ಜಾಗತಿಕ ಉಗ್ರ ಸಂಘಟನೆಗಳ ಜೊತೆ ಸಂಬಂಧ ಹಿನ್ನೆಲೆ ನಿಷೇಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿಷೇಧ ಮಾಡಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿರುವ ನಿರ್ಧಾರವನ್ನು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸ್ವಾಗತಿಸಿದ್ದಾರೆ.
ಬೆಂಗಳೂರು (ಸೆ.28): ಜಾಗತಿಕ ಉಗ್ರ ಸಂಘಟನೆಗಳ ಜೊತೆ ಸಂಬಂಧ ಹಿನ್ನೆಲೆ ನಿಷೇಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿಷೇಧ ಮಾಡಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿರುವ ನಿರ್ಧಾರವನ್ನು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸ್ವಾಗತಿಸಿದ್ದಾರೆ. ಈ ಬಗ್ಗೆ ಟ್ವೀಟರ್‌ನಲ್ಲಿ, ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ನೋಡುವುದಾದರೆ ಧರ್ಮಾಧಾರಿತವಾಗಿ ಸಾಮಾಜಿಕ ಸಾಮರಸ್ಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ PFI ನಂತಹ ಧಾರ್ಮಿಕ ಅತಿರೇಕದ ಸಂಘಟನೆಗಳನ್ನು 5 ವರ್ಷದವರೆಗೆ ಬ್ಯಾನ್ ಮಾಡಿರುವುದು ಸ್ವಾಗತಾರ್ಹ ಬೆಳವಣಿಗೆ ಆಗಿದೆ. ಜೊತೆಗೆ ಸರ್ಕಾರವು ಯಾವ ಮಾನದಂಡಗಳನ್ನು ಅನುಸರಿಸಿ PFI ಸಂಘಟನೆಯನ್ನು ಬ್ಯಾನ್ ಮಾಡಿದೆಯೋ ಆ ಮಾನದಂಡಗಳು ನಿಜವಾಗಿದ್ದರೆ, ಅದು RSS, SDPI, ಭಜರಂಗ ದಳ, ಹಿಂದೂ ಪರಿಷತ್ ಹಾಗೂ ಶ್ರೀರಾಮ ಸೇನೆಯಂತಹ ಧಾರ್ಮಿಕ ತೀವ್ರವಾದಿ ಸಂಘಟನೆಗಳಿಗೂ ಅನ್ವಯಿಸುವುದರಿಂದ ಅಂತಹ ಸಂಘಟನೆಗಳನ್ನೂ ಬ್ಯಾನ್ ಮಾಡುವುದು ಸೂಕ್ತ ಮತ್ತು ನ್ಯಾಯಯುತವಾದ ನಡೆ ಎಂದು ಬರೆದುಕೊಂಡಿದ್ದಾರೆ.
ನಾನು ಗಮನಿಸಿದಂತೆ ಹಿಂದೂಪರ ಸಂಘಟನೆಗಳಿಂದ ಹಿಂದೂಗಳ ರಕ್ಷಣೆ ಆಗುವುದಿಲ್ಲ ಎಂಬುದಕ್ಕೆ ಮೊನ್ನೆಯ ಕೋಲಾರದ ಬಾಲಕನ ಮೇಲೆ ಹೇರಿದ ಸಂವಿಧಾನ ಬಾಹಿರವಾದ ಹಲ್ಲೆ ಮತ್ತು ಬಹಿಷ್ಕಾರವು ಒಂದು ಜೀವಂತ ಸಾಕ್ಷಿಯಾದರೆ ಮುಸ್ಲಿಂ ಪರ ಸಂಘಟನೆಗಳಿಂದ ಮುಸ್ಲಿಮರಿಗೆ ರಕ್ಷಣೆ ಸಿಗುವುದಿಲ್ಲ ಎಂಬುದೂ ಕೂಡಾ ವಾಸ್ತವವಾಗಿದೆ. ಇನ್ನು ಈ ಎರಡೂ ಧಾರ್ಮಿಕ ಸಂಘಟನೆಗಳು ಜನ ಸಾಮಾನ್ಯರಿಗೆ ಕಂಟಕವಾಗಿರುವ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಅಡುಗೆ ಅನಿಲದ ಬೆಲೆ ಏರಿಕೆ, ಅಕ್ಕಿ ಬೇಳೆ, ಎಣ್ಣೆ ಹಾಗೂ ಇತ್ಯಾದಿ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ ಆದಿಯಾಗಿ ಜನ ಸಾಮಾನ್ಯರ ಬದುಕಿಗೆ ಕಂಟಕವಾಗಿರುವ ಯಾವ ಸಮಸ್ಯೆಗಳ ಬಗ್ಗೆಯೂ ಇವರು ಮಾತನಾಡಿದ ಉದಾಹರಣೆಯನ್ನು ನಾನಂತೂ ಕಾಣಲಿಲ್ಲ ಎಂದು ತಿಳಿಸಿದ್ದಾರೆ.
