ದಿಲ್ಲಿ ಏಮ್ಸ್‌ಗೆ ಕನ್ನಡಿಗ, ಯಾದಗಿರಿಯ ಡಾ. ಶ್ರೀನಿವಾಸ್ ಮುಖ್ಯಸ್ಥ

By Govindaraj S  |  First Published Sep 24, 2022, 2:15 AM IST

ಯಾದಗಿರಿಯ ದಿ.ಆಶಪ್ಪ ತಹಸೀಲ್ದಾರ ಪುತ್ರ ದೇಶದ ಪ್ರತಿಷ್ಠಿತ ಆಸ್ಪತ್ರೆಯ ಹೊಸ ನಿರ್ದೇಶಕ, ಕನ್ನಡ ಮಾಧ್ಯಮ ಹಾಗೂ ಸರ್ಕಾರಿ ಶಾಲೆಯಲ್ಲಿ ಕಲಿತ ಡಾ. ಶ್ರೀನಿವಾಸ್


ಆನಂದ್‌ ಎಂ. ಸೌದಿ

ಯಾದಗಿರಿ (ಸೆ.24): ಇಲ್ಲಿನ ಸರ್ಕಾರಿ ಶಾಲೆಯಲ್ಲಿ, ಅದೂ ಕನ್ನಡ ಮಾಧ್ಯಮದಲ್ಲಿ ಕಲಿತ ಪ್ರತಿಭಾವಂತರೊಬ್ಬರು ಈಗ ದೇಶದ ಪ್ರತಿಷ್ಠಿಯ ವೈದ್ಯಕೀಯ ಸಂಸ್ಥೆ ಹೆಗ್ಗಳಿಕೆ ಪಡೆದ ಏಮ್ಸ್ (ಆಲ್ ಇಂಡಿಯಾ ಇನ್ಸಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ನೂತನ ನಿರ್ದೇಶಕರಾಗಿ ಯಾದಗಿರಿ ಮೂಲದ ಡಾ. ಎಂ. ಶ್ರೀನಿವಾಸ್ ರನ್ನು ಕೇಂದ್ರ ಸರ್ಕಾರ ಮುಂದಿನ ಐದು ವರ್ಷದ ಅವಽಗೆ ನೇಮಿಸಿ ಆದೇಶ ಹೊರಡಿಸಿದೆ. 

Tap to resize

Latest Videos

undefined

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕಮೀಟಿಯು ಸೆ.9 ರಂದು ಈ ಆದೇಶ ಹೊರಡಿಸಿದೆ. ಇದಕ್ಕೂ ಮುಂಚೆ ಇದ್ದ ಡಾ. ರಣದೀಪ್ ಗುಲೇರಿಯಾ ಅವರ ಅವಽ ಮುಗಿದ ಹಿನ್ನೆಲೆಯಲ್ಲಿ, ಮುಂದಿನ 5 ವರ್ಷದವರೆಗೆ ಅಥವಾ 65 ವರ್ಷ ವಯೋಮಿತಿ ವರೆಗೆ ಇದನ್ನು ಮುಂದುವರೆಸಲಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಡಾ. ಶ್ರೀನಿವಾಸ್ 2016ಕ್ಕೂ ಮುಂಚೆ ದೆಹಲಿ ಏಮ್ಸ್‌ನಲ್ಲಿ ಕಾರ್ಯನಿರ್ವಹಿಸಿದ್ದರು. ಚಿಕ್ಕಮಕ್ಕಳ ಶಸ್ತ್ರಚಿಕಿತ್ಸಾ ವಿಶೇಷ ತಜ್ಞ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದರು. ಈಗ ಏಮ್ಸ್ ನಿರ್ದೇಶಕರ ಆಯ್ಕೆಗೂ ಮುಂಚೆ ಹೈದರಾಬಾದಿನ ಈಎಸ್‌ಐಸಿ ಆಸ್ಪತ್ರೆಯಲ್ಲಿ ಡೀನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಕಿರಿಯ ಸಹೋದರ ಡಾ. ನಾಗರಾಜ್ ಸಹ ಖ್ಯಾತ ದಂತವೈದ್ಯ ಪರಿಣಿತ ತಜ್ಞರು. ಕಲಬುರಗಿ ಇಎಸ್‌ಐಸಿ ಆಸ್ಪತ್ರೆಯಲ್ಲಿ ದಂತ ವೈದ್ಯದ ಡೀನ್ ಆಗಿದ್ದ ಅವರಿಗೂ ಸಹ ಈಗ ದೆಹಲಿ ಇಎಸ್‌ಐಸಿಗೆ ವರ್ಗಾವಣೆಯಾಗಿದೆ.

Chikkamagaluru: ಸಾವಿನಲ್ಲೂ ಸಾರ್ಥಕತೆ ಮೆರೆದ ರಕ್ಷಿತಾ ಕುಟುಂಬಕ್ಕೆ 8 ಲಕ್ಷ ಪರಿಹಾರ

ಯಾದಗಿರಿಯ ಗಾಂಧಿನಗರದ ನಿವಾಸಿಯಾಗಿದ್ದ ದಿ. ಆಶಪ್ಪ ಅವರ ಹಿರಿಯ ಪುತ್ರರಾಗಿರುವ ಡಾ. ಎಂ. ಶ್ರೀನಿವಾಸ್ ಅವರ ಈ ನೇಮಕ ಯಾದಗಿರಿ ವೈದ್ಯ ಸಮೂಹ ಸೇರಿದಂತೆ ಅನೇಕರಿಗೆ ಸಂತಸ ಹಾಗೂ ಹೆಮ್ಮೆ ಮೂಡಿಸಿದೆ. ದಿ. ಆಶಪ್ಪ ಅವರ ಈ ಪುತ್ರರಿಬ್ಬರೂ ಬಾಲ್ಯದಿಂದಲೂ ಪ್ರತಿಭಾವಂತರು. 

