ವಿದ್ಯುತ್‌ ದರ ಏರಿಕೆ: ಉತ್ತರ, ಮಧ್ಯ ಕರ್ನಾಟಕದಲ್ಲಿಂದು ಉದ್ಯಮ ಬಂದ್‌!

By Kannadaprabha News  |  First Published Jun 22, 2023, 5:43 AM IST

ವಿದ್ಯುತ್‌ ದರ ಏರಿಕೆ ಖಂಡಿಸಿ ಹುಬ್ಬಳ್ಳಿಯ ‘ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ’ ಗುರುವಾರ ರಾಜ್ಯ ಬಂದ್‌ಗೆ ಕರೆ ನೀಡಿದ್ದು, ಧಾರವಾಡ ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ವಹಿವಾಟು ಭಾಗಶಃ ಸ್ತಬ್ಧಗೊಳ್ಳುವ ಸಾಧ್ಯತೆಯಿದೆ. 


ಬೆಂಗಳೂರು (ಜೂ.22): ವಿದ್ಯುತ್‌ ದರ ಏರಿಕೆ ಖಂಡಿಸಿ ಹುಬ್ಬಳ್ಳಿಯ ‘ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ’ ಗುರುವಾರ ರಾಜ್ಯ ಬಂದ್‌ಗೆ ಕರೆ ನೀಡಿದ್ದು, ಧಾರವಾಡ ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ವಹಿವಾಟು ಭಾಗಶಃ ಸ್ತಬ್ಧಗೊಳ್ಳುವ ಸಾಧ್ಯತೆಯಿದೆ. ಬೆಳಗಾವಿ ವಾಣಿಜ್ಯೋದ್ಯಮ ಸಂಸ್ಥೆ, ಕಲ್ಯಾಣ ಕರ್ನಾಟಕ ವಾಣಿಜ್ಯ ಉದ್ಯಮ ಸೇರಿದಂತೆ ಉತ್ತರ ಕರ್ನಾಟಕ ಭಾಗದ 25 ವಾಣಿಜ್ಯೋದ್ಯಮ ಸಂಸ್ಥೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.

ಆದರೆ, ‘ಕರ್ನಾಟಕ ಬಂದ್‌’ನಲ್ಲಿ ಭಾಗವಹಿಸದಿರಲು ಎಫ್‌ಕೆಸಿಸಿಐ ಸೇರಿದಂತೆ ದಕ್ಷಿಣ ಕರ್ನಾಟಕ ಭಾಗದ ವಿವಿಧ ವಾಣಿಜ್ಯ ಸಂಘಟನೆಗಳು ನಿರ್ಧರಿಸಿವೆ. ಅಲ್ಲದೆ, ಎಫ್‌ಕೆಸಿಸಿಐ ತನ್ನ ಜಿಲ್ಲಾ ಘಟಕಗಳಿಗೂ ಬಂದ್‌ನಲ್ಲಿ ಭಾಗವಹಿಸದಂತೆ ಮನವಿ ಮಾಡಿದೆ. ಜೊತೆಗೆ, ಹಳೆ ಮೈಸೂರು ಭಾಗದ ಯಾವುದೇ ಸಂಘಟನೆ ಬಂದ್‌ಗೆ ಬೆಂಬಲ ಸೂಚಿಸಿಲ್ಲ. ದರ ಏರಿಕೆಯಿಂದ ಆಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜು.23ರಂದು ಸಭೆ ಕರೆದಿರುವ ಹಿನ್ನೆಲೆಯಲ್ಲಿ ಬಂದ್‌ನಿಂದ ದೂರು ಉಳಿಯಲು ಇವು ತೀರ್ಮಾನಿಸಿವೆ. ಹೀಗಾಗಿ, ಉತ್ತರ ಕರ್ನಾಟಕದ ಹಲವೆಡೆ ಬಿಟ್ಟರೆ, ಉಳಿದೆಡೆ ಬಂದ್‌ ಪರಿಣಾಮ ಬೀರುವ ಸಾಧ್ಯತೆ ಇಲ್ಲ.

