ಆಕಸ್ಮಿಕ ಗೃಹ ಸಚಿವ ಮಾತಿಗೆ ಪರಂ ಗರಂ, 'ಹೌದು ನಾನು ಆಕಸ್ಮಿಕ ಏನೀಗ?' ಎಂದು ಪ್ರಶ್ನೆ!

By Santosh Naik  |  First Published Sep 13, 2024, 10:44 AM IST

ವಿಪಕ್ಷ ನಾಯಕರು ಪದೇ ಪದೇ ಆಕಸ್ಮಿಕ ಗೃಹ ಸಚಿವ ಎಂದು ಕರೆಯುತ್ತಿರುವುದಕ್ಕೆ ಗೃಹ ಸಚಿವ ಪರಮೇಶ್ವರ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಘಟನೆಗಳ ಬಗ್ಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದೇನೆ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.


ಬೆಂಗಳೂರು (ಸೆ.13): ಮಾತು ಮಾತಿಗೂ ಆಕಸ್ಮಿಕ ಗೃಹ ಸಚಿವ ಎನ್ನುವ ಬಿಜೆಪಿ ನಾಯಕರ ಮಾತಿಗೆ ಮಾತಿಗೆ ಪರಮೇಶ್ವರ್‌ ಗರಮ್‌ ಆಗಿದ್ದಾರೆ.  ನೀವೇ ಹೇಳಿ ಸರ್ಕಾರ ಹೋಗಿ ಗಲಾಟೆ ಮಾಡಿ ಅಂತ ಹೇಳೋಕಾಗುತ್ತಾ..? ಈ ರೀತಿ ಆಗಬಾರದಾಗಿತ್ತು ಅನ್ನೋದೇ ಒಂದು ದೊಡ್ಡ ಸ್ಟೇಟ್‌ಮೆಂಟ್‌ ಆಗಿದೆ. ನಮ್ಮ ಭಾಷೆ, ಕನ್ನಡ ಭಾಷೆ ಇವರಿಗೆ ಅರ್ಥ ಆಗೋದಿಲ್ವಾ? ನಾವು ಹಳ್ಳಿಯಿಂದ ಬಂದವರು. ಹಳ್ಳಿ ಭಾಷೆಯನ್ನ ಮಾತನಾಡಿದ್ದೇನೆ. ಟೆಕ್ಸ್ಟ್ ಬುಕ್ ಭಾಷೆಯನ್ನು ಮಾತನಾಡುವುದಕ್ಕೆ ಆಗುವುದಿಲ್ಲ. ನಾವು ಕಂಟ್ರೋಲ್ ಮಾಡಿದ್ದೇವೆ. ಮುಂದೆ ಈ ರೀತಿ ಆಗದಂತೆ ಕಠಿಣ ಕ್ರಮವನ್ನು ವಹಿಸಿದ್ದೇವೆ. ಯಾರು ಕೂಡ ಕಾನೂನು ಕೈಗೆತ್ತಿಕೊಳ್ಳುವುದಕ್ಕೆ ಬಿಡೋದಿಲ್ಲ. ಯಾವುದೇ ಹಬ್ಬದಲ್ಲಿ ಆದರೂ ಅನಾವಶ್ಯಕ ಗೊಂದಲ ಸೃಷ್ಟಿ ಮಾಡೋರನ್ನ ಬಿಡೋದಿಲ್ಲ. ಕಾನೂನಿನ ಚೌಕಟ್ಟಲ್ಲಿ ಯಾರೇ ಆದರೂ ಕ್ರಮವಹಿಸುತ್ತೇವೆ ಎಂದು ಹೇಳಿದ್ದಾರೆ.

