ರನ್ಯಾ ರಾವ್ ಚಿನ್ನ ಕಳ್ಳಸಾಗಾಣೆ ಪ್ರಕರಣ; ಗೃಹ ಸಚಿವ ಪರಮೇಶ್ವರ ಸಂಸ್ಥೆ ಮೇಲೆ ಇಡಿ ದಾಳಿ

Published : May 21, 2025, 09:07 PM IST
ರನ್ಯಾ ರಾವ್ ಚಿನ್ನ ಕಳ್ಳಸಾಗಾಣೆ ಪ್ರಕರಣ; ಗೃಹ ಸಚಿವ ಪರಮೇಶ್ವರ ಸಂಸ್ಥೆ ಮೇಲೆ ಇಡಿ ದಾಳಿ

ಸಾರಾಂಶ

ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದ ಹಣದ ಮೂಲವನ್ನು ಇಡಿ ತನಿಖೆ ಮಾಡುತ್ತಿದ್ದು, ಬೆಂಗಳೂರು ಮತ್ತು ತುಮಕೂರಿನ 16 ಕಡೆ ದಾಳಿ ನಡೆಸಿದೆ. ಗೃಹ ಸಚಿವ ಪರಮೇಶ್ವರ್ ಮಾಲೀಕತ್ವದ ಮೂರು ಸಂಸ್ಥೆಗಳ ಮೇಲೂ ದಾಳಿ ನಡೆದಿದ್ದು, 40 ಲಕ್ಷ ರೂ ವ್ಯವಹಾರದ ದಾಖಲೆಗಳಿಲ್ಲ ಎನ್ನಲಾಗಿದೆ. ಕಾಂಗ್ರೆಸ್ ಇದನ್ನು ರಾಜಕೀಯ ಪ್ರೇರಿತ ದಾಳಿ ಎಂದು ಆರೋಪಿಸಿದೆ.

ಬೆಂಗಳೂರು(ಮೇ.21)  ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ನಿನ್ನೆಯಷ್ಟೇ ರನ್ಯಾ ರಾವ್‌ಗೆ ಬೇಲ್ ಮಂಜೂರಾಗಿತ್ತು. ಇಂದು ಇದೇ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಬೆಂಗಳೂರು ಹಾಗೂ ತುಮಕೂರಿ 16 ಕಡೆ ದಾಳಿ ಮಾಡಿದ್ದಾರೆ. ರನ್ಯಾ ರಾವ್ ಗೋಲ್ಡ್ ಕಳ್ಳ ಸಾಗಣೆ ಮಾಡಲು ನೀಡಿದ್ದ ಹಣದ ಮೂಲದ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. ಈ ತನಿಖೆಯ ಭಾಗವಾಗಿ ಇಡಿ ದಾಳಿ ಮಾಡಿದೆ. ಈ ದಾಳಿಯಲ್ಲಿ ಕರ್ನಾಟಕ ರಾಜ್ಯ ಗೃಹ ಸಚಿವ ಪರಮೇಶ್ವರ ಮಾಲೀಕತ್ವದ ಮೂರು ಸಂಸ್ಥೆ ಮೇಲೂ ಇಡಿ ದಾಳಿ ಮಾಡಿದೆ.  

ಚಿನ್ನ ಕಳ್ಳಸಾಗಾಣೆ ಮೂಲದ ಬಗ್ಗೆ ಇಡಿ ತನಿಖೆ
ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆಗೆ ಬಳಸಿದ ಹಣದ ಮೂಲದ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. ವಿಚಾರಣೆಯಲ್ಲಿ ಕೆಲವರು ರನ್ಯಾ ರಾವ್‌ಗೆ ಹಣ ನೀಡಿರುವುದು ತಪ್ಪೊಪ್ಪಿಕೊಂಡಿದ್ದಾರೆ. ಈ ತಪ್ಪೊಪ್ಪಿನೆ ಬೆನ್ನಲ್ಲೇ ಇಡಿ ಇಡಿ ಅಧಿಕಾರಿಗಳು 16 ಕಡೆ ದಾಳಿ ಮಾಡಿದ್ದರೆ. ಈ ಪೈಕಿ ಗೃಹ ಸಚಿವರ  ಪರಮೇಶ್ವರ್ ಮಾಲೀಕತ್ವದ ಮೂರು ಕಾಲೇಜುಗಳ ಮೇಲೂ ಇಡಿ ದಾಳಿ ನಡೆಸಿದೆ. ಪರಮೇಶ್ವರ್ ಸಂಸ್ಥೆ 40 ಲಕ್ಷ ರೂಪಾಯಿ ವ್ಯವಾಹರದ ಕುರಿತು ಯಾವುದೇ ದಾಖಲೆ ನಿರ್ವಹಣೆ ಮಾಡಿಲ್ಲ. ಇಡಿ ದಾಳಿ ನಡೆಸಿದ ಮಹತ್ವದ ದಾಖಲೆ ವಶಪಡಿಸಿಕೊಂಡಿದೆ. 