ಪಿಎಫ್‌ಐ ನಿಷೇಧ: ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಸಚಿವ ನಿರಾಣಿ-ಮಾಜಿ ಸಚಿವ ಈಶ್ವರಪ್ಪ
ಬರೀ ಧರ್ಮದ ಆಧಾರದಲ್ಲಿ ಜನರಲ್ಲಿ ಭಯ ಹುಟ್ಟಿಸುವ ಇವರಿಂದ ಶ್ರಮಿಕ ಹಿಂದೂಗಳಿಗಾಗಲೀ ಶ್ರಮಿಕ ಮುಸಲ್ಮಾನರಿಗಾಗಲೀ ಯಾವುದೇ ಪ್ರಯೋಜನ ಇಲ್ಲ ಎಂದಾದ ಮೇಲೆ ಸಮಾಜದಲ್ಲಿ ಬರೀ ಜಗಳಕ್ಕೆ ಕಾರಣವಾಗುವ ಇಂತಹ ಬೇಜವಾಬ್ದಾರಿ ಸಂಘಟನೆಗಳ ಅವಶ್ಯಕತೆ ಏನಿದೆ?. ಹಿಂದೂಪರ ಸಂಘಟನೆಗಳಿಂದ ಹಿಂದೂಗಳ ರಕ್ಷಣೆ ಆಗುವುದಿಲ್ಲ. ಮುಸ್ಲಿಂ ಪರ ಸಂಘಟನೆಗಳಿಂದ ಮುಸ್ಲಿಮರ ರಕ್ಷಣೆ ಆಗುವುದಿಲ್ಲ. ಎಲ್ಲರ ರಕ್ಷಣೆ ಆಗುವುದು ಈ ದೇಶದ ಸಂವಿಧಾನದಿಂದ ಮಾತ್ರ. ಹೀಗಾಗಿ ಹಿಂದೂ ಮುಸ್ಲಿಂ ಎನ್ನದೇ ಎಲ್ಲರನ್ನೂ ರಕ್ಷಿಸುವ ಸಂವಿಧಾನವನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಮಹದೇವಪ್ಪ ಅವರು ಸರಣಿ ಟ್ವೀಟ್ ಮಾಡಿದ್ದಾರೆ.
PFI Ban: ಇಷ್ಟು ಸಾಕಾಗುವುದಿಲ್ಲ, ಸಮಾಜವು ಈ ನಿಟ್ಟಿನಲ್ಲಿ ಚಿಂತನೆ ನಡೆಸಬೆಕು: ಸಿ.ಟಿ.ರವಿ
ಬ್ಯಾನ್ ಯಾಕೆ?: ಇಸ್ಲಾಂ ಸಂಘಟನೆಯ ವಿರುದ್ಧ ದೇಶದ ಹಲವು ರಾಜ್ಯಗಳಲ್ಲಿ ಎನ್‌ಐಎ ರೇಡ್ ನಡೆಸಿತ್ತು. ಅಲ್ಲದೆ, PFI ಯೊಂದಿಗೆ ಸಂಬಂಧ ಹೊಂದಿರುವ 200 ಕ್ಕೂ ಹೆಚ್ಚು ಜನರನ್ನು ಬಂಧಿಸಿದ ನಂತರ ಕೇಂದ್ರ ಸರ್ಕಾರ ಈ ಅಧಿಸೂಚನೆ ಹೊರಡಿಸಿದೆ. ಉತ್ತರ ಪ್ರದೇಶ, ಕರ್ನಾಟಕ, ಗುಜರಾತ್, ದೆಹಲಿ, ಮಹಾರಾಷ್ಟ್ರ, ಅಸ್ಸಾಂ ಮತ್ತು ಮಧ್ಯಪ್ರದೇಶದಲ್ಲಿ ರಾತ್ರೋರಾತ್ರಿ ಹಲವರನ್ನು ಬಂಧಿಸಲಾಗಿತ್ತು. ಇದಕ್ಕೂ ಮುನ್ನ, ಸೆಪ್ಟೆಂಬರ್ 22 ರಂದು, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನೇತೃತ್ವದ ಬಹು-ಏಜೆನ್ಸಿ ತಂಡಗಳು ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸಿದ ಆರೋಪದ ಮೇಲೆ 15 ರಾಜ್ಯಗಳಲ್ಲಿ PFI ನ 106 ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸಿದವು.
ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ನೋಡುವುದಾದರೆ ಧರ್ಮಾಧಾರಿತವಾಗಿ ಸಾಮಾಜಿಕ ಸಾಮರಸ್ಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ PFI ನಂತಹ ಧಾರ್ಮಿಕ ಅತಿರೇಕದ ಸಂಘಟನೆಗಳನ್ನು 5 ವರ್ಷದವರೆಗೆ ಬ್ಯಾನ್ ಮಾಡಿರುವುದು ಸ್ವಾಗತಾರ್ಹ ಬೆಳವಣಿಗೆ ಆಗಿದೆ.
