Money Laundering Case: ಡಿಕೆಶಿ ಇ.ಡಿ ಕೇಸ್‌ ವಿಚಾರಣೆ ಸೆ.27ಕ್ಕೆ ಮುಂದೂಡಿಕೆ

By Govindaraj SFirst Published Aug 18, 2022, 4:00 AM IST
Highlights

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ಧದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣ ವಿಚಾರಣೆಯನ್ನು ದೆಹಲಿ ಜನಪ್ರತಿನಿಧಿಗಳ ನ್ಯಾಯಾಲಯ ಸೆ.27ಕ್ಕೆ ಮುಂದೂಡಿದೆ. 

ಬೆಂಗಳೂರು (ಆ.18): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ಧದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣ ವಿಚಾರಣೆಯನ್ನು ದೆಹಲಿ ಜನಪ್ರತಿನಿಧಿಗಳ ನ್ಯಾಯಾಲಯ ಸೆ.27ಕ್ಕೆ ಮುಂದೂಡಿದೆ. ಡಿ.ಕೆ.ಶಿವಕುಮಾರ್‌ ಅವರ ದೆಹಲಿಯ ಫ್ಲ್ಯಾಟ್‌ನಲ್ಲಿ ಪತ್ತೆಯಾಗಿದ್ದ 8 ಕೋಟಿ ಹಣಕ್ಕೆ ಸಂಬಂಧಿಸಿ ನವದೆಹಲಿಯ ರೋಸ್‌ ಅವೆನ್ಯೂ ರಸ್ತೆಯಲ್ಲಿರುವ ನ್ಯಾಯಾಲಯ ಬುಧವಾರ ವಿಚಾರಣೆ ನಡೆಸಿತು. ಈ ವೇಳೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಆರೋಪಿಗಳಾದ ಸಚಿನ್‌ ನಾರಾಯಣ್‌, ರಾಜೇಂದ್ರಸಿಂಗ್‌, ಸುನೀಲ್‌ ಶರ್ಮಾ ಅವರು ಚಾಜ್‌ರ್‍ ಶೀಟ್‌ ಸೇರಿದಂತೆ ಇ.ಡಿ.ಕೋರ್ಟಿಗೆ ಸಲ್ಲಿಸಿರುವ ಎಲ್ಲ ದಾಖಲೆಗಳನ್ನು ನೀಡುವಂತೆ ಮನವಿ ಮಾಡಿದರು. 

ಕೋರ್ಟ್‌ ದಾಖಲೆಗಳನ್ನು ನೀಡುವಂತೆ ಸೂಚಿಸಿ ವಿಚಾರಣೆಗೆಯನ್ನು ಸೆ.27ಕ್ಕೆ ಮುಂದೂಡಿತು. ಈ ವೇಳೆ ದಾಖಲೆ ನೀಡಲು ಇ.ಡಿ.ಪರ ವಕೀಲರು ನಾಲ್ಕೈದು ವಾರಗಳ ಸಮಯಾವಕಾಶ ಕೇಳಿದರು. ಇಡಿ ವಾದಕ್ಕೆ ಸಮ್ಮಿತಿಸಿದ ಕೋರ್ಟ್‌ ಸೆ.27ಕ್ಕೆ ವಿಚಾರಣೆ ಮುಂದೂಡಿ ಎಲ್ಲ ದಾಖಲೆಗಳು ನೀಡಲು ಸೂಚಿಸಿತು. ಜೊತೆಗೆ ಕನ್ನಡದಲ್ಲಿ ಸಲ್ಲಿಸಿರುವ ದಾಖಲೆಗಳನ್ನು ತರ್ಜುಮೆ ಮಾಡಿ ನೀಡಲು ತಿಳಿಸಿತು. ಕೋರ್ಟ್‌ ವಿಚಾರಣೆ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ಕೋರ್ಟ್‌ಗೆ ಗೌರವ ಕೊಟ್ಟು ವಿಚಾರಣೆಗೆ ಹಾಜರಾಗಿದ್ದೇನೆ. ಇಡಿಯಿಂದ ಕೆಲವು ದಾಖಲೆಗಳನ್ನು ಕೇಳಿದೆ. ಅವುಗಳನ್ನು ಕೊಟ್ಟಬಳಿಕ ಮುಂದೆ ಮಾತನಾಡುತ್ತೇನೆ ಎಂದಷ್ಟೇ ತಿಳಿಸಿದರು.

