Bengaluru ನಾಯಿಯನ್ನ ರಕ್ಷಣೆ ಮಾಡಿದ ಅಗ್ನಿಶಾಮಕದಳ, ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ

Published : Jul 10, 2022, 09:24 PM IST
Bengaluru ನಾಯಿಯನ್ನ ರಕ್ಷಣೆ ಮಾಡಿದ ಅಗ್ನಿಶಾಮಕದಳ, ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ

ಸಾರಾಂಶ

* ಮನಮಿಡಿಯುವಂತೆ ನಾಯಿಯನ್ನ ರಕ್ಷಣೆ ಮಾಡಿದ ಅಗ್ನಿದಳ ಸಿಬ್ಬಂದಿ * ಎಲೆಕ್ಟ್ರಾನಿಕ್ ಸಿಟಿ ಅಗ್ನಿ ಶಾಮಕದಳದ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಕಾರ್ಯಾಚರಣೆ * ಅಗ್ನಿಶಾಮಕದಳ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ

ಬೆಂಗಳೂರು, (ಜುಲೈ.10): ಅಗ್ನಿಶಾಮಕ ದಳ ಸಿಬ್ಬಂದಿ ನಾಯಿಯೊಂದನ್ನು ಮನಮಿಡಿಯುವ ರೀತಿ ರಕ್ಷಣೆ ಮಾಡಿದ್ದಾರೆ. ಸಾವು ಬದುಕಿನ ಮಧ್ಯೆ ನಿಂತಿದ್ದ ನಾಯಿಯನ್ನ ರಕ್ಷಿಸಿದ್ದಾರೆ.  ಎಲೆಕ್ಟ್ರಾನಿಕ್ ಸಿಟಿ ಅಗ್ನಿ ಶಾಮಕದಳದ ಠಾಣಾಧಿಕಾರಿ ಮಂಜುನಾಥ್ ನೇತೃತ್ವದ ತಂಡ ಮನೆಯೊಂದರ ಸಜ್ಜಾ ಮೇಲೆ ಇದ್ದ ನಾಯಿಯನ್ನು ರಕ್ಷಣೆ ಮಾಡಿದ್ದಾರೆ.

. ಎಲೆಕ್ಟ್ರಾನಿಕ್ ಸಿಟಿ ನಾಗನಾಥಪುರದಲ್ಲಿ ರಸ್ತೆ ಬಳಿ ಐದಾರು ನಾಯಿಗಳು ಸೇರಿ ಆಟವಾಡುತ್ತಿದ್ದ ವೇಳೆ ಆಟವಾಡಿಕೊಂಡ  ಅಪಾರ್ಟ್ಮೆಂಟ್ ಒಳಗೆ ಮೊದಲನೆ ಮಹಡಿಗೆ ನುಗ್ಗಿವೆ. ಈ ವೇಳೆ ಅಪಾರ್ಟ್ಮೆಂಟ್ ಮಾಲೀಕ ಓಡಿಸಲು ಮುಂದಾಗಿದ್ದಾನೆ.. ಈ ವೇಳೆ ಒಂದು ನಾಯಿಯನ್ನ ಬಿಟ್ಟು ಎಲ್ಲಾ ನಾಯಿಗಳು ಅಪಾರ್ಟ್ಮೆಂಟ್ ನಿಂದ ಓಡಿ ಹೋಗಿವೆ. ಆ ಒಂದು ನಾಯಿ ಮಾತ್ರ ಮಾಲೀಕನ ಆರ್ಭಟಕ್ಕೆ ಹೆದರಿ ಪಕ್ಕದ ಮನೆ ಮೇಲೆ ಹಾರಿದೆ. 

