ಉಮೇಶ್ ಕತ್ತಿ ‌ಸಮಾಧಿಗೆ ಕುಟುಂಬಸ್ಥರಿಂದ ಪೂಜಾ ಕೈಂಕರ್ಯ, ಅವರಿಷ್ಟದ ಗುಟ್ಕಾ ಪ್ಯಾಕೆಟ್ ಇಟ್ಟು ನಮನ

By Ramesh B  |  First Published Sep 8, 2022, 3:06 PM IST

ದಿವಂಗತ ಉಮೇಶ್ ಕತ್ತಿ ‌ಸಮಾಧಿಗೆ ಕುಟುಂಬಸ್ಥರಿಂದ ಪೂಜಾ ಕೈಂಕರ್ಯ ನಡೆದಿದ್ದು, ಈ ವೇಳೆ ಅವರಿಗೆ ಇಷ್ಟವಾದ ಆಹಾರವನ್ನು ಇಟ್ಟು ಪೂಜೆ ಸಲ್ಲಿಸಿದರು.


ಚಿಕ್ಕೋಡಿ, (ಸೆಪ್ಟೆಂಬರ್.08): ಹೃದಯಾಘಾತದಿಂದ ಸಾವನ್ನಪ್ಪಿದ ಸಚಿವ ಉಮೇಶ್ ಕತ್ತಿ (Umesh Katti) ಸಮಾಧಿಗೆ ಇಂದು(ಗುರುವಾರ) ಕುಟುಂಬಸ್ಥರು ಪೂಜೆ ನೆರವೇರಿಸಿ ಅಂತಿಮ ವಿಧಿ ವಿಧಾನವನ್ನು ಪೂರೈಸಿದರು.

 ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ತಂದೆ ತಾಯಿ ಸಮಾಧಿ ಪಕ್ಕವೇ ಅವರ ಉಮೇಶ್ ಕತ್ತಿ ಅವರು ಅಂತ್ಯಕ್ರಿಯೆ ಮಾಡಲಾಗಿದ್ದು, ಸಮಾಧಿಗೆ  ಪುತ್ರ ನಿಖಿಲ್ ಕತ್ತಿ, ಅಳಿಯ ನಿತಿನ್ ಪ್ರಭುದೇವ ಅವರು ಪುರೋಹಿತರ ಮಾರ್ಗದರ್ಶನದಂತೆ ಪೂಜೆ ಸಲ್ಲಿಸಿದರು.

Latest Videos

undefined

ಇನ್ನು ಯಾರೇ ಸಾವನ್ನಪ್ಪಿದರೂ ಅವರ ಸಮಾಧಿ ಪೂಜೆ ವೇಳೆ ಅವರಿಗಿಷ್ಟವಾದ ಆಹಾರವನ್ನು ಇಡುವ ಪ್ರತೀತಿ ಇದೆ. ಅದರಂತೆ ಉಮೇಶ್ ಕತ್ತಿ ಅವರ ಸಮಾಧಿಗೆ  ಅವರಿಷ್ಟದ ತಿಂಡಿ, ತಿನಿಸುಗಳನ್ನು ಇಟ್ಟು ಕುಟುಂಬಸ್ಥರು ಪೂಜೆ ಸಲ್ಲಿಸಿದರು.

Umesh Katti: ಮಣ್ಣಲ್ಲಿ ಮಣ್ಣಾದ ಹ್ಯಾಟ್ರಿಕ್‌ ಗೆಲುವಿನ ಸರದಾರ; ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಉಮೇಶ್ ಕತ್ತಿ ಹಾಕಿಕೊಳ್ಳುತ್ತಿದ್ದ ಗುಟ್ಕಾ ಪ್ಯಾಕೇಟ್ ಇಟ್ಟು ಸಮಾಧಿ ಮೇಲೆ ಇಟ್ಟಿರುವುದು ವಿಶೇಷ. ಯಾಕಂದ್ರೆ ಉಮೇಶ್ ಕತ್ತಿ ಅವರು ಗುಟ್ಕಾ ಹಾಕಿಕೊಳ್ಳುತ್ತಿದ್ದರು. ಅದರಂತೆ ಇದೀಗ ಕುಟುಂಬಸ್ಥರಯ ಅವರ ಸಮಾಧಿ ಮೇಲೆ ಗುಟ್ಕಾ ಇಟ್ಟು ನಮನ ಸಲ್ಲಿಸಿದರು.

