Karnataka Farmer Protest: ತಕ್ಷಣ ಬಿಜೆಪಿಯವರು ದೆಹಲಿಗೆ ಹೋಗಬೇಕು: ವಿಜಯೇಂದ್ರಗೆ ಸತೀಶ್ ಜಾರಕಿಹೊಳಿ ಟಾಂಗ್

Published : Nov 06, 2025, 02:18 PM IST
Farmer Protest

ಸಾರಾಂಶ

Karnataka sugarcane Farmers Protest: ಕಬ್ಬು ಬೆಲೆ ನಿಗದಿ ವಿಚಾರದಲ್ಲಿ ರಾಜ್ಯ ಸರ್ಕಾರವು ಮಹಾರಾಷ್ಟ್ರದ ದರವನ್ನು ನೀಡಲು ಸಾಧ್ಯವಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. 

ಬೆಂಗಳೂರು: ನಮ್ಮ ಜಿಲ್ಲೆಯಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ಪ್ರದೇಶವಾಗಿದ್ದು, ಸಚಿವರಾದ ಎಚ್.ಕೆ ಪಾಟೀಲ್ ಪ್ರತಿಭಟನಾನಿರತ ರೈತರ ಅಹವಾಲು ಕೇಳಿದ್ದಾರೆ. ಈ ಸಂಬಂಧ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಿರ್ಧಾರ ಮಾಡಲಿದ್ದೇವೆ. ಕಾರ್ಖಾನೆಗಳು ಒಂದೇ ಬೆಲೆ ಕೊಡಲು ಆಗಲ್ಲ. ಇಳುವರಿ ಆಧಾರದ ಮೇಲೆ ದರ ನಿಗದಿಯಾಗುತ್ತೆ. ಮಹಾರಾಷ್ಟ್ರದಲ್ಲಿ ಇಳುವರಿ ಅಧಿಕವಾಗಿರುವ ಕಾರಣ ಹೆಚ್ಚಿರುತ್ತದೆ. ಇಳುವರಿಯಿಂದ ಇಳುವರಿಗೆ 300 ರೂಪಾಯಿ ವ್ಯತ್ಯಾಸವಿರುತ್ತದೆ. ಕೇಂದ್ರ ಸರ್ಕಾರ ದರ ಫಿಕ್ಸ್ ಮಾಡುತ್ತದೆ. ಎಫ್ಆರ್‌ಪಿ ದರ ಕೊಟ್ಟುಕೊಂಡು‌ ಬರಲಾಗಿದ್ದು, ನಾವು ಮಹಾರಾಷ್ಟ್ರ ದರ ಕೊಡಲು ಆಗಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ರೈತರು ಸರ್ಕಾರದ ಬೆಲೆ ಒಪ್ಪುತ್ತಿಲ್ಲ

ಈ ಸಂಬಂಧ ಇವತ್ತು ಚರ್ಚೆಯಾಗುತ್ತೆ ಏನು ನಿರ್ಧಾರ ಆಗುತ್ತೋ‌ ನೋಡೋಣ. ಬೆಲೆ ನಿರ್ಧಾರ ಕೇಂದ್ರ ಮಾಡೋದರಿಂದ ರಾಜ್ಯ ಸರ್ಕಾರದ ಕೈಯಲ್ಲಿ ಏನೂ ಇಲ್ಲ. ನಾವು ಎಲ್ಲ ಸೇರಿ 3200 ಬೆಲೆಗೆ ಒಪ್ಪಿಸಿದ್ದೇವು. ಆದ್ರೆ ರೈತರು ಈ ಬೆಲೆಗೆ ಒಪ್ಪದ ಕಾರಣ ಪ್ರತಿಭಟನೆ ನಡೆದಿದೆ. ಬೆಲೆ ನಿಗದಿ ಸಂಬಂಧ ಪ್ರತಿ ವರ್ಷ ಪ್ರತಿಭಟನೆ ನಡೆಯುತ್ತದೆ. ಈ ಬಾರಿ ದೊಡ್ಡ ಪ್ರಮಾಣದ ಪ್ರತಿಭಟನೆ ನಡೆದಿದೆ ಎಂದು ಹೇಳಿದರು.