Bengaluru: ರಸ್ತೆಯಲ್ಲಿ ಮಲಗಿದ್ದ ಬೀದಿ ನಾಯಿ ಮೇಲೆ ಕಾರು ಹರಿಸಿ ಕೊಂದವನ ಸೆರೆ

ಈ ವೇಳೆ ಸ್ಲಿಪ್ ಆಗಿ ಪಕ್ಕದ ಮನೆ ಸಜ್ಜಾ ಮೇಲೆ ಬಿದ್ದಿದ್ದು ರಾತ್ರಿಯೆಲ್ಲಾ ಸಜ್ಜಾ ಮೇಲಿದ್ದು ಜೋರಾಗಿ ಕೂಗಾಡಿದೆ.. ನಾಯಿಯ  ಚೀರಾಟದಿಂದ  ಬೆಳಿಗ್ಗೆ ಎಚ್ಚರವಾದ ಸ್ಥಳೀಯರು ನಾಯಿಯನ್ನ ಹುಡುಕಾಟವನ್ನ ನಡೆಸಿದ್ದಾರೆ. ನಂತರ ಮನೆಯ ಸಜ್ಜೆ ಮೇಲೆ  ನಾಯಿ ಆತಂಕದಿಂದ ಕೂಗಾಟಮಾಡೊದನ್ನ ಗಮನಿಸಿದ್ದು ಸ್ಥಳೀಯರು ರಕ್ಷಣೆ ಮಾಡಲು ಮುಂದಾಗಿದ್ದಾರೆ.. ಈ ವೇಳೆ ಸ್ಥಳೀಯರ ಪ್ರಯತ್ನ ವಿಫಲವಾದಾಗ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿ ನಾಯಿಯನ್ನ ರಕ್ಷಣೆ ಮಾಡಿದ್ದಾರೆ.  ಇನ್ನೂ ರಕ್ಷಣೆ ಮಾಡುವ ಸಮಯದಲ್ಲಿ ನಾಯಿಯನ್ನ ಪ್ರೀತಿಯಿಂದ ಮಾತನಾಡಿಸುತ್ತಾ ರಕ್ಷಣೆ ಮಾಡಿದ್ದಾರೆ.. ಇನ್ನೂ ಸ್ಥಳೀಯರು ಅಗ್ನಿಶಾಮಕದಳ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಬೀದಿ ನಾಯಿ ಮೇಲೆ ಕಾರು ಹರಿಸಿ ಕೊಂದವನ ಸೆರೆ
ಇಂದಿರಾ ನಗರ ಸಮೀಪ ಮತ್ತೊಂದು ಬೀದಿ ನಾಯಿ ದಾರುಣವಾಗಿ ಹತ್ಯೆಗೀಡಾಗಿದೆ. ರಸ್ತೆಯಲ್ಲಿ ಮಲಗಿದ್ದ ಬೀದಿ ನಾಯಿ ಮೇಲೆ ಕಾರು ಹರಿಸಿ ಕೊಂದ ಆರೋಪದ ಮೇರೆಗೆ ಖಾಸಗಿ ಕಂಪನಿ ಕಾರು ಚಾಲಕನೊಬ್ಬನ್ನು ಇಂದಿರಾ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಕ್ಕೂರು ನಿವಾಸಿ ಅಮುಲ್‌ ರಾಜ್‌ ಬಂಧಿತನಾಗಿದ್ದು, ಎರಡು ದಿನಗಳ ಹಿಂದೆ ಇಂದಿರಾ ನಗರ 2ನೇ ಹಂತದಲ್ಲಿ ಕೆ.ಜಿ.ರಸ್ತೆಯ ‘ಬ್ರೋನಿ’ ಹೆಸರಿನ ಬೀದಿ ನಾಯಿ ಮೇಲೆ ರಾಜ್‌ ಕಾರು ಹರಿಸಿದ್ದ. 

ಈ ಬಗ್ಗೆ ಸ್ಥಳೀಯ ನಿವಾಸಿ ಸ್ನೇಹ ನಂದಿಹಾಳ್‌ ನೀಡಿದ ದೂರಿನ ಮೇರೆಗೆ ಆರೋಪಿ ಬಂಧನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಖಾಸಗಿ ಕಂಪನಿಯ ಕಾರು ಚಾಲಕನಾಗಿರುವ ರಾಜ್‌, ಜೂ.5ರಂದು ರಾತ್ರಿ 7ರ ಸುಮಾರಿಗೆ ಇಂದಿರಾ ನಗರದ 2ನೇ ಹಂತದಲ್ಲಿ ತನ್ನ ಸಂಬಂಧಿ ಮನೆಗೆ ಬಂದಿದ್ದ. ಅಲ್ಲಿಂದ ಮರಳುವಾಗ ಕಾರಿನ ಮುಂದೆ ಮಲಗಿದ್ದ ಬೀದಿ ನಾಯಿ ಮೇಲೆ ರಾಜ್‌ ಕಾರು ಹರಿಸಿದ್ದ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ನಾಯಿ ಮೃತಪಟ್ಟಿತ್ತು. ಈ ಕೃತ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅನುದಾನಿತ ಶಾಲೆಯಲ್ಲಿ 9ನೇ ಕ್ಲಾಸ್ ಹುಡ್ಗೀರ ಎಣ್ಣೆ ಪಾರ್ಟಿ; ವೈರಲ್ ವಿಡಿಯೋ ಆಧರಿಸಿ 6 ವಿದ್ಯಾರ್ಥಿನಿಯರು ಅಮಾನತು!
ವಿಶ್ವ ಕನ್ನಡ ಹಬ್ಬ' ಹೆಸರಿನಲ್ಲಿ ಕೋಟಿ ಕೋಟಿ ವಂಚನೆ ಆರೋಪ: ಮಹಿಳೆಯರಿಗೆ ಪದವಿ ಆಮಿಷ; ಸರ್ಕಾರದ ₹40 ಲಕ್ಷ ದುರ್ಬಳಕೆ!