ನೈಟ್ ಕರ್ಫ್ಯೂ ಜಾರಿ: ಎಣ್ಣೆ ಪ್ರಿಯರಿಗೆ ಬಿಗ್ ಶಾಕ್ ಕೊಟ್ಟ ಅಬಕಾರಿ ಸಚಿವ. ..!

By Suvarna News  |  First Published Dec 23, 2020, 5:34 PM IST

ಬ್ರಿಟನ್ ವೈರಸ್ ಭೀತಿ ಶುರುವಾಗಿದೆ. ಈ ಹಿನ್ನೆಲೆ ನೈಟ್ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದ್ದು, ಈ ವೇಳೆ ಬಾರ್ ಮತ್ತು ರೆಸ್ಟೊರೆಂಟ್ ಬಗ್ಗೆ ಅಬಕಾರಿ ಸಚಿವರು ಪ್ರತಿಕ್ರಿಯೆ ಕೊಟ್ಟಿದ್ದಾರೆ.


ಕೋಲಾರ, (ಡಿ.23): ಕೊರೋನಾ ಹೊಸ ರೂಪಾಂತರ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಿದ್ದಾರೆ. 

ಇನ್ನು ಈ ಬಗ್ಗೆ ಮಾತನಾಡಿದ ಅಬಕಾರಿ ಸಚಿವ‌ ಎಚ್.ನಾಗೇಶ್ ರಾತ್ರಿ 10 ಗಂಟೆ ಮೇಲೆ ಬಾರ್, ರೆಸ್ಟೋರೆಂಟ್, ಪಬ್, ಕ್ಲಬ್ ಎಲ್ಲಾ ಬಂದ್ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಈ ಮೂಲ ರಾತ್ರಿ ಹೊತ್ತಲ್ಲಿ ಪಾರ್ಟಿ ಪ್ರಿಯರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.

Tap to resize

Latest Videos

undefined

ಹೊಸ ವೈರಸ್ ಭೀತಿ: ಜಿಲ್ಲಾಧಿಕಾರಿಗಳಿಗೆ ಸಿಎಂ ಕೊಟ್ಟ ಖಡಕ್ ಸೂಚನೆಗಳಿವು

ನೈಟ್ ಕರ್ಫ್ಯೂ ಸ್ವಾಗತಾರ್ಹ. ಇದರಲ್ಲಿ ನಮ್ಮ ಇಲಾಖೆಯ ಪಾತ್ರ ಅತಿ ಮುಖ್ಯವಾಗಿದೆ. ನಾವೇನಾದರೂ ಸಡಿಲ ಬಿಟ್ಟರೆ ಕೊರೊನಾ ಸಂಖ್ಯೆ ಹೆಚ್ಚಳವಾಗುತ್ತೆ. ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿದರೆ ಬಾರ್ ಲೈಸೆನ್ಸ್ ರದ್ದು ಮಾಡಲಾಗುತ್ತೆ. ಹೀಗಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲೇ ಬೇಕಾಗಿದೆ. ಮುಖ್ಯಮಂತ್ರಿ ಒಳ್ಳೆಯ ನಿರ್ಧಾರ‌ ತೆಗೆದುಕೊಂಡಿದ್ದಾರೆ.

ಕ್ರಿಸ್ಮಸ್, ಹೊಸ ವರ್ಷ ಆಚರಣೆಗೆ ಅನೇಕ ಜನರು ಸೇರುತ್ತಾರೆ. ನೈಟ್ ಕರ್ಫ್ಯೂ ಜಾರಿಯಾಗಿರುವುದರಿಂದ ಜನರಲ್ಲಿ ಭಯ ಬರಲಿದೆ. ಕೊರೋನಾ ರೂಪಾಂತರ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ‌ ಇರಬೇಕು ಎಂದು ತಿಳಿಸಿದರು. 

ರಾತ್ರಿ 9 ಗಂಟೆ ಮೇಲೆ ಪಾರ್ಟಿ, ಪಬ್‌ಗಳು ಶುರುವಾಗಿ ಮಧ್ಯ ರಾತ್ರಿ 1ರ ವರೆಗೆ ನಡೆಯುತ್ತವೆ. ಆದ್ರೆ, ಇದೀಗ ಅವೆಲ್ಲವೂಗಳಿಗೆ ಬ್ರೇಕ್ ಹಾಲಾಗಿದೆ. ಇದರಿಂದ  ರಾತ್ರಿ  ಪಾರ್ಟಿ ಪ್ರಿಯರಿಗೆ ಬಿಗ್ ಶಾಕ್ ಆದಂತಾಗಿದೆ. ಇನ್ನೇನಿದ್ರೂ ಎಣ್ಣೆ ಪಾರ್ಸಲ್ ತೆಗೆದುಕೊಂಡು ಮನೆಯಲ್ಲಿಯೇ ಪಾರ್ಟಿ ಮಾಡ್ಬೇಕು. ಇಲ್ಲ 10 ಗಂಟೆಯೊಳಗೆ ಮುಗಿಸಿಕೊಂಡು ಮನೆಗೆ ಹೋಗ್ತೀರಬೇಕು ಅಷ್ಟೇ...

click me!