ರೈತರಿಗೆ ಗುಡ್ ನ್ಯೂಸ್: ಮೊಬೈಲ್ ಆ್ಯಪ್ ಮೂಲಕ ಮನೆಯಲ್ಲೇ ಕುಳಿತು ರಸಗೊಬ್ಬರ ಬುಕ್ಕಿಂಗ್ ಮಾಡಿ!

Published : Nov 20, 2026, 07:06 PM IST
FSAS mobile app fertilizer booking

ಸಾರಾಂಶ

ಭಾರತ ಸರ್ಕಾರವು ರೈತರಿಗಾಗಿ ‘ಫರ್ಟಿಲೈಸರ್ ಸೇಲ್ಸ್ ಅಪ್ಲಿಕೇಷನ್ ಸಿಸ್ಟಮ್’ (FSAS) ಪರಿಚಯಿಸಿದೆ. ಇದರಿಂದ ರೈತರು ಮನೆಯಲ್ಲೇ ಕುಳಿತು ಸ್ಮಾರ್ಟ್‌ಫೋನ್ ಮೂಲಕ ರಸಗೊಬ್ಬರ ಬುಕ್ ಮಾಡಬಹುದು. ಇದು ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ತರಲಿದೆ.

ಬೆಂಗಳೂರು (ನ.20): ರೈತರು ಇನ್ನು ಮುಂದೆ ರಸಗೊಬ್ಬರಕ್ಕಾಗಿ ಅಲೆದಾಡುವ ಅಥವಾ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಅನುದಾನಿತ ರಸಗೊಬ್ಬರಗಳನ್ನು ಸುಲಭವಾಗಿ ಹಾಗೂ ಸಕಾಲದಲ್ಲಿ ಖರೀದಿಸಲು ಅನುಕೂಲವಾಗುವಂತೆ ಭಾರತ ಸರ್ಕಾರವು ‘ಫರ್ಟಿಲೈಸರ್ ಸೇಲ್ಸ್ ಅಪ್ಲಿಕೇಷನ್ ಸಿಸ್ಟಮ್’ (FSAS) ಎಂಬ ರಾಷ್ಟ್ರೀಯ ಮಟ್ಟದ ನೂತನ ಡಿಜಿಟಲ್ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ.

ಈ ನೂತನ ವ್ಯವಸ್ಥೆಯಡಿ ರೈತರು ತಮ್ಮ ಸ್ಮಾರ್ಟ್‌ಫೋನ್ ಮೂಲಕವೇ ಮನೆಯಲ್ಲೇ ಕುಳಿತು ರಸಗೊಬ್ಬರದ ಅಗತ್ಯವನ್ನು ಮುಂಗಡವಾಗಿ ದಾಖಲಿಸಿ, ಹತ್ತಿರದ ಮಾರಾಟ ಕೇಂದ್ರದಿಂದ ಗೊಬ್ಬರವನ್ನು ಬುಕ್ ಮಾಡಿಕೊಳ್ಳಬಹುದಾಗಿದೆ. ಇದರಿಂದ ರೈತರ ಅಮೂಲ್ಯ ಸಮಯ ಮತ್ತು ಶ್ರಮ ಉಳಿತಾಯವಾಗುವುದಲ್ಲದೆ, ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ಹಾಗೂ ಸುಗಮತೆ ಹೆಚ್ಚಲಿದೆ ಎಂದು ಕೃಷಿ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಮೊಬೈಲ್‌ನಲ್ಲೇ ರಸಗೊಬ್ಬರ ಬುಕ್ ಮಾಡಿ

ಈ ವ್ಯವಸ್ಥೆಯಡಿ ರೈತರು ತಮ್ಮ ಸ್ಮಾರ್ಟ್‌ಫೋನ್ ಮೂಲಕ ರಸಗೊಬ್ಬರದ ಅಗತ್ಯವನ್ನು ಮುಂಗಡವಾಗಿ ದಾಖಲಿಸಿ, ಹತ್ತಿರದ ರಸಗೊಬ್ಬರ ಮಾರಾಟ ಕೇಂದ್ರದಿಂದ ಗೊಬ್ಬರವನ್ನು ಬುಕ್ ಮಾಡಿಕೊಳ್ಳಬಹುದು. ಇದರಿಂದ ರೈತರ ಸಮಯ ಮತ್ತು ಶ್ರಮ ಉಳಿತಾಯವಾಗುವುದರ ಜೊತೆಗೆ ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ಹಾಗೂ ಸುಗಮತೆ ಹೆಚ್ಚಲಿದ್ದು, ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆಯಲು ರಸಗೊಬ್ಬರ ಬುಕ್ಕಿಂಗ್‌ಗಾಗಿ ರೈತರು ಮೊದಲು FSAS ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ಆಧಾರ್ ಸಂಖ್ಯೆ ಮತ್ತು OTP ಆಧಾರಿತ e-KYC ಮೂಲಕ ದೃಢೀಕರಣ ಮಾಡಿಕೊಳ್ಳಬೇಕು.