ಸರ್ಕಾರಿ ಶಾಲೆ, ಕನ್ನಡ ಮಾಧ್ಯಮ

ಯಾದಗಿರಿ ನಗರದ ಸ್ಟೇಷನ್ ಬಜಾರಿನ ಎಂಪಿಎಸ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಡಾ. ಶ್ರೀನಿವಾಸ್, ಇಲ್ಲಿನ ನ್ಯೂ ಕನ್ನಡ ಪ್ರೌಢಶಾಲೆಯಲ್ಲಿ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಓದಿದ್ದಾರೆ. ಬಳ್ಳಾರಿಯ ವಿಮ್ಸ್‌ನಲ್ಲಿ ಎಂ.ಬಿ.ಬಿ.ಎಸ್. ಹಾಗೂ ದಾವಣೆಗೆರೆಯಲ್ಲಿ ಎಂ.ಎಸ್. ಮುಗಿಸಿದ ನಂತರ, ದಿಲ್ಲಿ ಏಮ್ಸ್‌ನಲ್ಲಿ ಎಂಸಿಎಚ್ ಅಭ್ಯಸಿಸಿದ್ದಾರೆ. 

ಕನ್ನಡ ಮಾಧ್ಯಮದಲ್ಲಿ, ಅದೂ ಸರ್ಕಾರಿ ಶಾಲೆಗಳ ಬಗ್ಗೆ ಮೂಗು ಮುರಿಯುವವರ ಮಧ್ಯೆ, ಯಾದಗಿರಿ ಮೂಲದ ಡಾ. ಶ್ರೀನಿವಾಸ್ ಇಂತಹ ಕೀರ್ತಿಹೆಚ್ಚಳದ ಜೊತೆಗೆ ಹೆಮ್ಮೆಗೆ ಕಾರಣರಾಗುತ್ತಾರೆ. ನಾವು ಕನ್ನಡಿಗರು, ಯಾದಗಿರಿಯವರು. ಅಣ್ಣ ಡಾ. ಶ್ರೀನಿವಾಸ್ ಅವರು ದೇಶದ ಪ್ರತಿಷ್ಠಿತ  ದೆಹಲಿ ಏಮ್ಸ್‌ನ ಹೊಸ ನಿರ್ದೇಶಕರಾಗಿ ಆಯ್ಕೆಯಾಗಿರುವುದು ನಮಗೆಲ್ಲ ಸಂತಸ ಮೂಡಿಸಿದೆ. ನಮಗಿದು ಹೆಮ್ಮೆಯ ಸಂಗತಿ ಅಂತ ಈಎಸ್‌ಐಸಿ ದೆಹಲಿಯ ದಂತವೈದ್ಯ ವಿಭಾಗದ ಡೀನ್ ಹಾಗೂ ಡಾ ಶ್ರೀನಿವಾಸ್ ಅವರ ಸಹೋದರ ಡಾ. ನಾಗರಾಜ್ ತಿಳಿಸಿದ್ದಾರೆ. 

Uttara Kannada: ಪರಿಶಿಷ್ಟ ಪಂಗಡದ ಬೇಡಿಕೆ: ಹೋರಾಟಕ್ಕೆ ಅಣಿಯಾದ ಕುಣಬಿ ಸಮುದಾಯ

ದಿ. ಆಶಪ್ಪ ತಹಸೀಲ್ದಾರ ಅವರ ಹಿರಿಯ ಪುತ್ರ ಡಾ. ಶ್ರೀನಿವಾಸ್ ದೆಹಲಿ ಏಮ್ಸ್‌ನ ಹೊಸ ನಿರ್ದೇಶಕರಾಗಿ ಆಯ್ಕೆಯಾಗಿರುವುದು ಸಂತಸ ಮೂಡಿಸಿದೆ. ಪ್ರತಿಭಾವಂತಗೆ ಇಂತಹ ಗೌರವ ಸಂದಿರುವುದು ನಮ್ಮ ಯಾದಗಿರಿ ಹಾಗೂ ನಾಡಿಗೆ ಹೆಮ್ಮೆಯೆ ವಿಷಯ ಅಂತ ಮುದ್ನಾಳ್, ಹಿರಿಯ ವೈದ್ಯರು ಹಾಗೂ ಡಾ. ಶ್ರೀನಿವಾಸ್ ಕುಟುಂಬದ ಆಪ್ತ ವಲಯ ಡಾ. ನಾಗಣ್ಣ ಕೆ. ಹೇಳಿದ್ದಾರೆ.  

ಯಾದಗಿರಿಯ ದಿ. ಆಶಪ್ಪ ಅವರ ಪುತ್ರ ಡಾ| ಶ್ರೀನಿವಾಸ್ ಅವರು ದೆಹಲಿ ಏಮ್ಸ್ ಹೊಸ ನಿರ್ದೇಶಕರಾಗಿ ಆಯ್ಕೆಯಾಗಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ ಅಂತ ಯಾದಗಿರಿ ಜಿಲ್ಲೆಯ ಹಿರಿಯ ತಜ್ಞ ವೈದ್ಯರು ಹಾಗೂ ಐಎಂಎ ಮಾಜಿ ಅಧ್ಯಕ್ಷ ಡಾ. ಜಿ. ರಾಜೇಂದ್ರ ತಿಳಿಸಿದ್ದಾರೆ. 

click me!