ಸ್ಟೇರಿಂಗ್‌ ರಾಡ್‌ ತುಂಡಾದರೂ 40 ಮಂದಿ ಪ್ರಾಣ ಉಳಿಸಿದ ಡ್ರೈವರ್!

Published : Mar 03, 2019, 09:52 AM IST
ಸ್ಟೇರಿಂಗ್‌ ರಾಡ್‌ ತುಂಡಾದರೂ  40 ಮಂದಿ ಪ್ರಾಣ ಉಳಿಸಿದ ಡ್ರೈವರ್!

ಸಾರಾಂಶ

ಸ್ಟೇರಿಂಗ್‌ ರಾಡ್‌ ತುಂಡಾದರೂ 40 ಮಂದಿ ಪ್ರಾಣ ಉಳಿಸಿದ ಡ್ರೈವರ್ | ಬಸ್ ಡ್ರೈವರ್ ಸಮಯ ಪ್ರಜ್ಞೆಗೆ ವ್ಯಕ್ತವಾಯ್ತು ಸಾರ್ವಜನಿಕ ಪ್ರಶಂಸೆ | ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಘಟನೆ 

ಇಂಡಿ (ಮಾ. 03):  ಸ್ಟೇರಿಂಗ್‌ ರಾಡ್‌ ತುಂಡಾಗಿದ್ದರಿಂದ ನಿಯಂತ್ರಣ ತಪ್ಪಿದ ಈಶಾನ್ಯ ಸಾರಿಗೆ ಸಂಸ್ಥೆಯ ಬಸ್ಸೊಂದು ರಸ್ತೆ ಬಿಟ್ಟು ಚರಂಡಿಗೆ ಇಳಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಚಗೇರಿ ಬಳಿ ಶನಿವಾರ ನಡೆದಿದೆ. ಈ ಸಂದರ್ಭದಲ್ಲಿ ನಡೆಯಬಹುದಾಗಿದ್ದ ಭಾರೀ ಅನಾಹುತವೊಂದು ಬಸ್‌ ಚಾಲಕ ತುಕಾರಾಮ ಅವರ ಸಮಯ ಪ್ರಜ್ಞೆಯಿಂದಾಗಿ ತಪ್ಪಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಈಶಾನ್ಯ ಸಾರಿಗೆ ಸಂಸ್ಥೆಯ ಇಂಡಿ ಡಿಪೋಕ್ಕೆ ಸೇರಿದ ಬಸ್‌ ಪಂಢರಪುರದಿಂದ ಶನಿವಾರ ಬೆಳಗ್ಗೆ 9 ಗಂಟೆಗೆ ಹೊರಟು, ಚಡಚಣ, ದೇವರನಿಂಬರಗಿ, ಜಿಗಜೇವಣಿ, ಇಂಚಗೇರಿ, ಕನ್ನೂರ ಮಾರ್ಗವಾಗಿ ವಿಜಯಪುರದಿಂದ ಇಂಡಿ ತಲುಪಬೇಕಾಗಿತ್ತು. ಇಂಚಗೇರಿ ಗ್ರಾಮ ಮಠದ ಹತ್ತಿರ ಬಸ್‌ನ ರಾಡ್‌ ತುಂಡಾಯಿತು.

ಇದು ಅರಿವಿಗೆ ಬರುತ್ತಲೇ ಚಾಲಕ ತುಕಾರಾಮ ಅವರು ಬಸ್ಸಿನ ವೇಗವನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪರಿಣಾಮ ಅಪಘಾತವಾಗಬೇಕಿದ್ದ ಬಸ್‌ ನಿಧಾನಗತಿಯಲ್ಲಿ ಪಕ್ಕದ ಕಂದಕದಲ್ಲಿ ಬಂದು ನಿಂತಿದೆ. ಹೀಗಾಗಿ ನಡೆಯಬಹುದಾಗಿದ್ದ ಭಾರಿ ಅನಾಹುತವೊಂದು ತಪ್ಪಿ ಹೋಗಿದೆ. ಬಸ್‌ನಲ್ಲಿ ಸುಮಾರು 40 ಪ್ರಯಾಣಿಕರಿದ್ದು, ಸುಮಾರು 30 ಪ್ರಯಾಣಿಕರಿಗೆ ಸಣ್ಣಪುಟ್ಟಗಾಯಗಳಾಗಿವೆ. ಆದರೆ, ಯಾವುದೇ ಪ್ರಾಣಾಪಾಯವಾಗಿಲ್ಲ. ಚಾಲಕ ತುಕಾರಾಮ ಮಾಡಗ್ಯಾಳಗೆ ಕೈಕಾಲುಗಳಿಗೆ ಬಲವಾದ ಪೆಟ್ಟು ಬಿದ್ದಿದೆ.

ಚಾಲಕಗೆ ಶ್ಲಾಘನೆ:

ಅಪಘಾತದ ಸ್ಥಳದಲ್ಲಿ ಕಿರುಚಾಟ ಕಂಡ ಇಂಚಗೇರಿ ಗ್ರಾಮಸ್ಥರು ಧಾವಿಸಿ ಬಂದು ಪ್ರಯಾಣಿಕರಿಗೆ ನೆರವಾದರು. ಚಾಲಕನ ಸಮಯಪ್ರಜ್ಞೆಯಿಂದ ನಾವೆಲ್ಲರೂ ಸಾವನ್ನು ಗೆದ್ದಂತಾಗಿದೆ ಎಂದು ಪ್ರಯಾಣಿಕರು ಚಾಲಕನನ್ನು ಶ್ಲಾಘಿಸಿದರು. ಚಾಲಕ ತುಕಾರಾಮ ಇಲ್ಲಿಯವರೆಗೆ ಅಪಘಾತ ರಹಿತ ಸೇವೆ ಮಾಡುತ್ತಾ ಬಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