3 ಕೋಟಿ ಅರ್ಜಿ ವಿಲೇವಾರಿ ಮಾಡಿದ 'ಸೇವಾ ಸಿಂಧು' ಪೋರ್ಟಲ್‌ : 80 ಸರ್ಕಾರಿ ಇಲಾಖೆಗಳ ಸೇವೆ

Published : Feb 23, 2023, 05:31 PM ISTUpdated : Feb 23, 2023, 05:32 PM IST
3 ಕೋಟಿ ಅರ್ಜಿ ವಿಲೇವಾರಿ ಮಾಡಿದ 'ಸೇವಾ ಸಿಂಧು' ಪೋರ್ಟಲ್‌ : 80 ಸರ್ಕಾರಿ ಇಲಾಖೆಗಳ ಸೇವೆ

ಸಾರಾಂಶ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಆನ್‌ಲೈನ್ ಸಾರ್ವಜನಿಕ ಸೇವಾ ಪೋರ್ಟಲ್ 'ಸೇವಾ ಸಿಂಧು' ಆರಂಭಿಸಿದ ಐದು ವರ್ಷಗಳಲ್ಲಿ ಬರೋಬ್ಬರಿ 3 ಕೋಟಿ ಜನರಿಗೆ 3 ಕೋಟಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 

ಬೆಂಗಳೂರು (ಫೆ.23): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಆನ್‌ಲೈನ್ ಸಾರ್ವಜನಿಕ ಸೇವಾ ಪೋರ್ಟಲ್ 'ಸೇವಾ ಸಿಂಧು' ಆರಂಭಿಸಿದ ಐದು ವರ್ಷಗಳಲ್ಲಿ ಬರೋಬ್ಬರಿ 3 ಕೋಟಿ ಜನರಿಗೆ 3 ಕೋಟಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 

ಸೇವಾ ಸಿಂಧು ಪೋರ್ಟಲ್ ಮೂಲಕ ರಾಜ್ಯದ ನಾಗರಿಕರಿಗೆ 80 ಸರ್ಕಾರಿ ಇಲಾಖೆಗಳ ಒಟ್ಟು 850 ಸಾರ್ವಜನಿಕ ಸೇವೆಗಳನ್ನು ನೀಡಲಾಗುತ್ತಿದೆ. ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ಅಥವಾ ಸೇವಾ ಸಿಂಧುವಿನ ವಿತರಣಾ ಕೇಂದ್ರಗಳಾದ ಗ್ರಾಮಒನ್ , ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಪಡೆಯಲು ಸೇವೆ ಪಡೆಯಲು ಅವಕಾಶ ನೀಡಲಾಗಿದೆ. ಆನ್‌ಲೈನ್‌ನಲ್ಲಿ ಸ್ಲಾಟ್‌ಗಳನ್ನು ಬುಕ್ ಮಾಡಿದ ನಂತರ ಅಥವಾ ಗೊತ್ತುಪಡಿಸಿದ ಕೇಮದ್ರಗಳಿಗೆ ಭೇಟಿ ನೀಡುವ ಮೂಲಕ ಹಾಗೂ ಜನಸೇವಕರು ಮನೆ ಬಾಗಿಲಿಗೆ ಸೇವೆಯನ್ನು ತಲುಪಿಸಿದ್ದಾರೆ. 

