ಕೆಲವರು ಸರ್ಕಾರವನ್ನು ಅತಂತ್ರಗೊಳಿಸಬೇಕು ಎಂದು ಕಾಯುತ್ತಾ ಇರುತ್ತಾರೆ. ಇದಕ್ಕಾಗಿ ಶಾಸಕರಿಗೆ ಗಾಳ ಹಾಕುತ್ತಾ ಇರುತ್ತಾರೆ. ಸರ್ಕಾರವನ್ನು ಅತಂತ್ರಗೊಳಿಸಲಾಗದು ಎಂದು ಗೊತ್ತಿದ್ದರೂ, ಸುದ್ದಿಯಲ್ಲಿರಬೇಕು ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಾರೆ.
ಬೆಂಗಳೂರು (ಜು.27) : ಕೆಲವರು ಸರ್ಕಾರವನ್ನು ಅತಂತ್ರಗೊಳಿಸಬೇಕು ಎಂದು ಕಾಯುತ್ತಾ ಇರುತ್ತಾರೆ. ಇದಕ್ಕಾಗಿ ಶಾಸಕರಿಗೆ ಗಾಳ ಹಾಕುತ್ತಾ ಇರುತ್ತಾರೆ. ಸರ್ಕಾರವನ್ನು ಅತಂತ್ರಗೊಳಿಸಲಾಗದು ಎಂದು ಗೊತ್ತಿದ್ದರೂ, ಸುದ್ದಿಯಲ್ಲಿರಬೇಕು ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಾರೆ...
ಹೀಗಂತ ಸತತ 2ನೇ ದಿನವೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar) ಅವರು ಹೆಸರು ಪ್ರಸ್ತಾಪಿಸದೆಯೇ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಅವರಿಗೆ ಟಾಂಗ್ ನೀಡಿದ್ದಾರೆ.
ಸರ್ಕಾರ ಉರುಳಿಸುವ ಪಿತೂರಿ ಕುರಿತ ತಮ್ಮ ಹೇಳಿಕೆಗೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ನೀಡಿರುವ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರದಲ್ಲಿ ಇಲ್ಲದಾಗಲೇ ನನಗೆ ಮಾಹಿತಿ ಬರುತ್ತಿತ್ತು. ಈಗ ಸರ್ಕಾರವಿರುವಾಗ ಸಿಗುವುದಿಲ್ಲವೇ ಎಂದು ಅವರು ಸುದ್ದಿಗಾರರಿಗೆ ಪ್ರಶ್ನಿಸಿದರು.
ನೈತಿಕತೆ ಬಗ್ಗೆ ಮಾತು ಸಾಲದು, ನೈಸ್ ಸದನ ಸಮಿತಿ ವರದಿ ಬಗ್ಗೆ ಕ್ರಮ ಏಕಿಲ್ಲ? ಸಿದ್ದುಗೆ ದೇವೇಗೌಡ ಚಾಟಿ
‘ಜತೆಗೆ, ನನಗೆ ವೈಯಕ್ತಿಕ ಮಾಹಿತಿ ಕೂಡ ಸಿಗುತ್ತದೆ. ಎಲ್ಲಿ ಕರೆದರು, ಯಾರಿಗೆ ರೆಡಿ ಇರಿ ಎಂದು ಹೇಳಿದ್ದಾರೆ ಎಂಬುದನ್ನು ಖುದ್ದು ಶಾಸಕರೇ ನನಗೆ ಬಳಿ ಹೇಳಿದ್ದಾರೆ. ಡಿಸೆಂಬರ್ ಹೊತ್ತಿಗೆ ಮಾಯ-ಮಂತ್ರ ಮಾಡುತ್ತೇವೆ ಎಂದಿದ್ದಾರೆ. ವಿಧಾನಸಭೆಯಲ್ಲಿ ಕೆಲವರು ಚಾಕೊಲೇಟ್ ಕೊಡುತ್ತಾ ಇರುತ್ತಾರೆ’ ಎಂದರು.
‘ನಾನು ಕೆಪಿಸಿಸಿ ಅಧ್ಯಕ್ಷನಾಗಿ ಸುಮ್ಮನೆ ಕೂರಲು ಆಗುವುದಿಲ್ಲ. ಎಲ್ಲವನ್ನು ಗಮನಿಸುತ್ತಾ ಇರುತ್ತೇನೆ. ಪಿತೂರಿ ಮಾಹಿತಿ ಬಂದಿದ್ದರಿಂದಲೇ ಆ ಬಗ್ಗೆ ಹೇಳಿಕೆ ನೀಡಿದ್ದೇನೆ’ ಎಂದರು.
ನೈಸ್ ಅಕ್ರಮ: ಸರಣಿ ಟ್ವೀಟ್ ಮೂಲಕ ಸಿಎಂ ಸಿದ್ದರಾಮಯ್ಯಗೆ ಎಚ್‌ಡಿಕೆ ಸವಾಲು!