
ಬೆಂಗಳೂರು: ಕನಿಷ್ಠ ಬೆಲೆಗೆ ಗರಿಷ್ಠ ಪೋಷಕಾಂಶ ಒದಗಿಸುವ ಮೊಟ್ಟೆದರ ದಿನದಿಂದ ದಿನಕ್ಕೆ ಏರಿಕೆಯತ್ತ ಸಾಗುತ್ತಿದೆ. ಸಗಟು ಮಾರುಕಟ್ಟೆದರ 4.30 ರು. ಇದ್ದು, ಚಿಲ್ಲರೆ ದರದಲ್ಲಿ ಒಂದು ಮೊಟ್ಟೆ 5ರು. ಕ್ಕೆ ಮಾರಾಟವಾಗುತ್ತಿದೆ.
ಸಾಮಾನ್ಯವಾಗಿ ಮಳೆಗಾಲ ಹಾಗೂ ಚಳಿಗಾಲದಲ್ಲಿ ಮೊಟ್ಟೆಬಳಕೆ ಹೆಚ್ಚು. ಪ್ರತಿ ವರ್ಷವೂ ನವೆಂಬರ್‌ನಲ್ಲಿ ಮೊಟ್ಟೆಗೆ ಹೆಚ್ಚಿನ ಬೇಡಿಕೆ ಕುದುರುತ್ತದೆ. ಜನರ ಬೇಡಿಕೆಯನ್ನೇ ಬಂಡವಾಳ ಮಾಡಿಕೊಂಡಿರುವ ವ್ಯಾಪಾರಿಗಳು ಇದರ ಲಾಭ ಪಡೆಯಲು ದೇಶಾದ್ಯಂತ ಮೊಟ್ಟೆದರ ಏರಿಕೆ ಮಾಡುತ್ತಾರೆ ಎನ್ನಲಾಗುತ್ತಿದೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ಸಗಟು ಮೊಟ್ಟೆಬೆಲೆ .3.25 ಇದ್ದದ್ದು ಕೊನೆಯ ವಾರದಲ್ಲಿ 3.62 ರು.ಕ್ಕೆ ಏರಿಕೆಯಾಗಿತ್ತು. ಅಕ್ಟೋಬರ್‌ನಲ್ಲಿ ಸಗಟು ದರ ನೂರು ಮೊಟ್ಟೆಗೆ 405ರು. ನಿಗದಿಯಾಗಿತ್ತು. ನವೆಂಬರ್‌ನ ಮೊದಲ ವಾರದಲ್ಲಿ 4.10ರು ಗೆ ತಲುಪಿದ್ದ ದರ, ಇದೀಗ 4.30ರವರೆಗೆ ಏರಿಕೆಯಾಗಿದೆ. ದಸರಾ ಕಳೆಯುತ್ತಿದ್ದಂತೆ ಮೊಟ್ಟೆಬೆಲೆ ಏರಿಕೆ ಹಾದಿ ಹಿಡಿದಿದೆ.
ಅಕ್ಟೋಬರ್‌ನ ಮಧ್ಯಂತರದಲ್ಲಿ 100ಕ್ಕೆ 397 ರು. ಮತ್ತು 12ಕ್ಕೆ 54 ರು ಗಳಿತ್ತು. ಸದ್ಯ ದಿನಸಿ ಅಂಗಡಿಗಳಲ್ಲಿ ಚಿಲ್ಲರೆ ದರ 5ರು.ಗೆ ಏರಿಕೆಯಾಗಿದ್ದು, 12 ಮೊಟ್ಟೆಗಳಿಗೆ 60ರಿಂದ 70 ರು.ರವರೆಗೆ ಮಾರಾಟವಾಗುತ್ತಿದೆ. ಹಾಪ್‌ಕಾಮ್ಸ್‌ನಲ್ಲಿ ಈ ಹಿಂದೆ 4.60 ರು. ಇದ್ದ ದರ, ಇದೀಗ ಒಂದು ಮೊಟ್ಟೆ 5 ರು.ಗೆ ಮಾರಾಟವಾಗುತ್ತಿದೆ. ಬೆಂಗಳೂರು, ದೆಹಲಿ, ಮುಂಬಯಿ, ಹೈದರಾಬಾದ್, ಚೆನ್ನೈ ಸೇರಿದಂತೆ ದೇಶಾದ್ಯಂತ ಮೊಟ್ಟೆಗೆ ಬೇಡಿಕೆ ಕುದುರಿದ್ದು, ಬೆಲೆ ಹೆಚ್ಚಳವಾಗಿದೆ ಎಂದು ಮೊಟ್ಟೆಉತ್ಪಾದಕರು ತಿಳಿಸಿದ್ದಾರೆ.