ಗ್ರಾಮ ಒನ್‌ಗಳಿಗೆ ಇನ್ನಷ್ಟು ಆರ್ಥಿಕ, ತಾಂತ್ರಿಕ ಶಕ್ತಿ: ಸಿಎಂ ಬೊಮ್ಮಾಯಿ

ಪ್ರಮುಖ ಸರ್ಕಾರಿ ಸೇವೆಗಳ ವಿತರಣಾ ಕೇಂದ್ರ: ಗ್ರಾಮ ಒನ್‌ ಕೇಂದ್ರಗಳ ಮೂಲಕ ಜಾತಿ, ಆದಾಯ, ನಿವಾಸ, ಜನನ, ಮರಣ ಪ್ರಮಾಣ ಪತ್ರಗಳನ್ನು ನೀಡುವುದು, ವಿಧವಾ ಪಿಂಚಣಿ ಪ್ರಮಾಣಪತ್ರ ನೀಡುವ ಕಾರ್ಯ ಮಾಡಲಾಗುತ್ತದೆ. ಪೊಲೀಸ್ ಪರಿಶೀಲನೆ ಮತ್ತು ಬೆಳೆ ವಿಮೆಗಾಗಿ ಪ್ರಮಾಣೀಕರಣಗಳನ್ನು ಇಲ್ಲಿ ನೀಡಲಾಗುತ್ತದೆ. ಈ ಸೇವೆಗಳನ್ನು ಪಡೆಯಲು ಸರ್ಕಾರಿ ಕಚೇರಿಗಳ ಕೆಲಸದ ದಿನದಂದು ಒಮದು ಕೇಂದ್ರದಲ್ಲಿ ಸರಿಸುವಾಮ 500 ಜನರು ಸೇವೆಯನ್ನು ಪಡೆದುಕೊಳ್ಳುತ್ತಾರೆ. ಈ ಸಂಖ್ಯೆ ಕೆಲವೊಂದು ಬಾರಿ 2 ಸಾವಿರವನ್ನೂ ಮೀರಬಹುದು. 

ಭೌತಿಕ ದಾಖಲೆಗಳ ಪರಿಶೀಲನೆ ಸರಳೀಕರಣ: ಈ ಕುರಿತು ಮಾತನಾಡಿದ ಇ- ಆಡಳಿತ ಕಾರ್ಯದರ್ಶಿ ಪುನ್ನುರಾಜ್‌ ಅವರು, ಸಾರ್ವಜನಿಕರಿಗೆ ಸರ್ಕಾರಿ ಇಲಾಖೆಗಳ ಸೇವೆಗಳನ್ನು ಒದಗಿಸುವಲ್ಲಿ, ಆನ್‌ಲೈನ್‌ ಮೂಲಕ ಮನೆ ಬಾಗಿಲಿಗೆ ತಲುಪಿಸುತ್ತಿದ್ದೇವೆ. ಈ ಮೂಲಕ ಸಾರ್ವಜನಿಕರು ಸರ್ಕಾರಿ ಸೇವೆಗಳನ್ನು ಪಡೆಯಲು ಹಾಕುತ್ತಿದ್ದ ಶ್ರಮ ಮತ್ತು ಸಮಯವನ್ನು ನಾವು ಕಡಿತಗೊಳಿಸಿದ್ದೇವೆ. ಮತ್ತೊಂದೆಡೆ ಭೌತಿಕವಾಗಿ ಅಧಿಕಾರಿಗಳು ದಾಖಲೆ ಪರಿಶೀಲನೆ ಮಾಡುವ ಪ್ರಕ್ರಿಯೆಗಳನ್ನು ಸರಳೀಕರಣ ಮಾಡಿದ್ದೇವೆ. ಈ ಮೂಲಕ ಹಸ್ತಚಾಲಿತ ಅನುಮೋದನೆಗಳ ಅಗತ್ಯವನ್ನು ಕಡಿಮೆಗೊಳಿಸಿದ್ದೇವೆ ಎಂದು ಹೇಳಿದರು. 

ಅಂತರ್ಗತ ಆಡಳಿತ ವ್ಯವಸ್ಥೆ: ಗ್ರಾಮ ಒನ್‌ ಸೇವೆಯ ಯೋಜನಾ ನಿರ್ದೇಶಕ ಬಿ.ಎನ್. ವರಪ್ರಸಾದ್ ರೆಡ್ಡಿ  ಮಾತನಾಡಿ, ಸೇವಾಸಿಂಧು ಪೋರ್ಟಲ್‌ ಅಡಿಯಲ್ಲಿ ನೀಡುವ ಸೇವೆಯು ಅಂತರ್ಗತ ಆಡಳಿತ ಮತ್ತು ಆರ್ಥಿಕ ಒಳಗೊಳ್ಳುವಿಕೆ ಎರಡನ್ನೂ ಸಾಧಿಸಿದೆ. ರೈತರು, ಯುವಕರು, ಮಹಿಳೆಯರು, ಕಾರ್ಮಿಕರು ಮತ್ತು ಹಿರಿಯ ನಾಗರಿಕರಿಗೆ ಗ್ರಾಮ ಒನ್‌ ಮೂಲಕ ಸೇವೆ ಒದಗಿಸಲಾಗುತ್ತಿದೆ. ಇದು ಒನ್‌ ಸ್ಟಾಪ್‌ ಅಡಿಯಲ್ಲಿ ವಿವಿಧ ಸೇವೆಗಳನ್ನು ನೀಡುವ ವಿತರಣಾ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದರು. 

