಚ ನ್ಯಾಯಾಲಯ ನಿರ್ದೇಶಿಸಿರುವ ಅದೇಶದ ಉಲ್ಲಂಘನೆ ಆಗಿರುತ್ತದೆ. ಅದ್ದರಿಂದ ನ್ಯಾಯಾಲಯ ಆದೇಶ ಮತ್ತು ಪೊಲೀಸ್ ಅನುಮತಿ ಇಲ್ಲದೇ ನಿರ್ಬಂಧ ಸ್ಥಳದಲ್ಲಿ ಪ್ರತಿಭಟನೆ ಮಾಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದೂರು ನೀಡಿದ್ದರು.
ಇದರ ಬೆನ್ನಲ್ಲಿಯೇ ವಿಧಾನಸೌಧ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪುಟ್ಟಸ್ವಾಮಯ್ಯ ಅವರು ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡಿದವರ ವಿರುದ್ಧ ಸುಮೊಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ಬೈಕ್ ಬ್ಯಾಕ್ಸಿಗಳಿಗೆ ನಿಯಮಗಳನ್ನು ರಚಿಸುವಂತೆ ಹಾಗೂ ಬೈಕ್ ಬ್ಯಾಕ್ಸಿಗಳನ್ನು ಮರಳಿ ತರುವಂತೆ ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜೂ.21ರ ಶನಿವಾರ ವಿಧಾನ ಸೌಧ ಮುಂಭಾಗದಲ್ಲಿ ಕರ್ನಾಟಕಾದ್ಯಂತ 5000 ಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿ ರ್ಯಾಲಿಯಲ್ಲಿ ಪಾಲ್ಗೊಳ್ಳಬೇಕು. ಬೆಂಗಳೂರು, ಮೈಸೂರು, ಹಾಸನ, ಮಂಡ್ಯ, ತುಮಕೂರು, ಶಿವಮೊಗ್ಗ, ರಾಮನಗರ ಮತ್ತು ಕನಕಪುರದಿಂದ ಪುರುಷರು ಮತ್ತು ಮಹಿಳೆಯರು ಇಬ್ಬರೂ ಸವಾರರು ಭಾಗವಹಿಸಲಿದ್ದಾರೆ ಎಂದು ಸೋಷಿಯಲ್ ಮೀಡಿಯಾ (ವಾಟ್ಸ್‌ಆಪ್)ನಲ್ಲಿ ಮಾಹಿತಿ ಪಡೆಯಲಾಗಿತ್ತು.
ಈ ಹಿನ್ನೆಲೆಯಲ್ಲಿ ಮುಂಜಾಗ್ರತವಾಗಿ ನಾನು ಮತ್ತು ನನ್ನ ಠಾಣಾ ಸಿಬ್ಬಂದಿಯವರೊಂದಿಗೆ ವಿಧಾನ ಸೌಧ ಅಂಬೇಡ್ಕರ್ ಪ್ರತಿಮೆ ಬಳಿ ಬಂದೋಬಸ್ತ್ ಮಾಡಿಕೊಂಡಿದ್ದ ಸಮಯದಲ್ಲಿ ಮಧ್ಯಾಹ್ನ ಸುಮಾರು 2.40 ಗಂಟೆ ಸಮಯದಲ್ಲಿ ಸುಮಾರು 15 ರಿಂದ 20 ಜನ ಏಕಾಏಕಿ ಕಾಲ್ನಡಿಗೆಯಲ್ಲಿ ಬಂದು ವಿಧಾನ ಸೌಧ ಮುಂಭಾಗ ಕೆಂಪೇಗೌಡ ಪ್ರತಿಮೆ ಹತ್ತಿರ ಅಕ್ರಮಕೂಟ ಸೇರಿಕೊಂಡು ತಮ್ಮ ಜೇಬಲ್ಲಿರುವ ಕನ್ನಡಭಾವುಟ ಮಾದರಿಯಲ್ಲಿರುವ ಶಲ್ಯವನ್ನು ಧರಿಸಿಕೊಂಡು ಯಾವುದೇ ಮಾಹಿತಿ ನೀಡದೆ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಸಭೆ, ಮುಷ್ಕರ, ಪ್ರತಿಭಟನೆ ಮಾಡಿದ್ದಾರೆ.
ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡಬಾರದೆಂದು ಹೈಕೋರ್ಟ್ ಆದೇಶ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಆದೇಶವಿದೆ. ಯಾವುದೇ ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಮಾಡಬೇಕೆಂದು ಆದೇಶವಿದ್ದರೂ ಯಾವುದೇ ಮಾಹಿತಿ ನೀಡದೆ ಬೈಕ್ ಟ್ಯಾಕ್ಸಿ ಚಾಲಕರು ಮಾಧ್ಯಮದವರನ್ನು ಬರಮಾಡಿಕೊಂಡು ಪತ್ರಿಕಾ ಗೋಷ್ಟಿ ನಡೆಸುತ್ತಿದ್ದರು. ಆಗ ಅವರಿಗೆ ವಿಧಾನ ಸೌಧ ಆವರಣದಲ್ಲಿ ಯಾವುದೇ ಪ್ರತಿಭಟನೆ ಹಾಗೂ ಗುಂಪುಸೇರ ಬಾರದೆಂದು ಹೇಳಿದ ಮೇರೆಗೂ ಅದೇ ರೀತಿ ಅವರು ಪ್ರತಿಭಟನೆಯಲ್ಲಿ ತೊಡಗಿದ್ದರಿಂದ ಅವರನ್ನು ವಶಕ್ಕೆ ಪಡೆದು ಅವರ ಹೆಸರು ಮತ್ತು ವಿಳಾಸ ತಿಳಿಸಿದ್ದಾರೆ. ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