
ಬೆಂಗಳೂರು: ಜಮಖಂಡಿಯಲ್ಲಿ ನಡೆದ ಉಪ ಚುನಾವಣೆ ವೇಳೆ ಇವಿಎಂ ಮತಯಂತ್ರ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಅರವಿಂದ್ ಲಿಂಬಾವಳಿ ಆರೋಪಿಸಿದರು.
ಇವಿಎಂ ಯಂತ್ರ ಕೊಂಡೊಯ್ಯಲು ಮಾಜಿ ಸಚಿವ ಎಂ.ಬಿ. ಪಾಟೀಲ್‌ಗೆ ಸೇರಿದ ಕಾಲೇಜಿನ ಬಸ್ಸು ಹಾಗೂ ಜೆಡಿಎಸ್‌ನ ಕೊನ್ನೂರ್ ಶಾಲಾ ವಾಹನ ಬಳಕೆ ಮಾಡಲಾಗಿದೆ. ಇದರ ವಿರುದ್ಧ ಪ್ರತಿಭಟನೆ ಮಾಡಿದವರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ. ಹೀಗಾಗಿ ಈ ಸಂಬಂಧ ತನಿಖೆ ಆಗಬೇಕು.
ಬಳಿಕ ಮತ ಎಣಿಕೆ ಮಾಡಬೇಕು ಎಂದು ಆಗ್ರಹಿಸಿದರು. ಈ ಹಿಂದೆ ಬಬಲೇಶ್ವರದಲ್ಲಿ ಮತ ಯಂತ್ರಗಳು ಸಿಕ್ಕಿತ್ತು. ಈ ಬಾರಿಯೂ ಜಮಖಂಡಿಯಲ್ಲಿ ಅದೇ ರೀತಿ ಮಾಡಿರಬೇಕು. ಈ ಬಗ್ಗೆ ದೂರು ನೀಡಿದರೂ ಚುನಾವಣಾಧಿಕಾರಿ ಖಾಸಗಿ ವಾಹನ ಬಳಸಲು ಅವಕಾಶ ಇದೆ ಎಂದು ಹೇಳಿದ್ದಾರೆ. ಎಸ್‌ಪಿ ಹಾಗೂ ಡಿಸಿ ಮತ ಕೇಂದ್ರಕ್ಕೆ ಬರುವ ಜನರ ಮೇಲೆ ಗೊಂದಲ ಸೃಷ್ಟಿಸಿ ಮತದಾನ ಪ್ರಮಾಣ ಕಡಿಮೆ ಮಾಡಲು ಯತ್ನಿಸಿದರು. ಈ ಬಗ್ಗೆಯೂ ಚುನಾವಣಾಧಿಕಾರಿಗಳು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