ಕಬ್ಬು ಮಹಾರಾಷ್ಟ್ರಕ್ಕೆ ಹೋಗಬಹುದು!

ರೈತರ ಪ್ರತಿಭಟನೆಯಲ್ಲಿ ಬಿಜೆಪಿ ಭಾಗಿಯಾಗಿದ್ದು, ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದೆ. ಹಾಗಾಗಿ ಕೇಂದ್ರದಲ್ಲಿ ಅವರೇ ಮಾತನಾಡಬೇಕಿದೆ. ಅದು ಬಿಟ್ಟು ನಮ್ಮ ಪಾತ್ರ ಇಲ್ಲ ಅಂತ ಬಿಂಬಿಸಲು ಹೊರಟಿದ್ದಾರೆ. ಮಹಾರಾಷ್ಟ್ರ ಬೆಲೆ ಹೆಚ್ಚಾದ್ರೆ ಸಹಜವಾಗಿ ಮಹಾರಾಷ್ಟ್ರ ಕಡೆ ರೈತರು ಹೋಗ್ತಾರೆ. ಸುಮಾರು ಶೇ. 5 ರಿಂದ ಶೇ.10ರಷ್ಟು ಕಬ್ಬು ಮಹಾರಾಷ್ಟ್ರಕ್ಕೆ ಹೋಗಬಹುದು. ಅಲ್ಲಿ ಕೂಡ ರಾಜ್ಯದ ರೈತರು ಶೇರು ಹೊಂದಿದ್ದಾರೆ ಎಂದು ಹೇಳಿದರು.

ಬಿಜೆಪಿಯವರು ತಕ್ಷಣ ದೆಹಲಿಗೆ ಹೋಗಬೇಕು

ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭಾಗಿಯಾಗಿರುವ ಕುರಿತು ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಬಿಜೆಪಿಯವರು ದೆಹಲಿಗೆ ಹೋಗಿ ಪ್ರತಿಭಟನೆ ಮಾಡಬೇಕು. ಅದು ಬಿಟ್ಡು ಪ್ರತಿಭಟನೆಯಲ್ಲಿ ಹೋಗಿ ಮಲಗಿದ್ರೆ ಹೇಗೆ ಎಂದು ಪ್ರಶ್ನೆ ಮಾಡಿದರು. ಸಕ್ಕರೆ ಬೆಲೆ ಹೆಚ್ಚಳ ಮಾಡೋ ಅಧಿಕಾರ ನಮಗೆ ಇಲ್ಲ. ಇದರಲ್ಲಿ ನಮ್ಮದೇನು ಪಾತ್ರವಿಲ್ಲ. ಪಾತ್ರವಿರೋದು ಕೇಂದ್ರ ಸರ್ಕಾರದ್ದು, ತಕ್ಷಣ ಬಿಜೆಪಿಯವರು ದೆಹಲಿಗೆ ಹೋಗಬೇಕು. ಸಕ್ಕರೆ,ಕಬ್ಬಿನ ಬೆಲೆ ಹೆಚ್ಚಳ ಮಾಡಬೇಕು. ಇದರಲ್ಲಿ ನಮ್ಮದೇನು ಇಲ್ಲಎಲ್ಲವೂ ಕೇಂದ್ರ ಸರ್ಕಾರದ ಮೇಲೆಯೇ ಇದೆ. ಆರು ವರ್ಷದಿಂದ ಸಕ್ಕರೆ ಬೆಲೆ ಹೆಚ್ಚಳವಾಗಿಲ್ಲ ಎಂದು ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದರು.

ಇದನ್ನೂ ಓದಿ: ಕಬ್ಬಿನ ದರ ನಿಗದಿ ಮಾಡಲು ಸರ್ಕಾರಕ್ಕೆ ರೈತರ ಡೆಡ್‌ಲೈನ್‌

ಇದನ್ನೂ ಓದಿ: Farmers Deadline to Government: ಬೆಳಗಾವಿ, ಕಬ್ಬಿನ ದರ ನಿಗದಿ ಮಾಡಲು ಸರ್ಕಾರಕ್ಕೆ ರೈತರ ಡೆಡ್‌ಲೈನ್‌!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!