ಜೂನ್ 8ರಿಂದ ಪ್ರಾರ್ಥನಾ ಮಂದಿರ ಸೇರಿ ದೇವಾಲಯಗಳು ತೆರೆಯಲಿದ್ದು, ಈ ನಿಟ್ಟಿನಲ್ಲಿ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಪ್ರಾರ್ಧನಾ ಮಂದಿರಗಳಿಗೆ ಹೋಗುವವರು ಅನುಸರಿಸಬೇಕಾದ ಮಾರ್ಗಸೂಚಿಗಳು ಹೀಗಿವೆ.
ಬೆಂಗಳೂರು(ಜೂ.07): ಜೂನ್ 8ರಿಂದ ಪ್ರಾರ್ಥನಾ ಮಂದಿರ ಸೇರಿ ದೇವಾಲಯಗಳು ತೆರೆಯಲಿದ್ದು, ಈ ನಿಟ್ಟಿನಲ್ಲಿ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಪ್ರಾರ್ಧನಾ ಮಂದಿರಗಳಿಗೆ ಹೋಗುವವರು ಅನುಸರಿಸಬೇಕಾದ ಮಾರ್ಗಸೂಚಿಗಳು ಹೀಗಿವೆ.
ರಾಜ್ಯದ ಪ್ರಾರ್ಥನಾ ಮಂದಿರಗಳಿಗೆ ಪ್ರತ್ಯೇಕವಾಗಿ ಮಾರ್ಗಸೂಚಿಗಳ ಪ್ರಕಟವಾಗಿದ್ದು, ಮಸೀದಿಗಳು, ದರ್ಗಾಗಳು, ಚಚ್‌ಗಳು, ಬೌದ್ಧಾಲಯಗಳು, ಜೈನ ಬಸದಿಗಳು, ಗುರುದ್ವಾರಗಳು, ಪಾರ್ಸಿ ಮಂದಿರಗಳಿಗೆ ಪ್ರತ್ಯೇಕ ಮಾರ್ಗಸೂಚಿಗಳ ಪ್ರಕಟಿಸಲಾಗಿದೆ.
ಮಸೀದಿಗಳಲ್ಲಿ ಮಾರ್ಗಸೂಚಿಗಳು
ಮುಸಲ್ಮಾನರು ನಮಾಜ್ ಗೆ ತಮ್ಮದೇ ಸ್ವಂತ ಮ್ಯಾಟ್ ತರಬೇಕು.
ಮಸೀದಿಗಳ ಮುಂಭಾಗದಲ್ಲಿ ಕೊರೋನಾ ನಿಯಮಗಳಿರುವ ಫಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು..
ನಮಾಜ್ ಗೂ ಮುನ್ನ ಮೈಕ್‌ಗಳಲ್ಲಿ ಕೊರೋನಾ ಜಾಗೃತಿ ಬಗ್ಗೆ ಅನೌನ್ಸಮೆಂಟ್ ಮಾಡಬೇಕು...
ರಾತ್ರಿ ಕೊನೆಯ ನಮಾಜ್ ಮಾಡಿದ ಬಳಿಕ , ನಮಾಜ್ ಮಾಡಿದ ಸ್ಥಳವನ್ನ ಕಡ್ಡಾಯವಗಿ ಸ್ವಚ್ಛತೆ ಮಾಡಬೇಕು..
ಮಸೀದಿಗಳಲ್ಲಿ ನಮಾಜ್ ವೇಳೆ ಸಾಮಾಜಿಕ ಅಂತರ ಕಡ್ಡಾಯ..6 ಅಡಿ ಅಂತರದಲ್ಲಿ ನಮಾಜ್..
ನಮಾಜ್ ಮಾಡುವ ಜಾಗವನ್ನ ಸಾಮಾಜಿಕ ಅಂತರದಲ್ಲಿ ಮಾರ್ಕ್ ಮಾಡಬೇಕು.
ಮಸೀದಿ ಹೊರಗೆ ಚಪ್ಪಲಿಗಳನ್ನು ಸುರಕ್ಷಿತವಾಗಿ ಇಡಲು ವ್ಯವಸ್ಥೆ...
