ಬಜೆಟ್‌ಗೂ ಮುನ್ನವೇ ರೈತರಿಗೆ ಗುಡ್ ನ್ಯೂಸ್: ಸಾಲದ ಮೇಲಿನ ಬಡ್ಡಿ ಮನ್ನಾ..!

By Suvarna NewsFirst Published Feb 15, 2020, 7:48 PM IST
Highlights

ಇದೇ ಮಾರ್ಚ್ 5 ರಂದು ಕರ್ನಾಟಕ ಬಜೆಟ್‌ ಮಂಡನೆಯಾಗಲಿದ್ದು, ಇದಕ್ಕೆ ಸಂಬಂಧಿಸಿದಂತೆ ಸಿಎಂ ಬಿಎಸ್‌ ಯಡಿಯೂರಪ್ಪ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ನಿರತರಾಗಿದ್ದಾರೆ. ಇದರ ಮಧ್ಯೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ಮೂಲಕ ರೈತರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಬೆಂಗಳೂರು, [ಫೆ.15]:  ಕೃಷಿ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡಿ ಯಡಿಯೂರಪ್ಪ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದ ಸಹಕಾರ ಸಂಸ್ಥೆಳಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಡಿಸಿಸಿ ಬ್ಯಾಂಕ್ ಗಳು, ಲ್ಯಾಂಪ್ಸ್ ಸೊಸೈಟಿಗಳು ಮತ್ತು ಪಿಕಾರ್ಡ್ ಬ್ಯಾಂಕ್ ಗಳಿಂದ ಪಡೆದಿರುವ ಸಾಲದ ಮೇಲಿನ ಬಡ್ಡಿ ಮನ್ನಾ ಆಗಲಿದೆ.

ಟ್ರಂಪ್‌ಗಾಗಿ ಖರ್ಚು 100 ಕೋಟಿ, ಒಲಿಂಪಿಕ್ಸ್‌ಗೆ ಕಂಬಳದ ಜಾಕಿ? ಫೆ.15ರ ಟಾಪ್ 10 ಸುದ್ದಿ!

ಜನವರಿ 31ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಹಾಗೂ ಕೃಷಿ ಸಂಬಂಧಿತ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ಸರ್ಕಾರ ತಿಳಿಸಿದೆ. 

ರೈತರು ಸಾಲ ಮರುಪಾತಿಸಲು ರಾಜ್ಯ ಸರ್ಕಾರ ಇದೇ ಮಾರ್ಚ್ 31 ಗಡುವು ನೀಡಿದ್ದು, ಅಷ್ಟರೊಳಗೆ ರೈತರು ಸಾಲ ಕಟ್ಟಿದ್ರೆ, ಆ ಸಾಲದ ಮೇಲಿನ ಬಡ್ಡಿ ಕಟ್ಟುವಂತಿಲ್ಲ.

ಅಂದಾಜು 92525 ರೈತರ ಸುಸ್ತಿ ಸಾಲ, 56011.03  ಲಕ್ಷ ರೂ. ಗಳ ಮಧ್ಯಮಾವಧಿ ಮತ್ತು  ದೀರ್ಘಾವಧಿ ಕೃಷಿ ಸಾಲ ಇದ್ದು, 46614.67  ಲಕ್ಷ ರೂ. ಬಡ್ಡಿ ಮನ್ನಾ ಆಗಲಿದೆ.

click me!