Tap to resize

Latest Videos

ಕಾಂಗ್ರೆಸ್‌ಗೆ ಮತ ನೀಡಿರುವುದು ಕೆಲಸಕ್ಕೋ, ಹೈಕಮಾಂಡ್‌ ಗುಲಾಮಗಿರಿಗೋ?: ಎಚ್‌ಡಿಕೆ

ವಾಣಿಜ್ಯ ಚಟುವಟಿಕೆ ಬಂದ್‌: ಬಂದ್‌ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು, ಹೋಟೆಲ್‌ ಉದ್ದಿಮೆದಾರರು, ವರ್ತಕರು, ಕೈಗಾರಿಕೋದ್ಯಮಿಗಳು ತಮ್ಮ ವ್ಯಾಪಾರ ವಹಿವಾಟು ಬಂದ್‌ ಮಾಡಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆಯಾ ಜಿಲ್ಲೆಗಳ ಪ್ರಮುಖ ನಗರಗಳಲ್ಲಿ ಮೌನ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಹಾಗೂ ಆಯಾ ವ್ಯಾಪ್ತಿಯ ಎಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ. ವಿದ್ಯುತ್‌ ದರ ಏರಿಕೆ ವಾಪಸ್‌ ಪಡೆಯಲು ಆಗ್ರಹಿಸಲಿದ್ದಾರೆ. ಆದರೆ, ಶಾಲಾ-ಕಾಲೇಜು, ಸಾರಿಗೆ ವ್ಯವಸ್ಥೆ ಸೇರಿದಂತೆ ಅತ್ಯವಶ್ಯಕ ಸೇವೆಗಳು ಎಂದಿನಂತೆ ಇರಲಿವೆ. ಅಲ್ಲದೆ, ಎಲ್ಲಿಯೂ ಬಂದ್‌ನಲ್ಲಿ ಪಾಲ್ಗೊಳ್ಳುವಂತೆ ಬಲವಂತವಾಗಿ ಯಾರನ್ನೂ ಒತ್ತಾಯಿಸುವುದಿಲ್ಲ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಎಫ್‌ಕೆಸಿಸಿಐ ಭಾಗಿ ಇಲ್ಲ: ವಿದ್ಯುತ್‌ ದರ ಏರಿಕೆ ಖಂಡಿಸಿ ಹುಬ್ಬಳ್ಳಿಯ ‘ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ’ ಗುರುವಾರ ಕರೆ ನೀಡಿರುವ ‘ಕರ್ನಾಟಕ ಬಂದ್‌’ನಲ್ಲಿ ಭಾಗವಹಿಸದಿರಲು ಎಫ್‌ಕೆಸಿಸಿಐ ಸೇರಿದಂತೆ ವಿವಿಧ ವಾಣಿಜ್ಯ ಸಂಘಟನೆಗಳು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಯಾವುದೇ ಪರಿಣಾಮದ ಸಾಧ್ಯತೆ ದೂರವಾಗಿದೆ.

ದರ ಏರಿಕೆಯಿಂದ ಆಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜು.23ರಂದು ಸಭೆ ಕರೆದಿರುವ ಹಿನ್ನೆಲೆಯಲ್ಲಿ ಬಂದ್‌ನಿಂದ ದೂರು ಉಳಿಯಲು ವಾಣಿಜ್ಯ ಸಂಘಟನೆಗಳು ತೀರ್ಮಾನಿಸಿವೆ. ಜತೆಗೆ ಬೆಂಗಳೂರು, ಮಂಡ್ಯ ಸೇರಿದಂತೆ ಹಳೆಯ ಮೈಸೂರು ಭಾಗದಲ್ಲಿರುವ ಯಾವುದೇ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿಲ್ಲ. ಅಲ್ಲದೇ ಎಫ್‌ಕೆಸಿಸಿಐ ಸಹ ತನ್ನ ಜಿಲ್ಲಾ ಘಟಕಗಳಿಗೂ ಸಹ ಬಂದ್‌ನಲ್ಲಿ ಭಾಗವಹಿಸದಂತೆ ಮನವಿ ಮಾಡಿತ್ತು. ಹೀಗಾಗಿ ಕಾರ್ಖಾನೆ ಹಾಗೂ ಮುಂಗಟ್ಟುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಟೋಲ್‌ ದರ ಏರಿಕೆ ಅನ್ಯಾ​ಯದ ಪರ​ಮಾ​ವ​ಧಿ: ಎಚ್‌.ಡಿ.ಕುಮಾರಸ್ವಾಮಿ

ಬಂದ್‌ ಯಾವ ಜಿಲ್ಲೆಗಳಲ್ಲಿ?
ಬೀದರ್‌, ಧಾರವಾಡ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ, ಹುಬ್ಬಳ್ಳಿ, ವಿಜಯನಗರ, ಮೈಸೂರು, ಬಳ್ಳಾರಿ, ಯಾದಗಿರಿ, ಹಾವೇರಿ

ಈ ಜಿಲ್ಲೆಗಳಲ್ಲಿ ಬಂದ್‌ ಇಲ್ಲ
ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಮಂಡ್ಯ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಗದಗ, ರಾಮನಗರ, ಚಾಮರಾಜನಗರ, ರಾಯಚೂರು, ಬಾಗಲಕೋಟೆ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು

ಬಂದ್‌ ಇಲ್ಲ, ಪ್ರತಿಭಟನೆ ಮಾತ್ರ
ಚಿಕ್ಕಮಗಳೂರು, ಶಿವಮೊಗ್ಗ, ಕೊಪ್ಪಳ

click me!