ರಾಷ್ಟ್ರಗೀತೆಗೆ ಅಪಮಾನ, ಸಂಸದ ಕಾಗೇರಿ ವಿರುದ್ಧ ದೂರು, RSS ವಿರುದ್ಧ Priyank Kharge ತೀವ್ರ ವಾಗ್ದಾಳಿ

Published : Nov 06, 2025, 02:02 PM IST
Jana Gana Mana controversy:

ಸಾರಾಂಶ

ಸಂಸದ ವಿಶ್ವೇಶ್ವರ ಹೆಗ್ಡೆ ಕಾಗೇರಿ ಅವರು 'ಜನಗಣಮನ' ಗೀತೆಯನ್ನು ಬ್ರಿಟಿಷರ ಸ್ವಾಗತಕ್ಕೆ ರಚಿಸಿದ್ದು ಎಂಬ ಹೇಳಿಕೆ ನೀಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.  ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ದೂರು ನೀಡಲಾಗಿದ್ದು, ಸಚಿವ ಪ್ರಿಯಾಂಕ್ ಖರ್ಗೆ  ಆರ್‌ಎಸ್‌ಎಸ್‌ ವಿರುದ್ಧ ತೀವ್ರ ವಾಗ್ದಾಳಿ.

ಬೆಂಗಳೂರು, (ನ.06) ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗ್ಡೆ ಕಾಗೇರಿ ಅವರ 'ಜನಗಣಮನ' ಬ್ರಿಟಿಷರ ಸ್ವಾಗತಕ್ಕೆ ರಚಿಸಿದ್ದ ಗೀತೆ' ಎಂಬ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ಅವರು ಬೆಂಗಳೂರು ಪೊಲೀಸ್ ಇಲಾಖೆಯಲ್ಲಿ ದೂರು ದಾಖಲಿಸಿದ್ದಾರೆ. ರಾಷ್ಟ್ರಗೀತೆಗೆ ಅಪಮಾನ ಮಾಡಿರುವುದರಿಂದ ದೇಶದ್ರೋಹ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ.

ಆರೆಸ್ಸೆಸ್ ದೊಡ್ಡ ದೇಶದ್ರೋಹಿಗಳು:

ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕರನ್ನು ತೀವ್ರವಾಗಿ ಟೀಕಿಸಿದ್ದು 'ಆರ್‌ಎಸ್‌ಎಸ್‌ನವರಿಗೆ ತಮ್ಮ ಇತಿಹಾಸ ಗೊತ್ತಿಲ್ಲ. ಆರ್ಗನೈಸರ್ ಮ್ಯಾಗಜೀನ್ ಲೇಖನಗಳನ್ನು ಓದಿ ನೋಡಿ, ನೀವು ಎಂತಹ ದೇಶದ್ರೋಹಿಗಳೇ ಎಂದು ತಿಳಿಯುತ್ತದೆ. ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆಗೆ ನೀವು ಯಾವತ್ತೂ ಗೌರವ ಕೊಟ್ಟಿಲ್ಲ.

ಇದು 'ಜನಗಣಮನ' ಬ್ರಿಟಿಷರನ್ನ ಸ್ವಾಗತಿಸುವುದಕ್ಕೆ ರಚಿಸಿದ್ದು ಎಂದು ಹೇಳ್ತಾರಲ್ಲ, ಇದು ಅವರು ಸೃಷ್ಟಿಸಿದಂತ ಇತಿಹಾಸ. ರವೀಂದ್ರನಾಥ್ ಠಾಕೂರ್ ಅವರು 1937-39 ರಲ್ಲೇ ಇದ್ರ ಬಗ್ಗೆ ಹೇಳಿದ್ರು ಇದು ನಮ್ಮ ದೇಶಕ್ಕಾಗಿ ಬರೆದಿರುವ ಗೀತೆ. Its not for king George 5,4 or any other George ಅಂತ ಹೇಳಿದ್ರು. ಆದರೆ ಅದೆಲ್ಲ ಇವರು ಓದಲ್ಲ. ಕೇಶವಕೃಪ ಹಾಗೂ ಶಾಖೆಗಳಲ್ಲಿ ನಡೆಸಿರುವ ಸುಳ್ಳನ್ನೇ ಇವರು ಇತಿಹಾಸ ಅಂದುಕೊಂಡಿದ್ದಾರೆ. ನಾವು ಇಲ್ಲಿಯವರೆಗೆ ಕೇಳಿರುವ ಪ್ರಶ್ನೆಗಳು ಅವರ ಮ್ಯಾಗಜೀನ್ ನಲ್ಲೇ ಬಂದಿದೆ. ಹಿರಿಯರ ಲೇಖನಗಳನ್ನ ಓದಿ ನಿಮಗೆ ಗೊತ್ತಾಗುತ್ತೆ. ನೀವು ಯಾವ ರೀತಿ ನಡೆದುಕೊಂಡಿದ್ದೀರಾ ಇತಿಹಾಸದಲ್ಲಿ ಅಂತ ನಿಮಗೇ ನಾಚಿಕೆ ಆಗುತ್ತೆ ಎಂದು ಕಿಡಿಕಾರಿದರು.

