ಎಲ್ಲಾ ಸಾವು ಕೊರೋನಾದಿಂದಾಗಿದ್ದಲ್ಲ..! ಶೇ.69 ಸಾವಿಗೆ ಕಾರಣವೇ ತಿಳಿದಿಲ್ಲ

By Kannadaprabha NewsFirst Published Aug 19, 2020, 7:44 AM IST
Highlights

ರಾಜ್ಯದಲ್ಲಿ ಆದ ಎಲ್ಲಾ ಸಾವುಗಳು ಕೊರೋನಾದಿಂದಲೇ ಎಂದು ಹೇಳಲಾಗದು. ಯಾಕೆಂದರೆ ಶೇ.69ರಷ್ಟು ಮರಣಕ್ಕ ವೈದ್ಯರು ಕಾರಣವನ್ನೇ ಪ್ರಮಾಣಿಕರಿಸಿಲ್ಲ.

ಬೆಂಗಳೂರು (ಆ.19):  ರಾಜ್ಯದಲ್ಲಿ ಉಂಟಾಗುತ್ತಿರುವ ಒಟ್ಟು ಸಾವಿನಲ್ಲಿ ಶೇ.31ರಷ್ಟುಸಾವು ಮಾತ್ರ ವೈದ್ಯಕೀಯವಾಗಿ ದೃಢೀಕರಣಗೊಳ್ಳುತ್ತಿವೆ. ಉಳಿದ ಶೇ.69ರಷ್ಟುಸಾವಿನ ಕಾರಣಗಳನ್ನು ವೈದ್ಯರಿಂದ ಪ್ರಮಾಣೀಕರಿಸುತ್ತಿಲ್ಲ ಎಂದು ಕೇಂದ್ರದ ಜನಗಣತಿ ಆಯುಕ್ತಾಲಯ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ತಿಳಿದುಬಂದಿದೆ.

ಕೇಂದ್ರದ ಜನಗಣತಿ ಆಯುಕ್ತಾಲಯವು ಬಿಡುಗಡೆ ಮಾಡಿರುವ 2018ರ ವರದಿ ಪ್ರಕಾರ, ಸಾವಿನ ಕಾರಣದ ಬಗ್ಗೆ ವೈದ್ಯರಿಂದ ಪ್ರಮಾಣೀಕರಿಸುವುದರಲ್ಲಿ ರಾಜ್ಯದ ಜನತೆ ಹಿಂದೆ ಬಿದ್ದಿದ್ದಾರೆ. ಸಾವಿನ ಕಾರಣ ಪತ್ತೆ ಮಾಡುವ ಗೋಜಿಗೆ ಹೋಗದೆ ಶೇ.69ರಷ್ಟುಮಂದಿ ಶವ ಸಂಸ್ಕಾರ ನೆರವೇರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕೊರೋನಾ ಪರೀಕ್ಷಾ ದರದಲ್ಲಿ ಭಾರಿ ಇಳಿಕೆ : ಸರ್ಕಾರದ ಆದೇಶ.

ಈ ಪೈಕಿ ಸಾವನ್ನು ವೈದ್ಯರಿಂದ ಪ್ರಮಾಣೀಕರಿಸುವ ಪಟ್ಟಿಯಲ್ಲಿ ರಾಜ್ಯವು 17ನೇ ಸ್ಥಾನದಲ್ಲಿದೆ. ಪ್ರತಿ 100 ಮಂದಿಯ ಸಾವಿನಲ್ಲಿ ಶೇ.31ರಷ್ಟುಸಾವುಗಳಿಗೆ ಮಾತ್ರ ವೈದ್ಯರಿಂದ ಯಾವ ಕಾರಣದಿಂದ ಮೃತಪಟ್ಟರು ಎಂಬ ದೃಢೀಕರಣ ಇರುತ್ತದೆ. 2016ರಲ್ಲಿ ಶೇ.34ರಷ್ಟುಸಾವುಗಳು ವೈದ್ಯರಿಂದ ದೃಢೀಕರಿಸಲ್ಪಡುತ್ತಿದ್ದವು. ಇದೀಗ ಈ ಪ್ರಮಾಣ 2018ರ ವೇಳೆಗೆ ಶೇ.31ಕ್ಕೆ ಇಳಿಕೆಯಾಗಿದೆ.

'ಯಡಿಯೂರಪ್ಪ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮದಿಂದ ಕೊರೋನಾ ನಿಯಂತ್ರಣ'.

ಕರ್ನಾಟಕದಲ್ಲಿ 2018ರಲ್ಲಿ 4,43,511 ಮಂದಿ ಮೃತಪಟ್ಟಿದ್ದರೆ, ವೈದ್ಯಕೀಯವಾಗಿ 1,50,415 ಸಾವುಗಳು ದೃಢೀಕೃತಗೊಂಡಿವೆ. ಉಳಿದಂತೆ ಗೋವಾದಲ್ಲಿ ಶೇ.100, ಲಕ್ಷದ್ವೀಪದಲ್ಲಿ ಶೇ.94.9, ದಮನ್‌ ಮತ್ತು ದಿಯು ಶೇ.90.8, ಪಾಂಡಿಚೇರಿ ಶೇ.74, ಚಂಢೀಗಡದಲ್ಲಿ ಶೇ.71 ಸಾವುಗಳು ವೈದ್ಯಕೀಯವಾಗಿ ಪ್ರಮಾಣೀಕೃತಗೊಳ್ಳುತ್ತಿವೆ.

click me!