ಮದ್ಯದ ದರ ತಗ್ಗಿಸುವುದೇ ಕಾಂಗ್ರೆಸ್‌ ಸರ್ಕಾರ: ಹೊಸ ಅಬಕಾರಿ ನೀತಿ ಸುಳಿವು ಕೊಟ್ಟ ಸಚಿವ ತಿಮ್ಮಾಪುರ

By Sathish Kumar KH  |  First Published Jun 3, 2023, 9:18 PM IST

ರಾಜ್ಯದಲ್ಲಿ ಅಬಕಾರಿ ಇಲಾಖೆಯಲ್ಲಿ ಹೊಸ ನೀತಿ ಜಾರಿಗೆ ತರಬೇಕಿದೆ. ಈ ನಿಟ್ಟಿನಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳಿಂದ ಹಲವಾರು ವಿಚಾರಗಳನ್ನು ಸಂಗ್ರಹಣೆ ಮಾಡಲಾಗಿದೆ.


ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್‌ ಸುವರ್ಣನ್ಯೂಸ್ 

ಬಾಗಲಕೋಟೆ (ಜೂ.03): ರಾಜ್ಯದಲ್ಲಿ ಅಬಕಾರಿ ಇಲಾಖೆಯಲ್ಲಿ ಹೊಸ ನೀತಿ ಜಾರಿಗೆ ತರಬೇಕಿದೆ. ಈ ನಿಟ್ಟಿನಲ್ಲಿ ಅಬಕಾರಿ ಇಲಾಖೆಯ ಹಲವಾರು ವಿಚಾರಗಳನ್ನು ಸಂಗ್ರಹಣೆ ಮಾಡಲಾಗಿದ್ದು, ಈ ಕುರಿತು ಶೀಘ್ರವೇ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಹೊಸ ನೀತಿಯೊಂದಿಗೆ ಕೆಲ ಬದಲಾವಣೆಗಳನ್ನು ಮಾಡಲಾಗುವುದು ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

Tap to resize

Latest Videos

undefined

ಅವರು ಜಿಲ್ಲೆಯ ಮುಧೋಳ ಕ್ಷೇತ್ರದ ಲಕ್ಷ್ಯಾನಟ್ಟಿ ಗ್ರಾಮದಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಕುಡಲೇ ಜನಸಾಮಾನ್ಯರಿಗೆ ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸುತ್ತಿದ್ದೇವೆ. ನುಡಿದಂತೆ ನಡೆದುಕೊಳ್ಳುವ ಸರ್ಕಾರ ನಮ್ಮದಾಗಿದೆ. ಇನ್ನು ರಾಜ್ಯದಲ್ಲಿ ಅಬಕಾರಿ ಇಲಾಖೆಯಲ್ಲಿ ಕೆಲವು ಗೊಂದಲಗಳಿದ್ದು, ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹೊಸ ಅಬಕಾರಿ ನೀತಿಯನ್ನು ಜಾರಿಗೆ ತರಲಾಗುವುದು. ಈಗಾಗಲೇ ಇಲಾಖಾ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿಯನ್ನು ಪಡೆಯಲಾಗಿದ್ದು, ಬಸಲಾವಣೆ ಆಗಬೇಕಾಗಿರುವ ಬಗ್ಗೆಯೂ ಚರ್ಚಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಪ್ರಸ್ತಾವನೆಯನ್ನಿಟ್ಟು ಚರ್ಚಿಸಿ ಹೊಸ ಅಬಕಾರಿ ನೀತಿ ಜಾರಿಗೆ ತರಲಾಗುವುದು ಎಂದು ಮಾಹಿತಿ ನೀಡಿದರು. ಆದರೆ, ಹೊಸ ನೀತಿಯಿಂದ ಮದ್ಯದ ದರ ತಗ್ಗುವುದೇ ಅಥವಾ ಲೈಸೆನ್ಸ್‌ ಪಡೆಯುವ ಬಗ್ಗೆ ನಿಯಮಾವಳಿ ಸಡಿಲಗೊಳಿಸುವುದೇ ಎಂಬುದನ್ನು ಕಾದುನೋಡಬೇಕಿದೆ. 