ರಾಜ್ಯದಲ್ಲಿ ಮೊಟ್ಟೆಯ ಉತ್ಪಾದನೆ ಚೆನ್ನಾಗಿದ್ದು, ದಿನವೊಂದಕ್ಕೆ ಬರೋಬ್ಬರಿ 1.25 ಕೋಟಿ ಮೊಟ್ಟೆಉತ್ಪಾದನೆಯಾಗುತ್ತಿದೆ. ಬೆಂಗಳೂರಿನ ಸುತ್ತಮುತ್ತಲಿಂದ 25 ಲಕ್ಷ ಮೊಟ್ಟೆಪೂರೈಕೆಯಾಗುತ್ತದೆ. ಚಳಿಗಾಲದಲ್ಲಿ ಮೊಟ್ಟೆಸೇವಿಸುವವರ ಸಂಖ್ಯೆ ಹೆಚ್ಚು. ಹೀಗಾಗಿ ನವೆಂಬರ್ ಮೊದಲ ವಾರದಿಂದಲೇ ಮೊಟ್ಟೆದರದಲ್ಲಿ ವ್ಯತ್ಯಾಸ ಕಂಡುಬಂದಿದೆ.
ಕಳೆದ ವರ್ಷ ನವೆಂಬರ್ ಮಾಸದಲ್ಲಿ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೆಚ್ಚಳ ಹಾಗೂ ಚಳಿಗಾಲದ ಹಿನ್ನೆಲೆ ಮೊಟ್ಟೆಉತ್ಪಾದನೆ ಪ್ರಮಾಣ ಕಡಿಮೆಯಾಗಿ ಕುಕ್ಕುಟೋದ್ಯಮದಲ್ಲಿ ಮೊಟ್ಟೆಬೆಲೆ 6.50 ರು.ರಿಂದ 7 ರು. ಮುಟ್ಟಿತ್ತು. ಇದೀಗ ಎನ್‌ಇಸಿಸಿ ಸಂಸ್ಥೆ ಪ್ರಕಾರ ಹೋಲ್‌ಸೇಲ್‌ನಲ್ಲಿ ನೂರು ಮೊಟ್ಟೆಗೆ .433 ನಿಗದಿಪಡಿಸಿದೆ. ಆದರೆ ಚಿಲ್ಲರೆ ಮಾರುಕಟ್ಟೆಯಲ್ಲಿ 500ರಿಂದ 550 ರು. ವರೆಗೆ ಮಾರಾಟಗೊಳ್ಳುತ್ತಿದೆ ಎನ್ನುತ್ತಾರೆ ರಾಷ್ಟ್ರೀಯ ಮೊಟ್ಟೆಸಮನ್ವಯ ಸಮಿತಿ ಬೆಂಗಳೂರು ವಲಯದ ಅಧ್ಯಕ್ಷ ಜಿ.ಆರ್.ಸಾಯಿನಾಥ್.
ಮುಂಬರುವ ದಿನಗಳಲ್ಲಿ ಈದ್ ಮಿಲಾದ್, ಕ್ರಿಸ್‌ಮಸ್, ಹೊಸ ವರ್ಷ ಇರುವುದರಿಂದ ಮೊಟ್ಟೆಬೆಲೆ ಏರುವ ನಿರೀಕ್ಷೆ ಇದೆ. ನಾವು ಹೊಸಪೇಟೆ, ಹೈದರಾಬಾದ್, ಮೈಸೂರಿನಿಂದ ಮೊಟ್ಟೆತರಿಸುತ್ತೇವೆ. ಮೊಟ್ಟೆಉತ್ಪಾದನೆ ಚೆನ್ನಾಗಿದ್ದು, ಬೇಡಿಕೆಯೂ ಇದೆ. ಹಾಗಾಗಿ ಕಳೆದ ವರ್ಷದಂತೆ ಬೆಲೆ ಏರಿಕೆಯಾಗುವ ಸಾಧ್ಯತೆ ಕಡಿಮೆ.-ಸ್ಯಾಂಟೋ ಪೀಟರ್, ಬಿಟಿಎಂ ಲೇಔಟ್‌ನ ಸನ್‌ರೈಸ್ ಗ್ರೂಪ್ ಮಾಲಿಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