
ಬೆಂಗಳೂರು (ಮೇ.03): ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ದಿನದಿಂದ ದಿನಕ್ಕೆ ಇದರ ಅಬ್ಬರ ಹೆಚ್ಚಾಗುತ್ತಲೇ ಇದ್ದು, ಸರ್ಕಾರ ಇದ್ಯಾವುದರಾ ಬಗ್ಗೆಯೂ ಕೇರ್ ಮಾಡುತ್ತಿಲ್ಲ. ಇದರಿಂದ ನಾನೇ ಇವತ್ತು ಚೀಫ್ ಸೆಕ್ರೆಟರಿ ಭೇಟಿ ಮಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಮಾತನಾಡಿದ ಡಿ.ಕೆ.ಶಿವಕುಮಾರ್ ಸರ್ಕಾರದಲ್ಲಿರುವವರು ಪ್ರಚಾರದ ಪ್ರಿಯರು. ಅವರು ಹೆಣ ಸುಡುತ್ತಿದ್ದಾರೆ ಎಂದರು.
ಇನ್ನು ಕೆಲವು ಆಸ್ಪತ್ರೆಗೆ ಇಂತಿಂಥ ಆಫೀಸರ್ ಅಂತ ನೇಮಕ ಆದರೂ ಕೂಡ ಕೆಲವು ಕಡೆ ಇದ್ದಾರೆ. ಕೆಲವು ಕಡೆ ಇಲ್ಲ ಎಂದು ಡಿಕೆಶಿ ಅಸಮಾಧಾನ ವ್ಯಕ್ತಪಡಿಸಿದರು.
ಚಾಮರಾಜನಗರದಲ್ಲಿ ಘೋರ ಸ್ಥಿತಿ : ಏರುತ್ತಿರುವ ಸಾವಿನ ಸರಣಿ - ಆರೋಗ್ಯ ಸಚಿವರ ದೌಡು ..
ಆಕ್ಸಿಜನ್ ವಿಚಾರಕ್ಕೆ ಸಂಬಂಧಿಸಿದಂತೆ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಮಾತನಾಡಲು ಇಂದು ನಾನೇ ಚೀಫ್ ಸೆಕ್ರೆಟರಿ ಭೇಟಿ ಮಾಡುತ್ತೇಮೆ ನನ್ನ ಮರ್ಯಾದೆ ಹೋದರೂ ಪರವಾಗಿಲ್ಲ. ಯಾಕೆಂದರೆ ಈ ರಾಜ್ಯದ ಮುಖ್ಯಂತ್ರಿ ಬೇರೆ ಲೋಕದಲ್ಲಿ ಇದ್ದಾರೆ ಎಂದು ಆಕ್ರೋಶ ಹೊರಹಾಕಿದರು.
Died or Killed?
My heartfelt condolences to their families.
How much more suffering before the ‘system’ wakes up? pic.twitter.com/JrfZbIo7zm
— Rahul Gandhi (@RahulGandhi) May 3, 2021
ಇಂದು ಸಿಎಲ್ ಪಿ ಮೀಟಿಂಗ್ ಮುಗಿದ ನಂತರ ಚೀಫ್ ಸೆಕ್ರೆಟರಿ ಭೇಟಿ ಮಾಡುತ್ತೇನೆ. ಜನರಿಗೆ ವಾಸ್ತವ ಸ್ಥೀತಿ ಗೊತ್ತಾಗವೇಕು. ಚಾಮರಾಜನಗರ ದುರಂತಕ್ಕೆ ಯಾರು ಹೊಣೆಯಾಗುತ್ತಾರೆ. ಆಕ್ಸಿಜನ್‌ನಿಂದ ಇಲ್ಲಿ ಮರಣವಾಗಿಲ್ಲ ಎಂದರೆ ಮತ್ತಿನ್ನೇನು ಕಾರಣ ಎಂದು ಅಸಮಾಧಾನ ಹೊರಹಾಕಿದರು.
ಸುರ್ಜೇವಾಲಾ ಅಸಮಾಧಾನ : ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬಿಎಸ್ ವೈ ಬಿಜೆಪಿ ಸರ್ಕಾರದ ನಿಬೇಜವಾಗ್ದಾರಿಯಿಂದ ಕೊಲೆಯಾಗಿದೆ. ಆರೋಗ್ಯ ಸಚಿವ ಸುಧಾಕರ್ ರಾಜೀನಾಮೆ ನೀಡಬೇಕು. ಸಾವುಗಳಿಗೆ ಸಿಎಂ ಯಡಿಯೂರಪ್ಪ ನೈತಿಕ ಹೊಣೆ ಹೊರಬೇಕು ಎಂದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