ನಂತರ FRUITS FID ಅಥವಾ AgriStack FID ಸಂಖ್ಯೆಯನ್ನು ನಮೂದಿಸಿ ಜಮೀನಿನ ವಿವರ ಹಾಗೂ ಬೆಳೆ ಮಾಹಿತಿಯನ್ನು ದಾಖಲಿಸಬೇಕು. ಜಮೀನಿನ ವಿಸ್ತೀರ್ಣ ಮತ್ತು ಬೆಳೆಯ ಆಧಾರದ ಮೇಲೆ ವ್ಯವಸ್ಥೆಯು ರಸಗೊಬ್ಬರದ ಶಿಫಾರಸು ಪ್ರಮಾಣವನ್ನು ಸೂಚಿಸುತ್ತದೆ. ರೈತರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಪ್ರಮಾಣವನ್ನು ಆಯ್ಕೆ ಮಾಡಿಕೊಂಡು ಹತ್ತಿರದ ಮಾರಾಟ ಕೇಂದ್ರದಲ್ಲಿ ಬುಕ್ಕಿಂಗ್ ಮಾಡಬಹುದು. ಬುಕ್ಕಿಂಗ್ ದೃಢೀಕರಣದ ಬಳಿಕ ರೈತರಿಗೆ ಟೋಕನ್ ಸಂಖ್ಯೆ ಹಾಗೂ ಕ್ಯೂಆರ್ ಕೋಡ್ ಲಭ್ಯವಾಗಲಿದ್ದು, ಅದನ್ನು ಆಯ್ಕೆ ಮಾಡಿದ ರಸಗೊಬ್ಬರ ಮಾರಾಟ ಕೇಂದ್ರದಲ್ಲಿ ತೋರಿಸಿ 3 ದಿನಗಳೊಳಗೆ ಗೊಬ್ಬರ ಪಡೆಯಬಹುದು.

ರಸಗೊಬ್ಬರ ಬುಕ್ಕಿಂಗ್‌ಗೆ ಬೇಕಾಗುವ ಅಗತ್ಯ ದಾಖಲೆಗಳು:

ರಸಗೊಬ್ಬರ ಬುಕ್ಕಿಂಗ್‌ಗೆ ಆಧಾರ್ ಸಂಖ್ಯೆ, ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ, ಕರ್ನಾಟಕ ಸರ್ಕಾರದ FRUITS FID ಅಥವಾ ಕೇಂದ್ರ ಸರ್ಕಾರದ AgriStack FID ಸಂಖ್ಯೆ, ಸರ್ವೆ ಸಂಖ್ಯೆಯೊಂದಿಗೆ ಜಮೀನಿನ ವಿವರ ಹಾಗೂ ಬೆಳೆ ವಿವರ ಅಗತ್ಯವಿರುತ್ತದೆ. FRUITS FID ಅಥವಾ AgriStack FID ಸಂಖ್ಯೆ ಹೊಂದಿರದ ರೈತರು ತಮ್ಮ ಜಮೀನಿನ ವಿವರ, ಆಧಾರ್ ಮತ್ತು ಬ್ಯಾಂಕ್ ಖಾತೆಯ ವಿವರಗಳೊಂದಿಗೆ ಹತ್ತಿರದ ಕೃಷಿ, ತೋಟಗಾರಿಕೆ ಅಥವಾ ರೇಷ್ಮೆ ಇಲಾಖೆ ಕಚೇರಿಯನ್ನು ಸಂಪರ್ಕಿಸಿ FID ಸಂಖ್ಯೆಯನ್ನು ಪಡೆಯಬಹುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-26711594, ಇಮೇಲ್ jdablr14@gmail.com ಗೆ ಅಥವಾ ಜಂಟಿ ನಿರ್ದೇಶಕರ ಕಚೇರಿ, ಕೃಷಿ ಸಂಕೀರ್ಣ, ಬನಶಂಕರಿ, ಬೆಂಗಳೂರು ಅನ್ನು ಸಂಪರ್ಕಿಸಬಹುದು. ಅಥವಾ ನಿಮ್ಮ ಹತ್ತಿರದ ಕೃಷಿ ಇಲಾಖೆ ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

2028ರ ಮೇ ಒಳಗೆ ಕೋಲಾರಕ್ಕೆ ಎತ್ತಿನಹೊಳೆ ನೀರು ಪಕ್ಕಾ: ಚಲುವರಾಯಸ್ವಾಮಿ, ಎಚ್‌ಡಿಕೆ ‘ತಲೆ ಬೋಳಿಸಿಕೊಳ್ಳುವ’ ಸವಾಲಿಗೆ ತಿರುಗೇಟು!
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೈಕೋರ್ಟಲ್ಲಿ ಬುರುಡೆ ಗ್ಯಾಂಗ್‌ಗೆ ಹಿನ್ನಡೆ, ಮುಂದೇನು?