ಮಾಜಿ ಸಚಿವ, ರಾಜಕೀಯ ಮುಸ್ಸದಿ ಡಿ.ಬಿ.ಚಂದ್ರೇಗೌಡರ ಪಾರ್ಥಿವ ಶರೀರಕ್ಕೆ ಪುತ್ರಿ ವೀಣಾ ಚಿತೆಗೆಅಗ್ನಿ ಸ್ಪರ್ಶಿಸುವುದರೊಂದಿಗೆ ಪಂಚಭೂತಗಳಲ್ಲಿ ಲೀನವಾದರು.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ನ.08): ಮಾಜಿ ಸಚಿವ, ರಾಜಕೀಯ ಮುಸ್ಸದಿ ಡಿ.ಬಿ.ಚಂದ್ರೇಗೌಡರ ಪಾರ್ಥಿವ ಶರೀರಕ್ಕೆ ಪುತ್ರಿ ವೀಣಾ ಚಿತೆಗೆಅಗ್ನಿ ಸ್ಪರ್ಶಿಸುವುದರೊಂದಿಗೆ ಪಂಚಭೂತಗಳಲ್ಲಿ ಲೀನವಾದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಡಿ.ಬಿ. ಚಂದ್ರೇಗೌಡರು ನಿನ್ನೆ ಮೃತರಾಗಿದ್ದು, ಇಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿಯಲ್ಲಿನ ಅವರ ಪೂರ್ಣಚಂದ್ರ ಎಸ್ಟೇಟ್ ನಲ್ಲಿ ಸಕಲ ಸರ್ಕಾರಿ ಗೌರವ ಗಳೊಂದಿಗೆ ಅಂತ್ಯಕ್ರೀಯೆ ನಡೆಸಲಾಯಿತು.ಇದಕ್ಕೂ ಮೊದಲು ಅವರ ಸ್ವಗೃಹದ ಆವರಣದಲ್ಲಿ ಪ್ರಾರ್ಥಿವ ಶರೀರ ಸಾರ್ವ ಜನಿಕ ದರ್ಶನಕ್ಕೆ ಇರಿಸಲಾಗಿತ್ತು.
undefined
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿಧಾನಸಭೆ ಸಭಾಪತಿ ಯು.ಟಿ.ಖಾದರ್, ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಪಿ.ಜಿ.ಆರ್ ಸಿಂದ್ಯಾ, ಗೃಹ ಇಲಾಖೆ ಮಾಜಿ ಸಚಿವ ಆರಗ ಜ್ಞಾನೇಂದ್ರ,ಮಾಜಿ ಸಚಿವ, ಶಾಸಕ ಡಿ.ಎನ್.ಜೀವರಾಜ್, ಅಶ್ವಿನಿ ಪುನೀತ್ ರಾಜ್ ಕುಮಾರ್, ಡಿ.ಕೆ.ತಾರಾದೇವಿ, ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್.ಶಂಕರ್, ಎಚ್.ಎಂ.ವಿಶ್ವನಾಥ್, ಟಿ.ಡಿ.ರಾಜೇಗೌಡ, ನಯನ ಮೋಟಮ್ಮ, ಕೆ.ಎಸ್. ಆನಂದ್, ಎಚ್.ಡಿ.ತಮ್ಮಯ್ಯ, ಜಿ.ಎಚ್.ಶ್ರೀನಿವಾಸ್, ಡಾ.ಮೋಟಮ್ಮ ಅಂತಿಮ ದರ್ಶನ ಪಡೆದರು.
