ನಿಗಮ-ಮಂಡಳಿ ಹುದ್ದೆಗೆ ಈಗ ಮಾಜಿ ಶಾಸಕರಿಂದಲೂ ಒತ್ತಡ

By Kannadaprabha News  |  First Published Jan 23, 2024, 10:26 AM IST

ವರದಿಯಲ್ಲಿ 37 ಶಾಸಕರು ಯಾರು ಹಾಗೂ ಅವರಿಗೆ ಯಾವ ನಿಗಮ- ಮಂಡಳಿ ಸ್ಥಾನಗಳು ದೊರೆಯಲಿವೆ ಎಂಬ ಪೂರ್ಣ ಪಟ್ಟಿಯನ್ನು ಬಹಿರಂಗಪಡಿಸಿತ್ತು. ಇದರ ಬೆನ್ನಲ್ಲೇ ಮಾಜಿ ಶಾಸಕರಿಗೂ ನಿಗಮ-ಮಂಡಳಿ ಸ್ಥಾನ ನೀಡಬೇಕೆಂಬ ಕೂಗು ಎದ್ದಿದೆ. 


ಬೆಂಗಳೂರು(ಜ.23):  ನಿಗಮ-ಮಂಡಳಿ ನೇಮಕಾತಿಯಲ್ಲಿ ಮಾಜಿ ಶಾಸಕರಿಗೂ ಸ್ಥಾನ ನೀಡಬೇಕೆಂದು ಅವರ ಬೆಂಬಲಿಗರಿಂದ ಈಗ ಒತ್ತಡ ಶುರುವಾಗಿದೆ. ಮಾಜಿ ಶಾಸಕರ ಬೆಂಬಲಿಗರು ರಾಜ್ಯ ನಾಯಕರನ್ನು ಭೇಟಿ ಮಾಡಿ ಒತ್ತಡ ಹಾಕಲಾರಂಭಿಸಿದ್ದಾರೆ. ನಿಗಮ-ಮಂಡಳಿ ನೇಮಕಾತಿಗೆ 37 ಜನ ಶಾಸಕರು ಮತ್ತು 39 ಕಾರ್ಯಕರ್ತರ ಹೆಸರುಗಳನ್ನು ರಾಜ್ಯ ನಾಯಕರು ಮತ್ತು ಹೈಕಮಾಂಡ್ ಅಂತಿಮಗೊಳಿಸಿರುವುದಾಗಿ 'ಕನ್ನಡಪ್ರಭ' ಜ.18ರಂದು ವರದಿ ಪ್ರಕಟಿಸಿತ್ತು. 

ವರದಿಯಲ್ಲಿ 37 ಶಾಸಕರು ಯಾರು ಹಾಗೂ ಅವರಿಗೆ ಯಾವ ನಿಗಮ- ಮಂಡಳಿ ಸ್ಥಾನಗಳು ದೊರೆಯಲಿವೆ ಎಂಬ ಪೂರ್ಣ ಪಟ್ಟಿಯನ್ನು ಬಹಿರಂಗಪಡಿಸಿತ್ತು. ಇದರ ಬೆನ್ನಲ್ಲೇ ಮಾಜಿ ಶಾಸಕರಿಗೂ ನಿಗಮ-ಮಂಡಳಿ ಸ್ಥಾನ ನೀಡಬೇಕೆಂಬ ಕೂಗು ಎದ್ದಿದೆ. 

Tap to resize

Latest Videos

ನಿಗಮ-ಮಂಡಳಿ ಪಟ್ಟಿಗೆ ಜ.26ವರೆಗೆ ಕಾಂಗ್ರೆಸ್‌ ಬ್ರೇಕ್‌: ಕಾರಣ ಇಲ್ಲಿದೆ!

ಸೋಮವಾರ ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿವಾಸಗಳಿಗೆ ಭೇಟಿ ನೀಡಿದ ಕೆ.ಆ‌ರ್.ಪೇಟೆ ಮಾಜಿ ಶಾಸಕ ಬಿ.ಕೆ.ಚಂದ್ರಶೇಖರ್ ಅವರ ಬೆಂಬಲಿಗರು ತಮ್ಮ ನಾಯಕರಿಗೆ ಸ್ಥಾನ ನೀಡಬೇಕೆಂದು ಮನವಿ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಕೆಲ ಸ್ಥಳೀಯ ಕಾರ್ಯಕರ್ತರು, ಮಾಜಿ ಶಾಸಕರುಗಳು ಕೂಡ ಪಕ್ಷ ಸಂಘಟನೆಗೆ ಬಹಳಷ್ಟು ಶ್ರಮಿಸಿದ್ದಾರೆ. ಹೀಗಾಗಿ ಅವರಿಗೂ ಸ್ಥಾನಮಾನ ನೀಡುವುದಾಗಿ ನಾಯಕರು ಭರವಸೆ ನೀಡಿದ್ದರು. ಆದರೆ, ಈಗ 'ಕನ್ನಡಪ್ರಭ'ದಲ್ಲಿ ಬಹಿರಂಗವಾಗಿರುವ ಪಟ್ಟಿಯಲ್ಲಿ ಹಾಲಿ ಶಾಸಕರಿಗೆ ಮಾತ್ರ ಅವಕಾಶ ನೀಡಿರುವುದು ಬೇಸರವಾಗಿದೆ ಎಂದರು.

click me!