ಮಕ್ಕಳು ಚಿಕ್ಕವರಾದ್ರೂ ಮನಸ್ಸು ದೊಡ್ಡದು ಅಲ್ಲವಾ? ನಿಷ್ಕಲ್ಮಶ ಪ್ರೀತಿಯ ವಿಡಿಯೋ ನೋಡಿ

Published : Sep 25, 2026, 10:57 AM IST
Video

ಸಾರಾಂಶ

ಇಬ್ಬರು ಪುಟ್ಟ ಮಕ್ಕಳು ತಾವು ಕೂಡಿಟ್ಟ ಹಣದಿಂದ ಫ್ಯಾನ್ಸಿ ಸ್ಟೋರ್‌ಗೆ ಹೋಗಿ ತಮ್ಮ ದೊಡ್ಡಮ್ಮನಿಗೆ ವಿಶೇಷವಾದ ಉಡುಗೊರೆಯನ್ನು ಖರೀದಿಸಿದ್ದಾರೆ. ಸೈಕಲ್ ಕೊಡಿಸಿದ ದೊಡ್ಡಮ್ಮನಿಗೆ ರಿಟರ್ನ್ ಗಿಫ್ಟ್ ಕೊಡುವ ಈ ಕ್ಯೂಟ್ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.

ಮಕ್ಕಳಲ್ಲಿ ದೇವರನ್ನು ಕಾಣಬೇಕೆಂದು ಹಿರಿಯರು ಹೇಳುತ್ತಾರೆ. ಮಕ್ಕಳ ಮುದ್ದು ಮಾತುಗಳನ್ನು ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಇಬ್ಬರು ಮಕ್ಕಳು ತಾವು ಕೂಡಿಟ್ಟ ಹಣದ ಜೊತೆ ಫ್ಯಾನ್ಸಿ ಸ್ಟೋರ್‌ಗೆ ಹೋಗಿ ವಿಶೇಷವಾದ ಗಿಫ್ಟ್ ಖರೀದಿಸಿದ್ದಾರೆ. ಮಕ್ಕಳೊಂದಿಗೆ ಅಂಗಡಿಯವ ಚುಟುಕಾಗಿ ಮಾತನಾಡಿದ್ದು, ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸದ್ಯ ವೈರಲ್ ಆಗುತ್ತಿದೆ. ಬೆಂಗಳೂರಿನ ಫ್ಯಾನ್ಸಿ ಸ್ಟೋರ್‌ಗೆ ಬಂದು ಮಕ್ಕಳು ಖರೀದಿಸಿದ್ದು ಏನು ಎಂದು ನೋಡೋಣ ಬನ್ನಿ.

ಈ ವೈರಲ್ ವಿಡಿಯೋವನ್ನು _raitana.maga_ ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಇಲ್ಲಿಯವರೆಗೆ 9 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದೆ. ಈ ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು, ಮಕ್ಕಳ ಪ್ರೀತಿಗೆ ಧನ್ಯವಾದಗಳು. ಇಂಥ ಸಂಬಂಧಗಳೆಲ್ಲ ಜೀವಂತವಾಗಿರುವುದೇ ಅನುಗ್ರಹ. ಪುಟ್ಟ ಮಕ್ಕಳ ಪ್ರೀತಿ ಅನನ್ಯವಾದದ್ದು ಎಂದು ಕಮೆಂಟ್ ಮಾಡಿದ್ದಾರೆ. ಹಾಗೆಯೇ ಮಕ್ಕಳ ತಂದ ಹಣದಲ್ಲಿಯೇ ಉತ್ತಮವಾದ ಗಿಫ್ಟ್ ಕೊಟ್ಟಿರೋ ವ್ಯಾಪಾರಿ ಬಗ್ಗೆಯೂ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಮಕ್ಕಳ ಖರೀದಿಸಿದ್ದು ಏನು?

ಇಬ್ಬರು ಮಕ್ಕಳು ಫ್ಯಾನ್ಸಿ ಸ್ಟೋರ್‌ಗೆ ಬಂದು ಕಿವಿಯೊಲೆ (ಜುಮಕಾ) ಖರೀದಿಸಿದ್ದಾರೆ. ವ್ಯಾಪಾರಿ ಯಾರಿಗೆ ಈ ಜುಮಕಾ ಖರೀದಿಸುತ್ತಿದ್ದೀರಿ? ಈ ಹಣ ಹೇಗೆ ನಿಮ್ಮ ಬಳಿ ಬಂತು ಎಂದು ಹಲವು ಪ್ರಶ್ನೆ ಕೇಳಿದ್ದಾರೆ. ಮಕ್ಕಳು ಮುಗ್ದತೆಯಿಂದಲೇ ಎಲ್ಲದಕ್ಕೂ ಉತ್ತರಿಸಿದ್ದಾರೆ. ಈ ಮಕ್ಕಳು ಅಣ್ಣ-ತಮ್ಮಂದಿರಾಗಿದ್ದು, ಅತ್ತೆಯೊಂದಿಗೆ ಅಂಗಡಿಗೆ ಬಂದಾಗ ರಹಸ್ಯವಾಗಿ ಜುಮಕಾ ಖರೀದಿಸಿದ್ದಾರೆ.

