ಕೊಪ್ಪಳ ತಾಲೂಕು ವ್ಯಾಪ್ತಿಯಲ್ಲಿನ ಕಾರ್ಖಾನೆಗಳಿಂದ ಉಂಟಾಗುತ್ತಿರುವ ಮಾಲಿನ್ಯದಿಂದಾಗಿ ಆರೋಗ್ಯ ಸಮಸ್ಯೆ ಸೇರಿದಂತೆ ಗ್ರಾಮದ ಯುವಕರಿಗೆ ಹೆಣ್ಣು ಕೊಡಲೂ ಯಾರೂ ಮುಂದೆ ಬರುತ್ತಿಲ್ಲ, ಇದಕ್ಕೆ ಶಾಶ್ವತ ಪರಿಹಾರ ನೀಡಬೇಕೆಂದು ಬಿಜೆಪಿಯ ಹೇಮಲತಾ ನಾಯಕ್ ಆಗ್ರಹಿಸಿದರು.
ವಿಧಾನಪರಿಷತ್ತು (ಫೆ.21): ಕೊಪ್ಪಳ ತಾಲೂಕು ವ್ಯಾಪ್ತಿಯಲ್ಲಿನ ಕಾರ್ಖಾನೆಗಳಿಂದ ಉಂಟಾಗುತ್ತಿರುವ ಮಾಲಿನ್ಯದಿಂದಾಗಿ ಆರೋಗ್ಯ ಸಮಸ್ಯೆ ಸೇರಿದಂತೆ ಗ್ರಾಮದ ಯುವಕರಿಗೆ ಹೆಣ್ಣು ಕೊಡಲೂ ಯಾರೂ ಮುಂದೆ ಬರುತ್ತಿಲ್ಲ, ಇದಕ್ಕೆ ಶಾಶ್ವತ ಪರಿಹಾರ ನೀಡಬೇಕೆಂದು ಬಿಜೆಪಿಯ ಹೇಮಲತಾ ನಾಯಕ್ ಆಗ್ರಹಿಸಿದರು.
ಶೇ.40ರಷ್ಟು ಶುಲ್ಕ ಪಾವತಿಸಿದ್ರೆ ಇನ್ಮುಂದೆ ಬಹುಮಹಡಿ ಕಟ್ಟಡಗಳಲ್ಲಿ ಹೆಚ್ಚುವರಿ ಅಂತಸ್ತು ನಿರ್ಮಿಸಬಹುದು
undefined
ಪ್ರಶ್ನೋತ್ತರ ವೇಳೆ ಕೊಪ್ಪಳ ತಾಲೂಕಿನಲ್ಲಿ 202ಕ್ಕೂ ಹೆಚ್ಚಿನ ಕಾರ್ಖಾನೆಗಳಿದ್ದು, ಕಲ್ಲಿದ್ದಲಿನಿಂದ ಕಾರ್ಯನಿರ್ವಹಿಸುವ ಕಾರ್ಖಾನೆಗಳು ಹಾರು ಬೂದಿಯನ್ನು ಅವೈಜ್ಞಾನಿಕವಾಗಿ ಹೊರಗೆ ವಿಲೇವಾರಿ ಮಾಡುತ್ತಿವೆ. ಇದರಿಂದಾಗಿ ತಾಲೂಕಿನ ಚಿಕ್ಕಬಗನಾಳ, ಹಿರೇಬಗನಾಳ, ಕಾಸನಕಂಡಿ, ಅಲ್ಲನಗರ, ಹಾಲವರ್ತಿ, ಮುಂಡರಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ವಾಯುಮಾಲಿನ್ಯ ಹೆಚ್ಚಾಗಿದ್ದು, ಜನರಿಗೆ ಉಸಿರಾಟದ ತೊಂದರೆ ಉಂಟಾಗುತ್ತಿದೆ. ಈ ಗ್ರಾಮಸ್ಥರು ಅಸ್ತಮಾ ಸೇರಿದಂತೆ ಹಲವು ರೋಗಗಳಿಂದ ಬಳಲುತ್ತಿದ್ದಾರೆ. ಮಾಲಿನ್ಯ ಹೆಚ್ಚಿರುವ ಗ್ರಾಮಗಳ ಯುವಕರಿಗೆ ಹೆಣ್ಣು ಕೊಡಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಬತ್ತಿರುವ ಬೋರ್‌ವೆಲ್ ರೀ ಡ್ರಿಲ್ಲಿಂಗ್‌ಗೆ ಸರ್ಕಾರ ಆದೇಶ, ಬಿಬಿಎಂಪಿ 110 ಹಳ್ಳಿಗೆ ಕಾವೇರಿ ನೀರು
ಅದಕ್ಕೆ ಉತ್ತರಿಸಿದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಕಾರ್ಖಾನೆಗಳಿಂದ ವಾಯುಮಾಲಿನ್ಯ ತಡೆಗೆ ಕಲ್ಲಿದ್ದಲು ಬಳಕೆ ಕಡಿಮೆ ಮಾಡಲು ಗೇಲ್ ಗ್ಯಾಸ್ ಸಂಸ್ಥೆಯಿಂದ ಸಿಎನ್‌ಜಿ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಹಾರುಬೂದಿಗೆ ನೀರು ಸಿಂಪಡಿಸಿ ಅದು ಗಾಳಿಯಲ್ಲಿ ಸೇರದಂತೆ ಕ್ರಮ ಕೈಗೊಳ್ಳಲಾಗುವುದು. ಮಾಲಿನ್ಯ ಉಂಟು ಮಾಡಿದ 12 ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಮಾಲಿನ್ಯ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.