
ಬೆಂಗಳೂರು: ಮರ್ಯದಾ ಹ*ತ್ಯೆ ಭೀತಿಯಿಂದಾಗಿ ಯುವತಿ ತಂದೆಯಿಂದ ರಕ್ಷಣೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಯುವತಿಯ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ರಕ್ಷಣೆ ನೀಡುವಂತೆ ವೈಟ್ ಫೀಲ್ಡ್ ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಕಾಜಲ್ ರಾಜಪುರೋಹಿತ್ ನ್ಯಾಯಾಲಯದ ಮೊರೆ ಹೋದ ಯುವತಿ. ಕಾಜಲ್ ತಂದೆ ಅಶೋಕ್ ರಾಜಪುರೋಹಿತ್ ಮಗಳ ಇಚ್ಛೆಗೆ ವಿರುದ್ಧವಾಗಿ ಮದುವೆ ನಿಶ್ಚಯ ಮಾಡಿದ್ದರು. ಪುತ್ರಿ ಕಾಜಲ್ ವಿರೋಧದ ನಡುವೆಯೂ ರಾಜಸ್ಥಾನ ಮೂಲದ ಡಾ.ಯಶ್ ಪಾಲ್ ಜೊತೆ ವಿವಾಹಕ್ಕೆ ಅಶೋಕ್ ರಾಜಪುರೋಹಿತ್ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.
ಇದನ್ನೂ ಓದಿ: ಬೇರೆ ಜಾತಿ ಎಂದು ಪ್ರೇಮಿಯ ಹೊಡೆದು ಕೊಂದ ಮನೆಯವರು: ಆತನ ಶವವನ್ನೇ ವರಿಸಿದ ಯುವತಿ
ತನ್ನ ಅನುಪಸ್ಥಿತಿಯಲ್ಲಿ ಮದುವೆ ನಿಶ್ಚಯ ಮಾಡಲಾಗಿದೆ ಎಂದು ಕಾಜಲ್ ಆರೋಪಿಸಿದ್ದು, ಇದೀಗ ತಂದೆಯಿಂದ ಜೀವಭಯದ ಹಿನ್ನೆಲೆ ರಕ್ಷಣೆ ಕೋರಿ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು. ಸದ್ಯ ಕಾಜಲ್ ಬೆಂಗಳೂರು ಹೊರವಲಯದ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದಾರೆ. ಕಾಜಲ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಸೂಕ್ತ ಭದ್ರತೆ ನೀಡುವಂತೆ ನಿರ್ದೇಶಿದೆ.
ಇದನ್ನೂ ಓದಿ: ಮನೆಬಿಟ್ಟು ಓಡಿ ಹೋದ 21ರ ಹರೆಯದ ತರುಣ: ಅಮ್ಮನ ವಯಸ್ಸಿನ ಮಹಿಳೆ ಜೊತೆ ಮದುವೆ: ಆಘಾತದಲ್ಲಿ ಕುಟುಂಬ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