ಕತ್ತಿ ನಿವಾಸಕ್ಕೆ ಬಿಜೆಪಿ ನಾಯಕರ ದಂಡು
ಕತ್ತಿ ನಿವಾಸಕ್ಕೆ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಸಚಿವರು ಸೇರಿದಂತೆ ಹಲವು ಬಿಜೆಪಿ ನಾಯಕರು ಉಮೇಶ್ ಕತ್ತಿ ನಿವಾಸಕ್ಕೆ ಭೇಟಿ ನೀಡಿ ಉಮೇಶ್ ಕತ್ತಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.ಅಲ್ಲದೇ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಇನ್ನು ಇದೇ ವೇಳೆ ಉಮೇಶ ಕತ್ತಿ ಅವರೊಂದಿಗೆ ಕಳೆದ ಕ್ಷಣಗಳನ್ನ ಮೆಲುಕು ಹಾಕಿದರು. 

ಅರುಣ್ ಸಿಂಗ್ ಮಾತನಾಡಿ, ಸಚಿವ ಉಮೇಶ ಕತ್ತಿ ನನ್ನ ವೈಯಕ್ತಿಕ ಮಿತ್ರ.ಬೆಳಗಾವಿ, ಬೆಂಗಳೂರು, ದೆಹಲಿಯಲ್ಲಿ ಅನೇಕ ಸಲ ಭೇಟಿಯಾಗಿದ್ದೇವೆ. ರಾಜ್ಯದ ಅಭಿವೃದ್ಧಿ, ಪಕ್ಷ ಕಟ್ಟುವ ಬಗ್ಗೆ ಅನೇಕ ಸಲಹೆ ನೀಡುತ್ತಿದ್ದರು. ಉಮೇಶ ಕತ್ತಿ ಬಿಂದಾಸ್ ವ್ಯಕ್ತಿಯಾಗಿದ್ದರು. ಉಮೇಶ ಕತ್ತಿ ಅಗಲಿಕೆಯಿಂದ ಪಕ್ಷ, ರಾಜ್ಯಕ್ಕೆ ನಷ್ಟ ಆಗಿದೆ. 40 ವರ್ಷಗಳ ಕಾಲ ಜನ ಆರ್ಶಿವಾದ ಮಾಡಿದ್ದಾರೆ.  40 ವರ್ಷಗಳ ರಾಜಕೀಯ ಜೀವನದ ಕುರಿತು ಪುಸ್ತಕದ ರೂಪದಲ್ಲಿ ಹೊರ ಬರಬೇಕು. ಒಬ್ಬ ರಾಜಕೀಯ ನಾಯಕ 40 ವರ್ಷಗಳ ಶಾಸಕನಾಗಿ ಮಾಡಿದ ಕೆಲಸ ಅವರ ದೂರದೃಷ್ಟಿ ಅವರ ಆಲೋಚನೆಗಳು ಎಲ್ಲರಿಗೂ ಗೊತ್ತಾಗಬೇಕಿದೆ ಎಂದರು.

ಈ ಸಂದರ್ಭದಲ್ಲಿ ಸಚಿವ ಸುಧಾಕರ್ ಪ್ರತಿಕ್ರಿಯಿಸಿ,  ಸಚಿವ ಸಂಪುಟದ ಸಹೋದ್ಯೋಗಿಗಳು, ಹಿರಿಯ ನಾಯಕ ಉಮೇಶ ಕತ್ತಿ ಅವರ ಅಕಾಲಿಕ ನಿಧನ ನಮೆಲ್ಲರಿಗೂ ನೋವು ಉಂಟು ಮಾಡಿದೆ. ಅವರದು ನಂದು ಬಹಳ ದೀರ್ಘ ಕಾಲದ ಸ್ನೇಹ ಸಂಬಂಧ ಇತ್ತು. ಉಮೇಶ ಕತ್ತಿ ಇದ್ದಲ್ಲಿ ನಗುವಿಗೆ ಬರ ಇರಲಿಲ್ಲ. ನಗುವಿನ ಲೋಕವನ್ನು ಅವರು ಆಯ್ಕೆ ಮಾಡಿಕೊಂಡು ಹೋಗಿದ್ದಾರೆ. ಅವರ ಇಲ್ಲದ ನಷ್ಟವನ್ನು ಎದುರಿವಂತಹ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಹೇಳಿದರು.

click me!