ನಮಾಜ್ ಮಾಡಿವ ಸ್ಥಳ ಭರ್ತಿಯಾದ ತಕ್ಷಣ ಗೇಟ್ ಕ್ಲೋಜ್ ಮಾಡಬೇಕು..
ಶುಕ್ರವಾರ ಹೆಚ್ಚು ಜನ ಇರೋದ್ರಿಂದ ಮೂರು ಸಲ ಪ್ರಾರ್ಥನೆ ಮಾಡಲು ಸೂಚನೆ..(ಪ್ರತಿ ನಮಾಜ್ ಗೂ ಅರ್ಥ ಗಂಟೆ ಮಿಸಲು)
ಮಸೀದಿಗಳಲ್ಲಿ ಮುಂದಿನ ಆದೇಶದವರೆಗೂ ಮದ್ರಸಾ ನಡೆಸುವಂತಿಲ್ಲ*
ಮಸೀದಿಯಲ್ಲಿ ಖುರಾನ್ ಸೇರಿದಂತೆ ಧಾರ್ಮಿಕ ಪುಸ್ತಕಗಳನ್ನು ಒದುವಂತಿಲ್ಲ...
ಮಸೀದಿಗಳಲ್ಲಿ ನಿಕಾ(ಮದುವೆಗಳಿಗೆ) ವ್ಯವಸ್ಥೆಗೆ ನಿರ್ಬಂಧ...
ಪರಸ್ಪರ ಹ್ಯಾಂಡ್ ಶೇಕ್, ಆಲಿಂಗನ ಮಾಡಿಕೊಳ್ಳಲು ಅವಕಾಶ ಇಲ್ಲ
ದರ್ಗಾಗಳಿಗೆ ಮಾರ್ಗಸೂಚಿಗಳು
ದರ್ಗಾಗಳನ್ನು ಬೆಳಗ್ಗೆ 10 ರಿಂದ ಸಂಜೆ 4 ಗಂಟೆ ವರೆಗೆ ಮಾತ್ರ ತೆರೆಯಬೇಕು..
ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಕ್ಯೂ ವ್ಯವಸ್ಥೆ ಮಾಡಿರಬೇಕು...
ಅಡಿ ಸಾಮಾಜಿಕ ಅಂತರ, ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯ..
ದರ್ಗಾಗಳಲ್ಲಿ ಮಾಲಾರ್ಪಣೆ, ಹೂ ಹಾಕುವುದು ನಿಷೇಧ
ದರ್ಗಾದಲ್ಲಿ ಹರಕೆಗಳನ್ನ ತೀರಿಸಲು ಮಾತ್ರ ಅವಕಾಶ..
ದರ್ಗಾದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸುರಕ್ಷತೆಯಲ್ಲಿರಬೇಕು... ದರ್ಗಾಗಳಲ್ಲಿ ಹಸಿರು ಧ್ವಜ ಕಟ್ಟಲು ನಿರ್ಬಂಧ..
ಚರ್ಚ್ ಗಳಲ್ಲಿ ಮಾರ್ಗಸೂಚಿಗಳು
ಭಾನುವಾರದ ವಿಶೇಷ ಪ್ರಾರ್ಥನೆಯನ್ನು ಶನಿವಾರದಿಂದ ಆರಂಭಿಸಬೇಕು..
ಭಾನುವಾರದ ವಿಶೇಷ ಪ್ರಾರ್ಥನೆಗಳನ್ನು ಜನ ಜಾಸ್ತಿ ಇದ್ರೆ ವಾರದ ದಿನಗಳಲ್ಲೂ ವಿಸ್ತರಣೆಗೆ ಮಾಡುವಂತೆ ಸೂಚನೆ..
ಚರ್ಚ್ ಗಳ ಒಳಗೆ ಪ್ರೇಯರ್ ಗೆ ಕೂರಲು 6 ಅಡಿ ಸಾಮಾಜಿಕ ಅಂತರ ಕಡ್ಡಾಯ...
