
ಬಳ್ಳಾರಿ (ಮಾ.10): ಸಿದ್ದರಾಮಯ್ಯನವರ ಬಜೆಟ್ ಅಲ್ಪಸಂಖ್ಯಾತರ ಬಜೆಟ್. ಸಾಬ್ರು ಕಾ ಸಾಥ್ ಸಾಥ್, ಸಾಬ್ರು ಕಾ ವಿಕಾಸ್ ಎಂದು ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಭಾಷಣ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲ ಆಗಿದೆ.
ಬಜೆಟ್‌ನಲ್ಲಿ ಹಿಂದೂಗಳಿಗೆ ಅನ್ಯಾಯವಾಗಿದೆ ಎಂದು ಬಜೆಟ್ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಾತನಾಡಿರುವ ಮಾಜಿ ಶಾಸಕ ಸೋಮಶೇಖರ್ ರೆಡ್ಡೆ, ಸಿದ್ದರಾಮಯ್ಯ ಅಲ್ಪಸಂಖ್ಯಾತರ ಬಜೆಟ್ ಮಂಡಿಸುವ ಮೂಲಕ 'ಸಾಬ್ರು ಕಾ ಸಾಥ್ ಸಾಥ್, ಸಾಬ್ರು ಕಾ ವಿಕಾಸ್ ಅಂತಾ ಹೇಳ್ತಾ ಇದ್ದಾರೆ. ನಮಗೆಲ್ಲ (ಹಿಂದೂಗಳಿಗೆ) ಅನ್ಯಾY ಮಾಡಬೇಕು ಅಂತ ಹೇಳ್ತಾ ಇದ್ದಾರೆ. ನಮಗೆಲ್ಲ ಅನ್ಯಾಯ ಮಾಡಿ, ಅವರಿಗೆ ಅಷ್ಟೇ ಪ್ರಯೋಜನಗಳು ಸಿಗಬೇಕು ಅಂತಾ ಸಿದ್ದರಾಮಯ್ಯ ಹೀಗೆ ಮಾಡ್ತಿದ್ದಾರೆ.ಯಾಕೆಂದ್ರೆ ಅಲ್ಪಸಂಖ್ಯಾತರು ಮಾತ್ರ ಅವರಿಗೆ ಮತ ಹಾಕಿದ್ದಾರೆ. ಹೀಗಾಗಿ ನಮಗೆ ಅನ್ಯಾಯ ಮಾಡ್ತಿದ್ದಾರೆ ಎಂದು ಸೋಮಶೇಖರ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸ್ವಾರ್ಥಕ್ಕೆ ಕಚ್ಚಾಡಿದರೆ ನಮಗೂ, ಪಕ್ಷಕ್ಕೂ ಉಳಿಗಾಲವಿಲ್ಲ: ಸಿಟಿ ರವಿ
ಇದೊಂದು ಪಿಕ್‌ಪಾಕೆಟ್ ಬಜೆಟ್:
ಇದು ಸಾಬ್ರು ಬಜೆಟ್ ಅಷ್ಟೇ ಅಲ್ಲ, ಇದೊಂದು ಪಿಕ್‌ಪಾಕೆಟ್ ಬಜೆಟ್ ಎಂದು ಕರೆದ ಸೋಮಶೇಖರ್ ರೆಡ್ಡಿ ಅವರು, ಮೆಜಾರಿಟಿ ಇರೋ ಹಿಂದೂಗಳ ಜೋಬಿಗೆ ಕೈ ಹಾಕಿ, ಮುಸ್ಲಿಮರಿಗೆ ಜಾಸ್ತಿ ಕೊಡಬೇಕು ಅಂತಾ ಸರ್ಕಾರ ಪ್ಲಾನ್ ಮಾಡ್ತಾ ಇದೆ. ಸಿದ್ದರಾಮಯ್ಯ ಮೊದಲಿಂದನೂ, ಪ್ರತಿ ಹೆಜ್ಜೆಗೂ ಸಾಬ್ರಿಗೆ ಒಂದಿಡಿ ಜಾಸ್ತಿ ಕೊಡ್ತಿದ್ದಾರೆ. ಹೀಗಾಗಿ ಹಿಂದೂಗಳೆಲ್ಲ ಒಂದಾಗಬೇಕು. ಒಗ್ಗಟ್ಟಾಗಿ ಈ ಸರ್ಕಾರವನ್ನ ಕಿತ್ತಸೆಯಬೇಕು. ಹಿಂದೂಗಳ ಬಗ್ಗೆ ಕಾಳಜಿ ಇರುವ ಸರ್ಕಾರವನ್ನ ಅಧಿಕಾರಕ್ಕೆ ತರಬೇಕು, ನಮಗೆ ಚಿಪ್ಪು ಕೊಟ್ಟ ಕಾಂಗ್ರೆಸ್ ಸರ್ಕಾರ ಮುಂದಿನ ಚುನಾವಣೆಯಲ್ಲಿ ಮತ ಹಾಕುವಾಗ ಕಾಂಗ್ರೆಸ್ ಪಕ್ಷಕ್ಕೆ ಹಿಂದೂಗಳ ಸಹ ಚಿಪ್ಪು ಕೊಟ್ಟು ಪಾಠ ಕಲಿಸಬೇಕು ಎಂದು ಕರೆನೀಡಿದ್ದಾರೆ.
ಘಟನೆಯ ವಿಡಿಯೋ ಸೋಷಹಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮಿಶ್ರ ಪ್ರತಿಕ್ರಿಯೆ ಬಂದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