
ಬೆಂಗಳೂರು (ಜು.19): ಬೆಂಗಳೂರು-ಮೈಸೂರು ಹೆದ್ದಾರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ಬಸ್ ಚಾಲನೆ ಮಾಡುವ ಚಾಲಕರಿಗೆ ₹500 ರಿಂದ ₹2 ಸಾವಿರವರೆಗೆ ದಂಡ ವಿಧಿಸುವುದಾಗಿ ಕೆಎಸ್ಸಾರ್ಟಿಸಿ ತಿಳಿಸಿದೆ.
ಬೆಂಗಳೂರು-ಮೈಸೂರು ಹೆದ್ದಾರಿ(Mysuru Bengaluru xpressway)ನಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಪತ್ತೆಗಾಗಿ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ(Intelligent Traffic Management System) ಅಳವಡಿಸಲಾಗಿದೆ. ಅದರಂತೆ ಹೆದ್ದಾರಿಯುದ್ದಕ್ಕೂ ನಿಯಮಿತವಾಗಿ ಉನ್ನತ ತಾಂತ್ರಿಕ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾದಲ್ಲಿ ಕೆಎಸ್ಸಾರ್ಟಿಸಿ ಬಸ್(ksrtc bus)ಗಳು ನಿಯಮ ಉಲ್ಲಂಘಿಸುವುದು ಪತ್ತೆಯಾಗುತ್ತಿದ್ದು, ಸಂಚಾರ ನಿಯಮ ಉಲ್ಲಂಘಿಸುವ ಬಸ್‌ಗಳ ಚಾಲಕರಿಗೆ ದಂಡ ವಿಧಿಸುವುದಾಗಿ ತಿಳಿಸಲಾಗಿದೆ.
ಮುಂದುವರಿದ ಬೆಂ-ಮೈ ಎಕ್ಸ್‌ಪ್ರೆಸ್ ಹೈವೇ ಅಪಘಾತ; ಸಿನಿಮಾ ಸ್ಟೈಲ್‌ನಲ್ಲಿ ಕೆರೆಗೆ ಹಾರಿದ ಕಾರು
ಅತಿವೇಗದ ಚಾಲನೆಗೆ ₹2 ಸಾವಿರ, ಅಪಾಯಕಾರಿ ಚಾಲನೆ, ವಾಹನ ಚಾಲನೆ ಸಮಯದಲ್ಲಿ ಮೊಬೈಲ್ ಬಳಕೆ, ನಿಲುಗಡೆ ರಹಿತ ಸ್ಥಳದಲ್ಲಿ ಬಸ್ ನಿಲ್ಲಿಸುವುದು, ಸಂಚಾರಿ ಪೊಲೀಸರ ಆದೇಶ ಪಾಲಿಸದಿರುವುದು, ನಿಶಬ್ದ ವಲಯದಲ್ಲಿ ಹಾರ್ನ್ ಮಾಡುವುದು, ತುರ್ತು ವಾಹನಗಳ ಸಂಚಾರಕ್ಕ ಸ್ಥಳಾವಕಾಶ ನೀಡದಿರುವುದಕ್ಕೆ ತಲಾ ₹1 ಸಾವಿರ ಹಾಗೂ ವಾಹನ ಚಾಲನೆ ಮಾಡುವಾಗ ಏಕಾಏಕಿ ಪಥ ಬದಲಾವಣೆ, ಏಕಮುಖ ರಸ್ತೆಯಲ್ಲಿ ವಾಹನ ಚಾಲನೆ, ಟ್ರಾಫಿಕ್ ಸಿಗ್ನಲ್ ಜಂಪ್‌ಗೆ ತಲಾ ₹500 ದಂಡ ವಿಧಿಸಲಾಗುವುದು ಎಂದು ನಿಗಮ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