ಮೋಸಕ್ಕೆ ಮತ್ತೊಂದು ಹೆಸರೇ ಬಿಜೆಪಿ: ಡಿಕೆಶಿ ಕಿಡಿ

ಏನಿದು ಪ್ರಕರಣ?: ನವದೆಹಲಿ ರೋಸ್ ಅವೆನ್ಯೂ ಜನಪ್ರತಿನಿಧಿಗಳ ವಿಶೇಷ ನ್ಯಾಯಲಯದ ನ್ಯಾ. ವಿಕಾಸ್ ದುಲ್ ವಾದ ಮಂಡಿಸಿದ ಇಡಿ ಪರ ವಕೀಲರು, IPC ಸೆಕ್ಷನ್ 120 B ( ವ್ಯವಸ್ಥಿತ ಸಂಚು ) ಮತ್ತು ನ್ಯಾಯಾಲಯ ವ್ಯಾಪ್ತಿ ಬಗ್ಗೆ ವಿವರಿಸಿದರು. ಪಿಎಂಎಲ್ ಕಾಯಿದೆಯ ಜೊತೆಗೆ 120B ಸೆಕ್ಷನ್ ಸೇರ್ಪಡೆ ಕುರಿತು ಆರೋಪಿ ಸಚಿನ್ ನಾರಾಯಣ್ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ  ತೀರ್ಪು ಉಲ್ಲೇಖ ಮಾಡಿದರು.

ಒಟ್ಟು ಮೂರು ಹೈ ಕೋರ್ಟ್‌ಗಳ ಆದೇಶಗಳ ಉಲ್ಲೇಖ ಮಾಡಿ 120B ಸೇರ್ಪಡೆ ಮಾಡಿರುವ ಕಾರಣಗಳ ಕುರಿತು ವಾದ ಮಾಡಿದ ವಕೀಲರು, ಆರೋಪಿಗಳ ಸಂಚಿನ ಬಗ್ಗೆ ಚಾರ್ಜ್ ಶೀಟ್ ನಲ್ಲಿ ಸಮಗ್ರವಾಗಿ ಉಲ್ಲೇಖಿಸಲಾಗಿದೆ. ಅಲ್ಲದೇ ದೆಹಲಿಯ ಸಬ್ದರಜಂಗ್ ಎನ್ಕ್ಲೇವ್ ಪ್ಲ್ಯಾಟ್ ನಲ್ಲಿ 8.5 ಕೋಟಿ ಹಣ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿ ಇಡಿ ವ್ಯಾಪ್ತಿಯ ಬಗ್ಗೆ ವಿವರಿಸಿದರು. ಇ ಡಿ ವಕೀಲರ ವಾದ ಕೇಳಿದ ವಿಶೇಷ ನ್ಯಾಯಾಲಯ, ಮೇ 31ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿತು.

ಸಿದ್ದು, ಡಿಕೆಶಿ ಆಲಿಂಗನ ನೋಡಿ ಖುಷಿ: ಇಬ್ಬರ ಒಗ್ಗಟ್ಟಿನಿಂದ ಮುಂದೆ ಪಕ್ಷ ಅಧಿಕಾರಕ್ಕೆ, ರಾಹುಲ್‌ ಗಾಂಧಿ

2019ರಲ್ಲಿ ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಐಟಿ ಅಧಿಕಾರಿಗಳು ಡಿ.ಕೆ.ಶಿ ಮನೆ ಮೇಲೆ ದಾಳಿ ಮಾಡಿದ್ದರು. ಈ ಸಂಬಂಧ ಎರಡೂವರೆ ವರ್ಷದ ಬಳಿಕೆ ಆರೋಪ ಪಟ್ಟಿ ತಯಾರಿಸಿದ ಇಡಿ ಅಧಿಕಾರಿಗಳು ದೆಹಲಿಯ ವಿಶೇಷ ನ್ಯಾಯಾಲಯ ರೋಸ್‌ ಅವೆನ್ಯೂ ಕೋರ್ಟ್‌ಗೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. 2019ರಲ್ಲಿ ಡಿಕೆಶಿ ಹಾಗೂ ಆಪ್ತರ ನಿವಾಸಗಳ ಮೇಲೆ ಐಟಿ ದಾಳಿ ನಡೆದಿತ್ತು. ದಾಳಿ ವೇಳೆ 8 ಕೋಟಿ ರೂಪಾಯಿ ನಗದು ಪತ್ತೆಯಾಗಿತ್ತು. ಬಳಿಕ ಡಿಕೆಶಿ ವಿರುದ್ಧ ಪ್ರಕರಣ ಇಡಿಗೆ ವರ್ಗಾವಣೆಗೊಂಡಿತ್ತು. ಇಡಿ ಅಧಿಕಾರಿಗಳು ಡಿಕೆಶಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.

click me!