ಸರ್ಕಾರದ ಯುವನಿಧಿ ಯೋಜನೆ ಮಾನದಂಡ ಪ್ರಕಟ: ಯಾರಿಗೆಲ್ಲ 3 ಸಾವಿರ ರೂ. ಸಿಗುತ್ತೆ

ಕೊಟ್ಟ ಮಾತಿನಂತೆ ನಡೆದುಕೊಂಡ ನಾಯಕ ಸಿದ್ದರಾಮಯ್ಯ:  ರಾಜ್ಯದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಪಕ್ಷವನ್ನು ಸಮರ್ಥವಾಗಿ ಕಟ್ಟಿದ್ದಾರೆ. ಇನ್ನು ರಾಜ್ಯದ ಜನರಿಗೆ ಮಾತು ಕೊಟ್ಟಂತೆ ನಡೆದುಕೊಂಡ ನಾಯಕ ನಮ್ಮ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರಾಗಿದ್ದಾರೆ. ಈ ಹಿಂದೆ 2013 ರ ಚುನಾವಣೆಯಲ್ಲಿ ನಡೆದುಕೊಂಡಂತೆ ಈಗಲೂ ನಡೆದುಕೊಂಡಿದ್ದೇವೆ. 600 ಭರವಸೆ ನೀಡಿ ಮೋಸ ಮಾಡಿದವರಿಂದ ನಾವು ಏನು ಕಲಿಯಬೇಕಿಲ್ಲ ಎಂದು ಬಿಜೆಪಿಗರ ವಿರುದ್ಧ ಸಚಿವ ತಿಮ್ಮಾಪೂರ ವಾಗ್ದಾಳಿ‌ ನಡೆಸಿದರು.

ಬಿಜೆಪಿಗರದ್ದು ಕೀಳು ಮಟ್ಟದ ರಾಜಕಾರಣ: ನಮ್ಮ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಕೊಡೋವರೆಗೆನೂ, ಬಿಜೆಪಿಯವರು ಕಾಂಗ್ರೆಸ್ಸನವರು ಕೊಡೋದಿಲ್ಲ ಅಂದರು. ಕೊಟ್ಟ ಮೇಲೆ ಎಲ್ಲಿಂದ ಕೊಡ್ತಾರೆ ಅಂತಿದ್ದಾರೆ. ಇಂತಹ ಕೀಳುಮಟ್ಟದ ರಾಜಕಾರಣ ನಾವು ಮಾಡಲ್ಲ. ನಾವು ಜನತೆಗೆ ಹೇಳಿದಂತೆ ನಡೆದುಕೊಳ್ಳುತ್ತೇವೆ. ನಮ್ಮದು ಸಮರ್ಥ ಸರ್ಕಾರ ಇದೆ.  ನುಡಿದಂತೆ ನಡೆಯಲಾರದವರಿಂದ ಬುದ್ದಿ ಕಲಿಯಬೇಕಾದದ್ದೇನು ಇಲ್ಲ. ಬಿಜೆಪಿಗರ ಮಾತಿಗೆ ಜನ ಬೆಲೆನೂ ಕೊಡಲ್ಲ ಎಂದು ಹೇಳಿದರು.

ಕೆಎಸ್ಆರ್‌ಟಿಸಿ ನಡಿಬೇಕಲ್ಲ, ಗಂಡಸ್ರು ಟಿಕೆಟ್ ತಕೊಳ್ರಪ್ಪ: ಡಿಕೆಶಿವಕುಮಾರ್ ಮನವಿ

ಲೋಕಸಭಾ ಚುನಾವಣೆಯಲ್ಲೂ ಜಯಭೇರಿ ನಮ್ಮದೇ: ಮುಂಬರುವ ಲೋಕಸಭಾ ಚುನಾವಣೆ ತಯಾರಿ ಬಗೆಗೆ ಮಾತನಾಡಿದ ಸಚಿವ ಆರ್.ಬಿ.ತಿಮ್ಮಾಪೂರ ಅವರು , ಮುಂಬರುವ ಲೋಕಸಭಾ ಚುನಾವಣೆಯೂ ನಮ್ಮದೇ. ನಾವೇ ಗೆಲುವು ಸಾಧಿಸುತ್ತೇವೆ, ಈ ಬಗ್ಗೆ ಪ್ರಶ್ನೆಯೇ ಇಲ್ಲ. ರಾಜ್ಯದ ಜನತೆ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಬಿಜೆಪಿಗೆ ಜನರ ಮೇಲೂ ಭರವಸೆ ಇಲ್ಲ,ತಮ್ಮ ಮೇಲೂ ಭರವಸೆ ಇಲ್ಲ. ನಾವು ನೀಡಿದ ಭರವಸೆ ಈಡೇರಿಸುತ್ತೇವೆ ಅಂದ್ರೆ, ಅದೆಂಗೆ ಈಡೇರಿಸ್ತೀರಿ ಅಂತಿದ್ರು. ಬಿಜೆಪಿಯಲ್ಲೇ ಗೊಂದಲವಿತ್ತು. ಸಮರ್ಥ ನಾಯಕತ್ವ ಸಹ ಬಿಜೆಪಿಯಲ್ಲಿಲ್ಲ, ಇದು ದುರ್ದೈವ ಎಂದರು.

click me!