ವಿಶ್ವ ಹಿಂದೂ ಪರಿಷತ್‌ನ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹೆಣ್ಣು ಸಿಗದ ಹಿಂದು ಯುವಕರು ಅನ್ಯಧರ್ಮದ ಯುವತಿಯರನ್ನು ಮದುವೆಯಾಗುವಂತೆ ಕರೆ ನೀಡಿದ್ದರು. ಈ ಹಿನ್ನೆಲೆ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಉಳ್ಳಾಲ (ಮಾ.18): ವಿಶ್ವ ಹಿಂದೂ ಪರಿಷತ್‌ನಿಂದ ಉಳ್ಳಾಲ ತಾಲೂಕು ಕುತ್ತಾರಿನ ಕೊರಗಜ್ಜನ ಆದಿಕ್ಷೇತ್ರಕ್ಕೆ ನಡೆದಿದ್ದ ಬೃಹತ್ ಪಾದಯಾತ್ರೆ ಸಮಾರೋಪದ ಭಾಷಣದಲ್ಲಿ ಹೆಣ್ಣು ಸಿಗದ ಹಿಂದು ಯುವಕರು ಅನ್ಯಧರ್ಮದ ಯುವತಿಯರನ್ನು ಮದುವೆಯಾಗುವಂತೆ ಕರೆ ನೀಡಿದ್ದ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸೋಮವಾರ ಎಫ್ಐಆರ್ ದಾಖಲಾಗಿದೆ. ಯುವ ಕಾಂಗ್ರೆಸ್ ಉಳ್ಳಾಲ ನಗರಾಧ್ಯಕ್ಷ ಅಬ್ದುಲ್ ರಶೀದ್ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.
ಧರ್ಮಗಳೊಳಗೆ ದ್ವೇಷ ಬಿತ್ತುವ ಮಾತುಗಳನ್ನಾಡಿರುವುದಾಗಿ ಸೂಲಿಬೆಲೆ ಅವರು ಅಂದಿನ ಭಾಷಣದಲ್ಲಿ ‘ಎಲ್ಲಿಯವರೆಗೆ ಲವ್ ಜಿಹಾದ್ ಬಗ್ಗೆ ನಾವು ಮಾತಾನಾಡುತ್ತ ಇರೋಣ?, ನಮ್ಮ ಗಂಡು ಮಕ್ಕಳು ಹುಡುಗಿ ಸಿಕ್ಕಿಲ್ಲಂತಾ ಎಷ್ಟು ದಿನ ಹೇಳುತ್ತಿರಾ, ಸ್ವಲ್ಪ ಬೇರೆಯವರನ್ನು ನೋಡ್ರಪ್ಪ, ಪಕ್ಕದ ಸಮಾಜದಲ್ಲೂ ಸಮಸ್ಯೆ ಇದೆ ಅಲ್ವ, ಅವರಿಗೆ ಧೈರ್ಯ ತುಂಬೋ ಕೆಲಸ ಮಾಡಿ’ ಎಂದು ಹಿಂದೂ ಸಮಾಜದ ಯುವಕರಿಗೆ ಕರೆ ನೀಡಿದ್ದರು.
ಅವರು ಮಾಡಿದ್ರೆ ಪ್ರೀತಿ, ನಾವು ಮಾಡಿದ್ರೆ ಸಂಘರ್ಷ ಹೇಗಾಗುತ್ತೆ?