Karnataka: ಗ್ರಾಮ ಒನ್‌ನಿಂದ ಅಟಲ್‌ ಕೇಂದ್ರಗಳ ಭಾರ ಇಳಿಕೆ: ಸಿಎಂ ಬೊಮ್ಮಾಯಿ

 

18 ಲಕ್ಷ ಬಸ್‌ ಪಾಸ್‌ ಸ್ವಯಂ ಚಾಲಿತ ನವೀಕರಣ: ಶಾಲಾ ಮತ್ತು ಕಾಲೇಜು ವಿದ್ಯಾ ರ್ಥಿಗಳಿಗೆ ಬಸ್‌ ಪಾಸ್‌ ವ್ಯವಸ್ಥೆಯ ಮೂಲಕ ಸೇವೆಗಳ ಈ ತಂತ್ರಜ್ಞಾನ ವರ್ಗಾವಣೆಯನ್ನು ಸ್ಪಷ್ಟವಾಗಿ ಪ್ರದರ್ಶಿಸಲಾಗಿದೆ. ಪ್ರತಿ ವರ್ಷ, ನಾವು ಬಸ್‌ ಪಾಸ್‌ಗಳಿಗಾಗಿ ಸುಮಾರು 20 ಲಕ್ಷ ಅರ್ಜಿಗಳನ್ನು ಸ್ವೀಕರಿಸುತ್ತೇವೆ. ಅವುಗಳಲ್ಲಿ 2 ಲಕ್ಷ ಹೊಸ ಪಾಸ್‌ಗಳಿಗೆ ಮತ್ತು ಉಳಿದವು ನವೀಕರಣಗಳಿಗಾಗಿ ಸಲ್ಲಿಕೆ ಆಗಿರುತ್ತವೆ. ನಂತರದ ಶೈಕ್ಷಣಿಕ ವರ್ಷದಿಂದ 18 ಲಕ್ಷಪಾಸ್ ನವೀಕರಣಗಳು ಸ್ವಯಂಚಾಲಿತ ಆಗಿ ಮಾಡಲಾಗುತ್ತದೆ. ಜೊತೆಗೆ 2 ಲಕ್ಷ ಹೊಸ ಪಾಸ್‌ಗಳಿಗೆ ಅಲ್ಲಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಪೊನ್ನುರಾಜ್ ಹೇಳಿದರು.

7,300 ಗ್ರಾಮ ಒನ್‌ ಕೇಂದ್ರಗಳಿಮದ ಸೇವೆ: ರಾಜ್ಯದ ಇ-ಆಡಳಿತ ನಿರ್ದೇಶಕ ದಿಲೀಶ್ ಶಶಿ ಮಾತನಾಡಿ, ರಾಜ್ಯದಾದ್ಯಂತ ಈಗ 7,300ಕ್ಕೂ ಹೆಚ್ಚು ಗ್ರಾಮ ಒನ್‌ ಕೇಮದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಈವರೆಗೆ ಬರೋಬ್ಬರಿ 1.6ಕೋಟಿ ನಾಗರಿಕರಿಗೆ ಸೇವೆ ಸಲ್ಲಿಸಿವೆ. ಇದು ಸರ್ಕಾರದ ಪ್ರಬಲ ವಿತರಣಾ ಕಾರ್ಯ ವಿಧಾನಗಳಲ್ಲಿ ಒಂದಾಗಿದೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