ಮಕ್ಕಳು ಹೇಳಿದ್ದೇನು?

ಈ ಜುಮಕಾವನ್ನು ನಮ್ಮ ದೊಡ್ಡಮ್ಮಳಿಗಾಗಿ ಖರೀದಿ ಮಾಡುತ್ತಿದ್ದೇವೆ. ದೊಡ್ಡಮ್ಮ ನಮ್ಮಿಬ್ಬರಿಗೂ 5 ಸಾವಿರ ರೂಪಾಯಿ ಬೆಲೆ ಎರಡು ಸೈಕಲ್ ಗಿಫ್ಟ್ ಕೊಟ್ಟಿದ್ದಾರೆ. ಅದಕ್ಕಾಗಿ ನಾವು ರಿಟರ್ನ್ ಗಿಫ್ಟ್ ಕೊಡಲು ಅಂಗಡಿಗೆ ಬಂದಿದ್ದೇವೆ ಎಂದು ಹೇಳಿದ್ದಾರೆ. ನಮ್ಮ ಅಪ್ಪಾ ದಿನವೂ ನಮಗೆ ಹಣ ಕೊಡ್ತಾರೆ. ಆ ಹಣವನ್ನು ಸೇವ್ ಮಾಡಿಕೊಂಡು ಇಲ್ಲಿಗೆ ತೆಗೆದುಕೊಂಡು ಬಂದಿದ್ದೇವೆ ಅಂತಾರೆ.

ಮಕ್ಕಳ ಬಳಿಯಲ್ಲಿದಿದ್ದು ಕೇವಲ 130 ರೂಪಾಯಿ

ನಂತರ ವ್ಯಾಪಾರಿ, ಈ ಜುಮಕಾ ಬೆಲೆ 180 ರೂಪಾಯಿ. ಆದ್ರೆ ನಾನು ನಿಮಗೆ 130 ರೂಪಾಯಿಯಲ್ಲಿಯೇ ಕೊಡುತ್ತೇನೆ. ಇದಕ್ಕೆ ಗಿಫ್ಟ್ ಕವರ್ ಫ್ರೀಯಾಗಿ ಹಾಕಿಕೊಡುತ್ತೇನೆ ಎಂದು ಹೇಳುತ್ತಾರೆ. ಅಷ್ಟರಲ್ಲಿಯೇ ಮಕ್ಕಳ ಹಿಂದೆ ಓರ್ವ ಮಹಿಳೆ ಬರುತ್ತಾರೆ. ಆಗ ಮಕ್ಕಳು ಇದು ನಮ್ಮ ಅತ್ತೆ ಎಂದು ಪರಿಚಯಿಸುತ್ತಾರೆ. ಆಗ ವ್ಯಾಪಾರಿ, ಮಕ್ಕಳು ಅವರ ದೊಡ್ಡಮ್ಮಳಿಗೆ ಗಿಫ್ಟ್ ಖರೀದಿಸಿದ್ದಾರೆ. ನಾವು ಗಿಫ್ಟ್ ಪ್ಯಾಕ್ ಮಾಡಿದ್ದು, ಅದರೊಳಗೆ ಏನಿದೆ ಎಂದು ನಾವು ಹೇಳಲ್ಲ. ಮಕ್ಕಳ ದೊಡ್ಡಮ್ಮ ಅವರಿಗೆ ಸರ್ಪೈಸ್ ಎಂದು ಹೇಳಿದ್ದಾರೆ.

ವಿಡಿಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

https://www.instagram.com/p/DdoPPi4NLZO/

ಇದನ್ನೂ ಓದಿ: Bengaluru: ನಗರದಲ್ಲಿ ಹೊಸ ಸ್ಕ್ಯಾಮ್; ಅಜ್ಜನೊಬ್ಬನ ವಿಡಿಯೋ ಸೆರೆ ಹಿಡಿದ ಬೈಕ್ ರೈಡರ್

ಇದನ್ನೂ ಓದಿ: ಉಚಿತ ರೂಮ್, ಫ್ರೀ ಊಟ! ‘ಫೇಕ್ ರೂಮ್‌ಮೇಟ್’ಗಾಗಿ ಬೆಂಗಳೂರು ಯುವತಿಯ ಪೋಸ್ಟ್ ವೈರಲ್!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸೌಜನ್ಯ ಪ್ರಕರಣ: ರಹಸ್ಯ ಭೇದಿಸಲು ರಚನೆಯಾಯ್ತು ವಿಶೇಷ ತಂಡ! ಟೀಂ ಅಲ್ಲಿ ಇರೋದು ಯಾರ್ಯಾರು?
ಪತಿಯ ಪ್ರೇಯಸಿ ಕುಟುಂಬದ ಸದಸ್ಯೆ ಅಥವಾ ಸಂಬಂಧಿ ಆಗುತ್ತಾಳೆಯೇ? ಹೈಕೋರ್ಟ್ ಹೇಳಿದ್ದೇನು?