ಚರ್ಚ್ ಗಳಲ್ಲಿ ಕೊರೋನಾ ಮಾರ್ಗಸೂಚಿಗಳ ಫಲಕಗಳ ಪ್ರದರ್ಶನ ಮಾಡಬೇಕು...
ಚರ್ಚ್ ನಲ್ಲಿ ಗಂಟೆಗಳನ್ನು ಮತ್ತು ಇನ್ನಿತರೆ ವಸ್ತುಗಳನ್ನ ಮುಟ್ಟುವುದಕ್ಕೆ ನಿರ್ಬಂಧ..
ಚರ್ಚ್ ನಲ್ಲಿ ಕ್ರೈಸ್ತ ಪ್ರಾರ್ಥನಾ ಗೀತೆಗಳಿಗೆ ಎಲ್ ಸಿಡಿ ಪ್ರೊಜೆಕ್ಟರ್ ಬಳಸಿ..
ಚರ್ಚ್ ಗಳಲ್ಲಿನ ಪ್ರಾರ್ಥನೆಯನ್ನ ಲೈವ್ ಸ್ಟ್ರಿಮಿಂಗ್ ಮಾಡಿ ಮನೆಯಲ್ಲಿ ವೀಕ್ಷಣೆ ಮಾಡುವಂತೆ ಮಾಡಿ..
ಸಿಖ್ಖರ ಗುರುದ್ವಾರಗಳಿಗೆ ಮಾರ್ಗಸೂಚಿಗಳು
ಭಾನುವಾರದಂದು ಗುರುದ್ವಾರಗಳನ್ನು ತೆರೆಯಲು ಸಮಯ ನಿಗದಿ
ಭಾನುವಾರದ ಪ್ರಾರ್ಥನೆಗಳಿಗೆ ದಿನದ ಮೂರು ಹೊತ್ತಿನಲ್ಲಿ ಪ್ರಾರ್ಥನೆಗೆ ಅವಕಾಶ
ಭಾನುವಾರದ ಬೆಳಗ್ಗೆ 8 ರಿಂದ 9,
ಬೆಳಗ್ಗೆ 11.30 ರಿಂದ ಮಧ್ಯಾಹ್ನ 12.30,
ಸಂಜೆ 6.30 ರಿಂದ 7.30 ವರೆಗೆ ಪ್ರಾರ್ಥನೆಗೆ ಸಮಯ ನಿಗದಿ
ಗುರುದ್ವಾರಗಳಲ್ಲಿ ಪವಿತ್ರ ಗ್ರಂಥಗಳ ಪಠಣೆಗೆ ನಿರ್ಬಂಧ
ಗುರುದ್ವಾರಗಳ ಒಳಗೆ ಸಾಮಾಜಿಕ ಅಂತರದಲ್ಲಿ ಪ್ರಾರ್ಥನೆ ಮಾಡಬೇಕು..
ಸಾಮಾಜಿಕ ಅಂತರ, ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯ
ಜೈನ ಬಸದಿಗಳಲ್ಲಿ ಮಾರ್ಗಸೂಚಿಗಳು
ಜೈನ ಬಸದಿಗಳಲ್ಲಿ ನಿತ್ಯದ ಪ್ರಾರ್ಥನೆಗೆ ಸಮಯ ನಿಗದಿ
ಬೆಳಗ್ಗೆ 7 ರಿಂದ 9 ರೊಳಗೆ ಪ್ರಾರ್ಥನೆ
ಪ್ರಾರ್ಥನೆ ಗಳ ಆನ್ ಲೈನ್ ನೇರ ಪ್ರಸಾರಕ್ಕೆ ಸೂಚನೆ..
ಜೈನಬಸದಿಗಳಲ್ಲಿ ಎಲ್ಲ ಕೊರೋನಾ ಸುರಕ್ಷತಾ ನಿಯಮಗಳ ಪಾಲನೆ ಕಡ್ಡಾಯ..
ಭಕ್ತಾದಿಗಳು ಯಾವುದೇ ಕಾರಣಕ್ಕೂ ಶೇಕ್ ಹ್ಯಾಂಡ್ಸ್ ಕೊಡಬಾರದು...
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