ಆರೆಸ್ಸೆಸ್‌ನವರು ವಂದೇ ಮಾತರಂ, ಜನಗಣಮನಕ್ಕೆ ಗೌರವ ಕೊಟ್ಟಿಲ್ಲ:

ವಂದೇ ಮಾತರಂನಿಂದ ಸಾಕಷ್ಟು ಜನ ಪ್ರೇರಿತರಾಗಿರೋದು ನಿಜ. ಪಶ್ಚಿಮ ಬಂಗಾಳದಲ್ಲಿ ವಂದೇ ಮಾತರಂ ಗೀತೆಯಿಂದ ಪ್ರೇರಿತರಾಗಿ ಯುವಕರು ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಬಳಿಕ ಹೋರಾಟ ಮಾಡಿದವರೆಲ್ಲಾ ಯಾವುದು ರಾಷ್ಟ್ರ ಗೀತೆ ಆಗಬೇಕು ಅಂತ ಕೂತು ತೀರ್ಮಾನ ಮಾಡಿದ್ರು. ರಾಷ್ಟ್ರ ಧ್ವಜ ಹೇಗಿರಬೇಕು, ಅಶೋಕ ಚಕ್ರ ಯಾಕೆ ಬರಬೇಕು? ಕೇಸರಿ, ಬಿಳಿ, ಹಸಿರು ಯಾಕಿರಬೇಕು, ಪ್ರಾದೇಶಿಕ ಬೇಡಿಕೆಗಳಿಗೆ ಯಾಕೆ ಮಾನ್ಯತೆ ಕೊಡಬೇಕು, ಭಾಷೆ ಆಧಾರಿತ ಪುನರ್ ವಿಂಗಡನೆ ಯಾಕೆ ಇವೆಲ್ಲವೂ Constituent ಅಸೆಂಬ್ಲಿಯಲ್ಲಿ ಚರ್ಚೆ ಆಗಿದೆ. ಆದರೆ ಆರೆಸ್ಸೆಸ್‌ ಬಿಜೆಪಿಗರು ಇವೆಲ್ಲ ಓದುವುದಿಲ್ಲ ಅದೇ ಸಮಸ್ಯೆ ಬಂದಿರೋದು. ಜನರಿಗೆ ಜನಗಣಮನ ಮತ್ತು ವಂದೇ ಮಾತರಂ ಬಗ್ಗೆ ಅಭಿಮಾನ ಇದೆ. ಆದರೆ ಆರೆಸ್ಸೆಸ್‌ನವರಿಗೆ ಅಭಿಮಾನವಾಗಲಿ, ಗೌರವವಾಗಲಿ ಇಲ್ಲ. ಇವರು ಸಂವಿಧಾನವನ್ನ ತಿರಸ್ಕಾರ ಮಾಡಿ ಮನುಸ್ಮೃತಿ ತನ್ನಿ ಅಂತ ಹೇಳಿದವರು. ತ್ರಿವರ್ಣ ಧ್ವಜವನ್ನ ಅಪಶಕುನ ಅಂತಾ ಹೇಳಿದವರು. ಆರೆಸ್ಸೆಸ್‌ನವರು ನನ್ನ ಮಾತು ಕೇಳೋದುಬೇಡ, ನಿಮ್ಮ ಇತಿಹಾಸ ನೀವೇ ಓದಿದ್ರೆ ಸಾಕಾಗಿದೆ ಎಂದು ಲೇವಡಿ ಮಾಡಿದರು. ಸಂಸದ ಕಾಗೇರಿ ಅವರ ಹೇಳಿಕೆ ಈಗ ಹೊಸ ವಿವಾದ ಸೃಷ್ಟಿಸಿದೆ. ಬಿಜೆಪಿ-ಕಾಂಗ್ರೆಸ್ ನಡುವೆ ಚರ್ಚೆ ಹುಟ್ಟುಹಾಕಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್