
ಬೆಂಗಳೂರು(ಅ.29): ನಮ್ಮ ದೇಶ ಇನ್ನಷ್ಟು ವೇಗವಾಗಿ ಪ್ರಗತಿ ಸಾಧಿಸಲು ಎಂಜಿನಿಯರಿಂಗ್ ಕೌಶಲ್ಯ ಇನ್ನಷ್ಟು ಹೆಚ್ಚಾಗಬೇಕು. ಹೊಸದನ್ನು ಸಾಧಿಸುವ ಆಲೋಚನೆ, ಛಲ ಮೂಡಿಸಲು ಎಮಿನೆಂಟ್ ಎಂಜಿನಿಯರ್ ಪ್ರಶಸ್ತಿ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದರು.
‘ಯಾವುದೇ ಸರ್ಕಾರ, ಕಂಪನಿ, ಉದ್ಯಮದ ಯಶಸ್ಸು ಸಾಧಿಸಿದಾಗ ಕಣ್ಣ ಮುಂದೆ ಕಾಣಿಸುವವರು ಸರ್ಕಾರದ ಮುಖ್ಯಸ್ಥರು, ಕಂಪನಿ ಸಿಇಒಗಳು, ಮಾಲೀಕರು ಮಾತ್ರ. ಆದರೆ, ಆ ಯಶಸ್ಸಿನ ಹಿಂದೆ ಇರುವವರು ಎಂಜಿನಿಯರ್‌ಗಳು. ಅಂತಹ ಎಂಜಿನಿಯರ್‌ಗಳ ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಎಮಿನೆಂಟ್ ಎಂಜಿನಿಯರ್ ಕಾರ್ಯಕ್ರಮವನ್ನು ಕನ್ನಡ ಪ್ರಭ - ಸುವರ್ಣ ನ್ಯೂಸ್ ಮಾಡುತ್ತಿದೆ ಎಂದು ಅವರು ಹೇಳಿದರು.
ಕನ್ನಡಪ್ರಭ, ಏಷ್ಯಾನೆಟ್ ಸುವರ್ಣನ್ಯೂಸ್ ಪ್ರಶಸ್ತಿ ಪ್ರದಾನ: 25 ಸಾಧಕರಿಗೆ ಎಮಿನೆಂಟ್ ಇಂಜಿನಿಯರ್ ಅವಾರ್ಡ್
ರೈತರು, ವೈದ್ಯರು, ಕಲಾವಿದರು, ಮಹಿಳಾ ಸಾಧಕರು, ಅಸಾಮಾನ್ಯ ಕನ್ನಡಿಗರನ್ನು ಗುರುತಿಸಿ ಗೌರವಿಸಿರುವ ಕನ್ನಡಪ್ರಭ- ಸುವರ್ಣ ನ್ಯೂಸ್, ಈಗ ಎಂಜಿನಿಯರಿಂಗ್ ಕ್ಷೇತ್ರದಲ್ಲಿರುವವರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದೆ ಎಂದರು.
ಕರ್ನಾಟಕದಲ್ಲಿ ಮೂಲ ಸೌಕರ್ಯ ಕ್ಷೇತ್ರದಲ್ಲಿ ಅನೇಕ ಸಾಧನೆಗಳು ಆಗುತ್ತಿವೆ. ಅದ್ಭುತವಾದ ರಸ್ತೆಗಳು, ಮೆಟ್ರೋ, ನೀರಾವರಿ ಯೋಜನೆಗಳು, ಜಲಾಶಯ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳು ಜಾರಿಯಾಗುತ್ತಿವೆ. ಆದರೂ, ನಾವು ಈಗಲೂ ಹಿಂದೆ ಇದ್ದೇವೆ ಎನಿಸುತ್ತದೆ. ಏಕೆಂದರೆ, 200 ವರ್ಷಗಳ ಹಿಂದೆಯೇ ಲಂಡನ್ ಟ್ಯೂಬ್ (ಮೆಟ್ರೊ ರೈಲು) ರೈಲು ಸಂಚಾರ ಆರಂಭಿಸಿದೆ ಎಂದು ಅವರು ಹೇಳಿದರು.
ಅಮೆರಿಕದ ಹೆದ್ದಾರಿಗಳನ್ನು ನೂರು ವರ್ಷಗಳ ಹಿಂದೆಯೇ ನಿರ್ಮಿಸಲಾಗಿದೆ. ಅವುಗಳು ಇಂದಿಗೂ ಸದೃಢವಾಗಿ ಬಳಕೆಗೆ ಉಪಯುಕ್ತವಾಗಿವೆ. ಆದರೆ, ನಮ್ಮ ದೇಶದಲ್ಲಿ ಹೆದ್ದಾರಿ, ಎಕ್ಸ್‌ಪ್ರೆಸ್ ವೇ, ಮೆಟ್ರೋ ನಿರ್ಮಾಣದ ಪ್ರಾರಂಭಿಕ ಹಂತದಲ್ಲಿಯೇ ಇದ್ದೇವೆ. ದೇಶವು ಪ್ರಗತಿ ಸಾಧಿಸಲು ಎಂಜಿನಿಯರಿಂಗ್ ಕೌಶಲ್ಯ ಹೆಚ್ಚಾಗಬೇಕು. ಹೊಸದನ್ನು ಸಾಧಿಸುವ ಆಲೋಚನೆ, ಛಲವನ್ನು ಮೂಡಿಸಲು ಎಮಿನೆಂಟ್ ಎಂಜಿನಿಯರ್ ಪ್ರಶಸ್ತಿ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ರವಿ ಹೆಗಡೆ ನುಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