ಸಿಟಿ ರವಿ ಬೆನ್ನಲ್ಲೇ ಶಾಸಕ ಮುನಿರತ್ನ ತಲೆಗೆ ಗಾಯ, ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಸಾಧ್ಯತೆ!

By Chethan Kumar  |  First Published Dec 26, 2024, 9:10 AM IST

ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ ಪ್ರಕರಣ ಭಾರಿ ಕೋಲಾಹಲ ಸೃಷ್ಟಿಸಿದೆ. ತಲೆಗೆ ಗಾಯಗೊಂಡು ಕೆಸಿ ಜನರಲ್ ಆಸ್ಪತ್ರೆ ದಾಖಲಾಗಿರುವ ಮುನಿರತ್ನ ಇಂದು ಬಿಡುಗಡೆಯಾಗುವ ಸಾಧ್ಯತೆ ಇದೆ.


ಬೆಂಗಳೂರು(ಡಿ.26) ರಾಜ್ಯದಲ್ಲಿ ಇಷ್ಟು ದಿನ ಮುಖ್ಯ ವಾಹಿನಿಯ ರಾಜಕೀಯ ವಾಕ್ಸಮರ, ಆರೋಪ ಪ್ರತ್ಯಾರೋಪಗಳ ಮೂಲಕ ಸದ್ದು ಮಾಡುತ್ತಿತ್ತು. ಆದರೆ ಇತ್ತೀಚೆಗಿನ ಬೆಳವಣಿಗೆ ಆತಂಕ ಹಾಗೂ ಅಚ್ಚರಿ ಹುಟ್ಟಿಸುತ್ತಿದೆ. ಇತರ ಕೆಲ ಗೂಂಡ ರಾಜ್ಯಗಳಲ್ಲಿನ ರಾಜಕೀಯಕ್ಕೆ ಯಾವುದೇ ಕಡಿಮೆ ಇಲ್ಲದ ರೀತಿಯಲ್ಲಿ ಕರ್ನಾಟಕ ಬದಲಾಗಿದೆ. ಶಾಸಕರ ಮೇಲೆ ಹಲ್ಲೆ, ಮೊಟ್ಟೆ ಎಸೆತದ ಪ್ರಕರಣಗಳು ರಾಜ್ಯ ರಾಜಕಾರಣದ ದಿಕ್ಕು ಬದಲಿಸಿದೆ. ಸಿಟಿ ರವಿ ಮೇಲೆ ಹಲ್ಲೆ ಪ್ರಕರಣದ ಬೆನ್ನಲ್ಲೇ ಇದೀಗ ಬಿಜೆಪಿ ಶಾಸಕ ಮುನಿರತ್ನ ತಲೆಗೆ ಗಾಯವಾಗಿದೆ. ಮೊಟ್ಟೆ ಎಸೆತ ಘಟನೆಯಲ್ಲಿ ಸಿಟಿ ರವಿ ತಲೆಗೆ ಗಾಯವಾಗಿದೆ. ಪರಿಣಾಮ ಕೆಸಿ ಜನರಲ್ ಆಸ್ಪತ್ರೆ ದಾಖಲಾಗಿದ್ದ ಮುನಿರತ್ನ ಇಂದು ಬಿಡುಗಡೆಯಾಗುವ ಸಾಧ್ಯತೆ ಇದೆ.

ಮುನಿರತ್ನ ಮೇಲೆ ಮೊಟ್ಟೆ ಎಸೆದ ಆರೋದಡಿ ಕಾಂಗ್ರೆಸ್ ಕಾರ್ತರನ್ನು ಬಂಧಿಸಲಾಗಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮಶತಮಾನೋತ್ಸವದಲ್ಲಿ ಪಾಲ್ಗೊಂಡು ಮರಳುತ್ತಿರುವ ಮುನಿರತ್ನ ಮೇಲೆ ಮೊಟ್ಟೆ ಎಸೆಯಲಾಗಿದೆ. ಕಿಡಿಗೇಡಿಗಳು ಮೊಟ್ಟೆ ಎಸೆತದಿಂದ ಶಾಸಕ ಮುನಿರತ್ನ ತಲೆಗೆ ಗಾಯವಾಗಿದೆ.  ಬಳಿಕ ಭಾರಿ ಪ್ರತಿಭಟನೆಗಳು ನಡೆದಿದೆ. ಬಿಜಿಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಇತ್ತ ಗಾಯಗೊಂಡ ಮುನಿರತ್ನ ಅವರು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದರು.

Tap to resize

Latest Videos

undefined

ಶಾಸಕ ಮುನಿರತ್ನ ನೆತ್ತಿಗೆ ತತ್ತಿ: ಮೂವರು ಕಾಂಗ್ರೆಸ್ಸಿಗರ ಬಂಧನ

ಮೊಟ್ಟೆ ಎಸೆತದಿಂದ ಮುನಿರತ್ನ ತಲೆ ಗಾಯವಾಗಿತ್ತು. ಸಿಟಿ ಸ್ಕ್ಯಾನ್ ಸೇರಿದಂತ ಇತರ ತಪಾಸಣೆ ನೀಡಲಾಗಿತ್ತು. ತಲೆಗೆ ಗಾಯವಾದ ಕಾರಣ ವೈದ್ಯರ ನಿಗಾದಲ್ಲಿರಲು ಸೂಚಿಸಲಾಗಿತ್ತು. ಹೀಗಾಗಿ ಮನಿರತ್ನ ಕೆಸಿ ಜನರಲ್ ಆಸ್ಪತ್ರೆಯಲ್ಲೇ ಉಳಿಯಬೇಕಾಯಿತು. ಇದೀಗ ಸಿಟಿ ಸ್ಕ್ಯಾನ್ ಸೇರಿದತೆ ಇತರ ತಪಾಸಣೆ ರಿಪೋರ್ಟ್ ಬಂದಿದೆ. ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಹೀಗಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು 11 ಗಂಟೆ ಸುಮಾರಿಗೆ ಆಸ್ಪತ್ರೆಯಿಂದ ಮುನಿರತ್ನ ಬಿಡುಗಡೆಯಾಗುವ ಸಾಧ್ಯತೆ ಇದೆ.

ಈ ಕುರಿತು ಶಾಸಕ ಮುನಿರತ್ನ ಮಾತನಾಡಿದ್ದಾರೆ. ಇಂಜೆಕ್ಷನ್ ಹಾಗೂ ಔಷಧಿ  ನೀಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡಿದ್ದಾರೆ. ಸದ್ಯ ಆರೋಗ್ಯ ಸ್ಥಿರವಾಗಿದೆ. ಈ ಘಟನೆ ಕುರಿತು 12 ಗಂಟೆಗೆ ಸುದ್ದಿಗೋಷ್ಠಿ ನಡೆಸುತ್ತೇನೆ. ಘಟನೆ ಹಿಂದಿನ ಕೆಲ ಮಾಹಿತಿ ನೀಡುತ್ತೇನೆ ಎಂದಿದ್ದಾರೆ. ಕಾಂಗ್ರೆಸ್ ವಿರುದ್ದ ನೇರ ಆರೋಪ ಮಾಡಿರುವ ಮನಿರತ್ನ ಸುದ್ದಿಗೋಷ್ಠಿ ಭಾರಿ ಕುತೂಹಲ ಕೆರಳಿಸಿದೆ.
 

click me!