ಲವ್ ಜಿಹಾದ್ ಆಗ್ತಿದೆ ಅಂತ ಹೇಳಿದರೆ, ಯುವತಿ ಪ್ರೀತಿಯಿಂದ ಹೋಗೋದು, ಸಂಘರ್ಷ ಮಾಡಬಾರದು ಎಂದು ಇಷ್ಟೂ ದಿನ ಹೇಳುತ್ತಿದ್ದರು. ಈಗ ನಮ್ಮ ಹುಡುಗರೂ ಅದೇ ಥರ ಬೇರೆ ಯುವತಿಯರನ್ನು ಪ್ರೀತಿ ಮಾಡಿದರೆ ಸಂಘರ್ಷ ಯಾಕೆ ಆಗುತ್ತೆ ಎಂದು ಚಕ್ರವರ್ತಿ ಸೂಲಿಬೆಲೆ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Karnataka Assembly: RSS ನಿಂದ ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಳ, ಸಿಎಂ ಹೇಳಿಕೆಗೆ ವಿಧಾನಸಭೆ ರಣರಂಗ! ನಡೆದಿದ್ದೇನು?
ಹುಡುಗಿ ಸಿಗದ ಹಿಂದೂ ಯುವಕರು ಅನ್ಯಧರ್ಮೀಯ ಯುವತಿಯರನ್ನು ಪ್ರೀತಿಸಿ ವಿವಾಹವಾಗಿ ಎಂಬ ತಮ್ಮ ಹೇಳಿಕೆಯ ಕುರಿತು ಚಕ್ರವರ್ತಿ ಸೂಲಿಬೆಲೆ ಸಮರ್ಥಿಸಿಕೊಂಡಿದ್ದಾರೆ.
ನಾನು ಮಾಡಿದ್ದು ಹೇಟ್ ಸ್ಪೀಚ್ ಅಲ್ಲ, ಇದು ಸ್ಪೀಚ್ ಆಫ್ ಲವ್
ಕೊರಗಜ್ಜನ ಆದಿಕ್ಷೇತ್ರಕ್ಕೆ ನಡೆ ಕಾರ್ಯಕ್ರಮದಲ್ಲಿ ತಮ್ಮ ಹೇಳಿಕೆಯ ಕುರಿತು ಸ್ಪಷ್ಟೀಕರಣ ನೀಡಿದ ಅವರು, ನಾನು ಹೇಳಿದ್ದು ಸಂಘರ್ಷದ ಮಾತು ಅಲ್ಲವೇ ಅಲ್ಲ. ನಾನು ಮಾಡಿದ್ದು ಹೇಟ್ ಸ್ಪೀಚ್ ಅಲ್ಲ, ಇದು ಸ್ಪೀಚ್ ಆಫ್ ಲವ್. ಎಂದಿದ್ದಾರೆ.
ಇದನ್ನೂ ಓದಿ: ಅನ್ಯಧರ್ಮೀಯ ಯುವತಿಯರ ವಿವಾಹವಾಗಿ ಎಂದ ಸೂಲಿಬೆಲೆ ಹೇಳಿಕೆಗೆ ವ್ಯಾಪಕ ವಿರೋಧ
ಯಾರಾದರೂ ಹಿಂದು ಹುಡುಗಿ ಪ್ರೀತಿಸಿ ಅನ್ಯ ಧರ್ಮೀಯರನ್ನು ವಿವಾಹವಾದರೆ ನಮ್ಮ ವಿರೋಧ ಇಲ್ಲ. ಆದರೆ ಪ್ರೀತಿಸುವಂತೆ ಮಾಡಿದರೆ, ಮೋಸ ಮಾಡಿದರೆ ಹೋರಾಟ ಇದ್ದೇ ಇರುತ್ತದೆ ಎಂದು ಹೇಳಿದ ಚಕ್ರವರ್ತಿ ಸೂಲಿಬೆಲೆ, ಅದೇ ರೀತಿ ಹಿಂದು ಯುವಕರು ಮುಸ್ಲಿಂ ಯುವತಿಯನ್ನು ಪ್ರೀತಿಸಿ ಮದುವೆ ಆದಾಗ ನಾವು ಎದುರಿಗೆ ನಿಲ್ತೀವಿ, ಹೊಸ ಹೋರಾಟಕ್ಕೆ ನಾಂದಿ ಹಾಡ್ತೇವೆ ಎಂದಿದ್ದಾರೆ.