ಕೇಂದ್ರದ ಕಡೆ ಕೈ ತೋರುವ ಬದಲು ತಮ್ಮ ಕೆಲಸ ಮಾಡಲಿ: ಸಿಎಂಗೆ ಎಚ್‌ಡಿಕೆ ತಿರುಗೇಟು
ನಾಲ್ಕು ಸದನದಲ್ಲೂ ಸದಸ್ಯರಾಗೋದು ತೀರಾ ಅಪರೂಪ: ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಚಂದ್ರೇಗೌಡ ಅವರು ಒಳ್ಳೆ ಸ್ಪೀಕರ್ ಎಂದು ಪ್ರಶಂಸೆ ಪಡೆದುಕೊಂಡಿದ್ದರು. ಅಂದು ಸ್ಪೀಕರ್ ಆಗಿ ಕೆಲಸ ಮಾಡುವುದು ಬಹಳ ಕಷ್ಟ ಇತ್ತು ಎಂದು ಹೇಳಿದರು.ಬಿಜೆಪಿ ಬೆಂಬಲ ಪಡೆದು ಆಗ ರಾಮಕೃಷ್ಣ ಹೆಗ್ಡೆ ಮುಖ್ಯಮಂತ್ರಿ ಆಗಿದ್ದರು. ಚಂದ್ರೇಗೌಡರು ಸ್ಪೀಕರ್ ಆಗಿ ಚಾಕಚಕ್ಯತೆಯಿಂದ ಕೆಲಸ ಮಾಡಿದ್ದರು. ನಂತರ ಜನತಾ ಪಾರ್ಟಿಯಲ್ಲಿ ಬಹಳ ದಿನ ನಮ್ಮ ಜೊತೆಯಲ್ಲಿ ಇದ್ದರು.
ಮತ್ತೆ ಕಾಂಗ್ರೆಸ್ ಸೇರಿ ಶಾಸಕರು, ಸಚಿವರಾಗಿ ಸೇವೆ ಸಲ್ಲಿಸಿದ್ದರು ಎಂದರು. ಅವರು ರಾಜಕೀಯವಾಗಿ ನಾಲ್ಕು ಸದನದಲ್ಲೂ ಸದಸ್ಯರಾಗಿದ್ದರು.ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನ ಪರಿಷತ್ ನಾಲ್ಕೂ ಸದನವನ್ನೂ ಪ್ರತಿನಿಧಿಸಿದ್ದರು. ಆ ರೀತಿ ನಾಲ್ಕು ಸದನದಲ್ಲೂ ಸದಸ್ಯರಾಗೋದು ತೀರಾ ಅಪರೂಪ ಎಂದರು.87 ವರ್ಷದ ಅವರು ನಮ್ಮನ್ನ ಅಗಲಿದ್ದಾರೆ. ಅವರ ಸಾವಿನಿಂದ ರಾಜ್ಯಕ್ಕೆ ನಷ್ಟವಾಗಿದೆ. ಅವರ ಕುಟುಂಬಕ್ಕೆ ದೇವರು ನಷ್ಟ ಭರಿಸುವ ಶಕ್ತಿ ನೀಡಲಿ ಎಂದರು.
ಎಚ್.ಡಿ.ರೇವಣ್ಣ ಕಂಡರೆ ಮೊದಲಿನಿಂದಲೂ ಪ್ರೀತಿ: ಸಿಎಂ ಸಿದ್ದರಾಮಯ್ಯ
ಸರ್ಕಾರಿ ಗೌರವ ಗಳೊಂದಿಗೆ ಅಂತ್ಯಕ್ರಿಯೆ: ಜಿಲ್ಲಾ ಪೊಲೀಸ್ ಇಲಾಖೆಯಿಂದ ಮೃತರ ಗೌರವಾರ್ಥವಾಗಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ಪಾರ್ಥಿವ ಶರೀರದ ಮೇಲೆ ಹೊದಿಸಲಾಗಿದ್ದ ತ್ರಿವರ್ಣ ಧ್ವಜವನ್ನು ಗೌರವ ಪೂರ್ವಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.ಬಿ.ಚಂದ್ರೇಗೌಡ ಅವರ ಪತ್ನಿ ಪೂರ್ಣಿಮಾ ಅವರಿಗೆ ಹಸ್ತಾಂತರಿಸಿದರು.ಕುಟುಂಬಸ್ಥರು ಪಾರ್ಥಿವ ಶರೀರಕ್ಕೆ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ದಾರದಹಳ್ಳಿ ಸ್ವಗೃಹದ ಪೂರ್ಣಚಂದ್ರಎಸ್ಟೇಟ್ ನಲ್ಲಿ ಹಿರಿಯ ಮಗಳು ವೀಣಾ ಚಿತೆಗೆ ಅಗ್ನಿಸ್ಪರ್ಶ ಮಾಡಿದ ಬಳಿಕ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾಗುವುದರೊಂದಿಗೆ ಜಿಲ್ಲೆ ಮುಸ್ಸದಿ ರಾಜಕಾರಣಿಯನ್ನು ಕಳೆದುಕೊಂಡಾಂತಾಯಿತು.