ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ ಸೇವಿಸಿ ಉಗಿದರೆ ಬೀಳುತ್ತೆ ದಂಡ: 3 ವರ್ಷ ಜೈಲು

Kannadaprabha News   | Kannada Prabha
Published : Jun 01, 2025, 11:31 AM IST
Gutka

ಸಾರಾಂಶ

ತಿದ್ದುಪಡಿ ಕಾಯ್ದೆಯಂತೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವಷ್ಟೇ ಅಲ್ಲದೆ ಹೊಗೆ ರಹಿತ ತಂಬಾಕು ಪದಾರ್ಥಗಳನ್ನು ಸೇವಿಸಿ, ಉಗಿಯುವುದನ್ನೂ ನಿಷೇಧಿಸಲಾಗಿದೆ.

ಬೆಂಗಳೂರು (ಜೂ.01): ಸಾರ್ವಜನಿಕ ಸ್ಥಳಗಳಲ್ಲಿ ಹೊಗೆ ರಹಿತ ತಂಬಾಕು ಪದಾರ್ಥಗಳ ಬಳಕೆ ನಿಷೇಧಿಸುವ ಸಿಗರೆಟುಗಳ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ, ವಾಣಿಜ್ಯ ಉತ್ಪಾದನೆ, ಸರಬರಾಜು, ವಿತರಣೆ ವಿನಿಮಯ) ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದು, ಅದರಂತೆ ರಾಜ್ಯಪತ್ರ ಪ್ರಕಟಿಸಲಾಗಿದೆ.

ತಿದ್ದುಪಡಿ ಕಾಯ್ದೆಯಂತೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವಷ್ಟೇ ಅಲ್ಲದೆ ಹೊಗೆ ರಹಿತ ತಂಬಾಕು ಪದಾರ್ಥಗಳನ್ನು ಸೇವಿಸಿ, ಉಗಿಯುವುದನ್ನೂ ನಿಷೇಧಿಸಲಾಗಿದೆ. ಇದರೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಸೇವನೆಗೆ ₹200 ಇದ್ದ ದಂಡದ ಮೊತ್ತವನ್ನು ₹1 ಸಾವಿರಕ್ಕೆ ಹೆಚ್ಚಿಸಲಾಗಿದೆ. 21 ವರ್ಷದೊಳಗಿನವರಿಗೆ ತಂಬಾಕು ಪದಾರ್ಥ ಮಾರಾಟ ನಿಷೇಧ, ಉಪಹಾರ ಗೃಹ, ಪಬ್‌, ಬಾರ್‌, ರೆಸ್ಟೋರೆಂಟ್‌ಗಳಲ್ಲಿ ಹುಕ್ಕಾ ಬ್ಯಾನ್‌ ಮಾಡಲಾಗಿದೆ. ನಿಯಮ ಮೀರಿ ಹುಕ್ಕಾ ಬಾರ್‌ ತೆರೆದರೆ ಕನಿಷ್ಠ ₹50 ಸಾವಿರದಿಂದ ₹1 ಲಕ್ಷವರೆಗೆ ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಗುಟ್ಕಾ ಪಾನ್‌ಬೀಡಾ ಅಡ್ಡೆಯಾದ ಭವನ: ಬೆಲ್ಲದ ನಾಡು, ಕಲೆಗಳ ಬೀಡು, ಕಲಾವಿದರ ತವರು ಎನಿಸಿದ ಮಹಾಲಿಂಗಪುರದಲ್ಲಿ ದಶಕದ ಹಿಂದೆ (೧೩ ವರ್ಷಗಳ ಹಿಂದೆ) ನಿರ್ಮಾಣವಾದ ರಂಗಮಂದಿರ ಪಾಳು ಬಿದ್ದಿದೆ. ಕಲಾವಿದರ ಕಲೆಗೆ ಆಸರೆಯಾಗಬೇಕಿದ್ದ ರಂಗಮಂದಿರ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗಿದೆ.

ಖ್ಯಾತ ಕಲಾವಿದೆ, ಕ್ಷೇತ್ರದ ಶಾಸಕಿ ಉಮಾಶ್ರೀ ಅವರ ಕಾಳಜಿಯಿಂದ ₹3.20 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಕಟ್ಟಡವನ್ನು 2022ರ ಮಾರ್ಚ್‌ 12ರಂದು ಆಗಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಆಗಿದ್ದ ಉಮಾಶ್ರೀಯವರೇ ಉದ್ಘಾಟಿಸಿದ್ದರು. ಸುವ್ಯವಸ್ಥಿತವಾದ 110 ಆಸನ ಹೊಂದಿದ್ದು, ಪಾರಿಜಾತ ಕಲಾವಿದೆ ಕೌಜಲಗಿ ನಿಂಗಮ್ಮ ಹೆಸರಿನಲ್ಲಿ ತಲೆ ಎತ್ತಿದ್ದ ಈ ರಂಗ ಮಂದಿರದ ಸ್ಥಿತಿ ನೋಡಿ ಕಲಾವಿದರು ತಲೆ ತಗ್ಗಿಸುವಂತಾಗಿದೆ.

ಅವ್ಯವಸ್ಥೆಗಳ ಆಗರ: ಕಟ್ಟಡಕ್ಕೆ ಕಾಂಪೌಂಡ್ ಹಾಗೂ ಸಿಬ್ಬಂದಿಯ ಕಾವಲು ಇಲ್ಲದೆ ಬೇಕಾಬಿಟ್ಟಿ ಬಳಕೆಯಾಗಿ ಹಾಳಾಗುತ್ತಿದೆ. ರಾತ್ರಿ ಕುಡುಕರ ಅಡ್ಡೆಯಾಗಿದ್ದು, ಎಲ್ಲಿ ನೋಡಿದರಲ್ಲಿ ಸಾರಾಯಿ ಬಾಟಲ್‌, ಪೌಚ್‌ಗಳು ಕಂಡುಬರುತ್ತವೆ. ಗುಟ್ಕಾ ಚೀಟಿ ತಿಂದು ಉಗುಳಿ ಜೊತೆಗೆ ಎಸೆದು ಹೋಗಿದ್ದಾರೆ. ಆವರಣದಲ್ಲಿ ಗಿಡಗಂಟಿಗಳು ಬೆಳೆದು ಶೌಚಕ್ಕೆ ಹೇಳಿಮಾಡಿಸಿದ ಸ್ಥಳವಾಗಿದೆ. ಕಿಡಿಗೇಡಿಗಳು ಕಿಟಕಿಯ ಗಾಜು ಒಡೆದು ಹಾಕಿದ್ದಾರೆ. ನಾಮಫಲಕದ ಅಕ್ಷರಗಳು ಉದುರಿ ಬಿದ್ದಿವೆ. ಹೀಗೆಯೇ ಬಿಟ್ಟರೆ ಕಟ್ಟಡವೇ ಉದುರಿ ಬೀಳುವ ಸ್ಥಿತಿ ತಲುಪುವುದರಲ್ಲಿ ಸಂದೇಹವಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ರಸ್ತೆ-ಚರಂಡಿ ನಿರ್ಮಾಣದಿಂದ ಬಡವರು ಉದ್ದಾರ ಆಗ್ತಾರಾ?' ಗ್ಯಾರಂಟಿ ಸ್ಕೀಂ ಟೀಕೆಗೆ ಗೃಹಸಚಿವ ಪರಂ ತಿರುಗೇಟು!
ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನ, ದಾವಣಗೆರೆ ವ್ಯಾಪ್ತಿಯ ಶಾಲೆಗಳಿಗೆ ನಾಳೆ ರಜೆ