ಒಂದು ಸಮುದಾಯ ತುಷ್ಟಿಕರಣ ಮಾಡಲಾಗುತ್ತಿದೆ ಎನ್ನುವ ಮಾತಿಗೆ ನಮಗೆ ಅದರ ಅಗತ್ಯವೇ ಇಲ್ಲ ಎಂದು ಪರಮೇಶ್ವರ್‌ ಹೇಳಿದ್ದಾರೆ. ಆಕಸ್ಮಿಕ ಗೃಹ ಸಚಿವ ಅನ್ನೋ ವಿಪಕ್ಷಗಳ ಟೀಕೆಗೆ ಸಿಟ್ಟಾದ ಪರಮೇಶ್ವರ್‌, ಹೌದೌದು.. ನಾನು ಆಕಸ್ಮಿಕಾನೇ,  ಶಬ್ದಗಳನ್ನ ಟ್ವಿಸ್ಟ್ ಮಾಡಿ ಮಾತನಾಡುವುದಕ್ಕೆ ಬರುವುದಿಲ್ಲ. ನಿಮಗೆ ಬೇಕಾದಂಗೆ ನಾನು ಹೇಳಿದ ವ್ಯಾಖ್ಯಾನವನ್ನ ತಿರುಚಿವುದಕ್ಕೆ ಆಗುವುದಿಲ್ಲ. ನಮಗೂ ಜವಾಬ್ದಾರಿ ಇದೆ. ನಾನು ರಾಜ್ಯದ ಗೃಹ ಸಚಿವನಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿದ್ದೇನೆ. ನಮಗೆ ಇವರ ಸರ್ಟಿಫಿಕೇಟ್ ಬೇಡ. ಜವಾಬ್ದಾರಿ ಇಲ್ಲದೆ ಈ ಸ್ಥಾನದಲ್ಲಿ ಕೂತಿಲ್ಲ. ಘಟನೆ ಆಗಿದ್ದನ್ನ ಸಮರ್ಥನೆ ಮಾಡುತ್ತಿಲ್ಲ. ಘಟನೆಗೆ ಯಾರು ಕಾರಣ ಆಗಿದ್ದಾರೆ ಅವರ ಮೇಲೆ ಕ್ರಮ ವಹಿಸಲಾಗಿದೆ. 52 ಜನರನ್ನ ಅರೆಸ್ಟ್ ಮಾಡಲಾಗಿದೆ. ಸುಮ್ಮನೆ ಅರೆಸ್ಟ್ ಮಾಡಿದ್ದಾರಾ . ಅದರಲ್ಲಿ ಯಾರೂ ಮೇನ್ ಇನ್ವಾಲ್ ಆಗಿದ್ದಾರೆ ಕಾನೂನಿನ ಪ್ರಕಾರ ಅವರ ಮೇಲೆ ಕ್ರಮ ಆಗಲಿದೆ ಎಂದು ತಿಳಿಸಿದ್ದಾರೆ. 

Tap to resize

Latest Videos

undefined

 

ನಾಗಮಂಗಲ: ಕೋಮುಗಲಭೆ ಅಲ್ಲ, ಆಕಸ್ಮಿಕ ಘಟನೆ, ಪರಮೇಶ್ವರ್‌

ಅವರು ಏನು ಬೇಕಾದರೂ ಹೇಳಿಕೆಗಳನ್ನು ಕೊಡಲಿ. ಕನ್ನಡ ಭಾಷೆಯನ್ನು ಟ್ವಿಸ್ಟ್ ಮಾಡಿ ಟರ್ನ್ ಮಾಡಿ ಪರಮೇಶ್ವರ್ ಹೀಗೆ ಹೇಳಿದರು ಅಂದರೆ ಹೇಗೆ? ನಮಗೂ ಮಾತನಾಡೋದಿಕ್ಕೆ ಬರುತ್ತೆ. ದಯಮಾಡಿ ವಿಪಕ್ಷದವರು ಇದನ್ನ ರಾಜಕೀಯಕ್ಕೆ ಬಳಸಬೇಡಿ ಎಂದು ಹೇಳಿದ್ದೆ ನಾನು ಮನವಿ ಮಾಡಿದ್ದೆ. ಆದರೂ ರಾಜಕೀಯ ಮಾಡ್ತೀವಿ ಅಂದ್ರೆ ಮಾಡಲಿ. ಅದನ್ನ ಹ್ಯಾಂಡಲ್ ಮಾಡೋದು ನಮಗೆ ಗೊತ್ತಿಲ್ವಾ ಎಂದು ಖಾರವಾಗಿ ಮಾತನಾಡಿದ್ದಾರೆ.

ಸರ್ಕಾರದ ಕಾರ್ಯಕ್ರಮ ಅನುಷ್ಠಾನಕ್ಕೆ ಬಿಜೆಪಿ ಅಡ್ಡಗಾಲು: ಗೃಹ ಸಚಿವ ಪರಮೇಶ್ವರ

click me!