1/n
ಜೊತೆಗೆ
ಸರ್ಕಾರವು ಯಾವ ಮಾನದಂಡಗಳನ್ನು ಅನುಸರಿಸಿ PFI ಸಂಘಟನೆಯನ್ನು ಬ್ಯಾನ್ ಮಾಡಿದೆಯೋ ಆ ಮಾನದಂಡಗಳು ನಿಜವಾಗಿದ್ದರೆ, ಅದು RSS, SDPI, ಭಜರಂಗ ದಳ, ಹಿಂದೂ ಪರಿಷತ್ ಹಾಗೂ ಶ್ರೀರಾಮ ಸೇನೆಯಂತಹ ಧಾರ್ಮಿಕ ತೀವ್ರವಾದಿ ಸಂಘಟನೆಗಳಿಗೂ ಅನ್ವಯಿಸುವುದರಿಂದ ಅಂತಹ ಸಂಘಟನೆಗಳನ್ನೂ ಬ್ಯಾನ್ ಮಾಡುವುದು ಸೂಕ್ತ ಮತ್ತು ನ್ಯಾಯಯುತವಾದ ನಡೆ
2/n
ನಾನು ಗಮನಿಸಿದಂತೆ
ಹಿಂದೂಪರ ಸಂಘಟನೆಗಳಿಂದ ಹಿಂದೂಗಳ ರಕ್ಷಣೆ ಆಗುವುದಿಲ್ಲ ಎಂಬುದಕ್ಕೆ ಮೊನ್ನೆಯ ಕೋಲಾರದ ಬಾಲಕನ ಮೇಲೆ ಹೇರಿದ ಸಂವಿಧಾನ ಬಾಹಿರವಾದ ಹಲ್ಲೆ ಮತ್ತು ಬಹಿಷ್ಕಾರವು ಒಂದು ಜೀವಂತ ಸಾಕ್ಷಿಯಾದರೆ
ಮುಸ್ಲಿಂ ಪರ ಸಂಘಟನೆಗಳಿಂದ ಮುಸ್ಲಿಮರಿಗೆ ರಕ್ಷಣೆ ಸಿಗುವುದಿಲ್ಲ ಎಂಬುದೂ ಕೂಡಾ ವಾಸ್ತವವಾಗಿದೆ.
3/n
ಇನ್ನು ಈ ಎರಡೂ ಧಾರ್ಮಿಕ ಸಂಘಟನೆಗಳು ಜನ ಸಾಮಾನ್ಯರಿಗೆ ಕಂಟಕವಾಗಿರುವ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಅಡುಗೆ ಅನಿಲದ ಬೆಲೆ ಏರಿಕೆ, ಅಕ್ಕಿ ಬೇಳೆ, ಎಣ್ಣೆ ಹಾಗೂ ಇತ್ಯಾದಿ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ ಆದಿಯಾಗಿ ಜನ ಸಾಮಾನ್ಯರ ಬದುಕಿಗೆ ಕಂಟಕವಾಗಿರುವ ಯಾವ ಸಮಸ್ಯೆಗಳ ಬಗ್ಗೆಯೂ ಇವರು ಮಾತನಾಡಿದ ಉದಾಹರಣೆಯನ್ನು ನಾನಂತೂ ಕಾಣಲಿಲ್ಲ.
4/n
ಬರೀ ಧರ್ಮದ ಆಧಾರದಲ್ಲಿ ಜನರಲ್ಲಿ ಭಯ ಹುಟ್ಟಿಸುವ ಇವರಿಂದ ಶ್ರಮಿಕ ಹಿಂದೂಗಳಿಗಾಗಲೀ ಶ್ರಮಿಕ ಮುಸಲ್ಮಾನರಿಗಾಗಲೀ ಯಾವುದೇ ಪ್ರಯೋಜನ ಇಲ್ಲ ಎಂದಾದ ಮೇಲೆ ಸಮಾಜದಲ್ಲಿ ಬರೀ ಜಗಳಕ್ಕೆ ಕಾರಣವಾಗುವ ಇಂತಹ ಬೇಜವಾಬ್ದಾರಿ ಸಂಘಟನೆಗಳ ಅವಶ್ಯಕತೆ ಏನಿದೆ?
5/n
ಹಿಂದೂಪರ ಸಂಘಟನೆಗಳಿಂದ ಹಿಂದೂಗಳ ರಕ್ಷಣೆ ಆಗುವುದಿಲ್ಲ
ಮುಸ್ಲಿಂ ಪರ ಸಂಘಟನೆಗಳಿಂದ ಮುಸ್ಲಿಮರ ರಕ್ಷಣೆ ಆಗುವುದಿಲ್ಲ
ಎಲ್ಲರ ರಕ್ಷಣೆ ಆಗುವುದು ಈ ದೇಶದ ಸಂವಿಧಾನದಿಂದ ಮಾತ್ರ.
ಹೀಗಾಗಿ ಹಿಂದೂ ಮುಸ್ಲಿಂ ಎನ್ನದೇ ಎಲ್ಲರನ್ನೂ ರಕ್ಷಿಸುವ ಸಂವಿಧಾನವನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ
6/n