ಬಕ್ರೀದ್ ನಮಾಜ್ ವೇಳೆ ಒಂದೇ ಕೋಮಿನವರು ಹೊಡೆದಾಟ; ಹಲವರಿಗೆ ಗಾಯ

By Ravi Janekal  |  First Published Jun 29, 2023, 2:54 PM IST

ಬಕ್ರಿದ್ ಹಬ್ಬದ ನಮಾಜ್ ಮಾಡುವ ವೇಳೆ ಕ್ಷುಲ್ಲಕ ಕಾರಣಕ್ಕೆ ಒಂದೇ ಕೋಮಿನವರು ಪರಸ್ಪರ ಹೊಡೆದಾಡಿಕೊಂಡ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ನಡೆದಿದೆ.


ಹಾವೇರಿ (ಜೂ.29) ಬಕ್ರಿದ್ ಹಬ್ಬದ ನಮಾಜ್ ಮಾಡುವ ವೇಳೆ ಕ್ಷುಲ್ಲಕ ಕಾರಣಕ್ಕೆ ಒಂದೇ ಕೋಮಿನವರು ಪರಸ್ಪರ ಹೊಡೆದಾಡಿಕೊಂಡ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ನಡೆದಿದೆ.

ಇಂದು ಬಕ್ರಿದ್ ಹಿನ್ನೆಲೆ ಸಾವಿರಾರು ಜನರಿಂದ ರಟ್ಟಿಹಳ್ಳಿಯ ಈದ್ಗಾ ಮೈದಾನದಲ್ಲಿ ಪ್ರಾರ್ಥನಾ ಮಾಡಲಾಗಿತ್ತು. ಈ ವೇಳೆ ಅಂಜುಮನ್ ಕಮಿಟಿ ಹಣಕಾಸು ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಪರ ವಿರೋಧ ವ್ಯಕ್ತವಾಗಿದೆ ಬಳಿಕ ವಾಗ್ವಾದ ವಿಕೋಪಕ್ಕೆ ತಿರುಗಿ ಪರಸ್ಪರ ಕೈಕೈ  ಮಿಲಾಯಿಸುವ ಹಂತಕ್ಕೆ ಹೋಗಿದೆ. ಸಾವಿರಾರು ಜನರು ಪ್ರಾರ್ಥನೆಗೆ ಸೇರಿದ್ರಿಂದ ನೂಕುನುಗ್ಗಲು ಏರ್ಪಟ್ಟು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಹಲವರಿಗೆ ಗಾಯಗಳಾಗಿವೆ. ಘಟನೆ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಟ್ಟಿಹಳ್ಳಿ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. 

Latest Videos

undefined

ಗಂಗಾವತಿಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ: ಮುಸ್ಲಿಂರ ಸಾಮೂಹಿಕ ಪ್ರಾರ್ಥನೆಯಲ್ಲಿ ಜನಾರ್ದನ ರೆಡ್ಡಿ ಭಾಗಿ

ಗಲಾಟೆಯಲ್ಲಿ ಓರ್ವ ವ್ಯಕ್ತಿ ಗಂಭೀರ ಗಾಯಗೊಂಡಿದ್ದು  ಸ್ಥಳೀಯ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. 

ಈದ್-ಉಲ್-ಅಧಾ ದಿನವು ಇಸ್ಲಾಮಿಕ್ ಚಂದ್ರನ ಕ್ಯಾಲೆಂಡರ್‌ನ ಅಂತಿಮ (ಹನ್ನೆರಡನೇ) ತಿಂಗಳ ಹತ್ತನೇ ದಿನದಂದು ಬರುತ್ತದೆ; ಧು-ಅಲ್-ಹಿಜ್ಜಾ. ಇದನ್ನು ಆಚರಿಸುವ ದಿನವು ಚಂದ್ರನ ವೀಕ್ಷಣೆಯ ಮೇಲೆ ಅವಲಂಬಿತವಾಗಿದೆ. ಈದ್ ಅಥವಾ ರಂಜಾನ್ ಈದ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈದ್ ಅಲ್-ಫಿತರ್, ಪವಿತ್ರ ರಂಜಾನ್ ತಿಂಗಳ ಅಂತ್ಯವನ್ನು ಸೂಚಿಸುತ್ತದೆ ಆದರೆ ಈದ್ ಉಲ್-ಅಧಾ (ಬಕ್ರಾ ಈದ್, ಬಕ್ರೀದ್, ಈದ್ ಅಲ್-ಅಧಾ, ಈದ್ ಕುರ್ಬಾನ್ ಅಥವಾ ಕುರ್ಬಾನ್ ಬಯಾರಾಮಿ ಎಂದೂ ಕರೆಯಲಾಗುತ್ತದೆ) ಪ್ರಪಂಚದಾದ್ಯಂತ ಮುಸ್ಲಿಮರು ಆಚರಿಸುವ ಎರಡನೇ ಪ್ರಮುಖ ಇಸ್ಲಾಮಿಕ್ ಹಬ್ಬವಾಗಿದೆ. ಇಂಥ ಪವಿತ್ರ ಹಬ್ಬದಲ್ಲಿ ಹಣಕಾಸಿನ ವಿಚಾರಕ್ಕೆ ಹೊಡೆದಾಡಿಕೊಂಡಿರುವುದು ದುರಂತವಾಗಿದೆ ಎಂದು ಮುಸ್ಲಿಂ ಬಾಂಧವರು ಬೇಸರ ವ್ಯಕ್ತಪಡಿಸಿದ್ದಾರೆ.

click me!