ರನ್ಯಾ ರಾವ್‌ ಚಿನ್ನ ಖರೀದಿಗೆ 40 ಲಕ್ಷ ರೂ ಪಾವತಿ ಮಾಡಿತಾ ಕಾಲೇಜು?
ಗೃಹ ಸಚಿವ ಡಾ.ಜಿ ಪರಮೇಶ್ವರ್ ಮಾಲೀಕತ್ವದ ಮೂರು ಕಾಲೇಜು ನಟಿ ರನ್ಯಾ ರಾವ್ ಅಕ್ರಮ ಕಳ್ಳ ಖರೀದಿಸಲು ಹಾಗೂ ಸಾಗಾಣಿಕೆ ಮಾಡಲು 40 ಲಕ್ಷ ರೂಪಾಯಿ ಪಾವತಿ ಮಾಡಿತ್ತಾ? ಈ ಕುರಿತು ಇಡಿ ತನಿಖೆ ನಡೆಸುತ್ತಿದೆ. 40 ಲಕ್ಷ ರೂಪಾಯಿ ವ್ಯವಾಹರದ ಕುರಿತು ಸಂಸ್ಥೆ ದಾಖಲೆ ಮಾಡಿಲ್ಲ. ಇದು ಅನುಮಾನ ಹೆಚ್ಚಿಸಿದೆ.

 ಪ್ರಮುಖವಾಗಿ ಆರ್‌ಬಿಐ ನಿಯಮ ಉಲ್ಲಂಘಿಸಿ ವಿದೇಶಿ ವಿನಿಮಯದಲ್ಲಿ ಭಾರಿ ಅವ್ಯವಾಹರ ನಡೆದಿರುವುದು ಇಡಿ ತನಿಖೆಯಲ್ಲಿ ಪತ್ತೆಯಾಗಿದೆ. ರನ್ಯಾ ರಾವ್‌ಗೆ ಹಣ ನೀಡಿದ ಬಹುತೇಕರು ತಪ್ಪೊಪ್ಪಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಇಡಿ ವಿವಿದೆಡೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಪರಮೇಶ್ವರ್ ಮಾಲೀಕತ್ವದ 3 ಕಾಲೇಜುಗಳ ಮೇಲೂ ದಾಳಿಯಾಗಿದೆ.

ದಲಿತ ಕಾರಣಕ್ಕೆ ದಾಳಿ ಎಂದು ಸಿದ್ದರಾಮಯ್ಯ
ದಲಿತ ನಾಯಕನನ್ನು ಬಿಜೆಪಿ ಟಾರ್ಗೆಟ್ ಮಾಡುತ್ತಿದೆ. ಪರಮೇಶ್ವರ್ ರಾಜ್ಯದ ಪ್ರಬಲ ದಲಿತ ನಾಯಕನಾಗಿ ಬೆಳೆದಿದ್ದಾರೆ. ಇದು ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಡಿ ಕಡೆಯಿಂದ ದಾಳಿ ಮಾಡಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ದ್ವೇಷದ ದಾಳಿ ಎಂದ ಕಾಂಗ್ರೆಸ್
ಕರ್ನಾಟಕ ಕಾಂಗ್ರೆಸ್ ಸರ್ಕಾರ ಇತ್ತೀಚೆಗೆ 1 ಲಕ್ಷ ಎಸ್‌ಸಿ, ಎಸ್‌ಟಿ ಸಮುದಾಕ್ಕೆ ಹಕ್ಕು ಪತ್ರಗಳನ್ನು ವಿತರಿಸಿದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಡಗೆ ಎಸ್‌ಸಿ, ಎಸ್‌ಟಿ ಸಮುದಾ ಮೆಚ್ಚುಗೆ ವ್ಯಕ್ತಪಡಿಸಿದೆ. ಇದು ಬಿಜೆಪಿಯನ್ನು ನಡುಗಿಸಿದೆ. ಹೀಗಾಗಿ ದಲಿತ ನಾಯಕನ ಸಂಸ್ಥೆಗಳ ಮೇಲೆ ಇಡಿ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡುದಾಳಿ ನಡೆಸಿದ್ದಾರೆ ಎಂದು ಕಾಂಗ್ರೆಸ್ ನಾಯಕ, ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಹೇಳಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