ತಮ್ಮ ಪಕ್ಷದ ತಿಂಡಿಯನ್ನ ಮಠದಾಗ ತೀರಿಸಿಕೊಳ್ಳೋ ಪ್ರಯತ್ನ ಮಾಡುವ ರಾಜಕಾರಣಿಗಳು ಈ ನಾಡಿನಲ್ಲಿ ಹುಟ್ಟಿರೋದ್ರಿಂದಲೇ ಸ್ವಾಮಿಗಳು ತಮ್ಮ ಸ್ವಾತಂತ್ರ್ಯ ಕಳಕೊಂಡು ಕುಂತಾರ ಎಂದು ರಾಜಕಾರಣಿಗಳ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ (ನ.26): ತಮ್ಮ ಪಕ್ಷದ ತಿಂಡಿಯನ್ನ ಮಠದಾಗ ತೀರಿಸಿಕೊಳ್ಳೋ ಪ್ರಯತ್ನ ಮಾಡುವ ರಾಜಕಾರಣಿಗಳು ಈ ನಾಡಿನಲ್ಲಿ ಹುಟ್ಟಿರೋದ್ರಿಂದಲೇ ಸ್ವಾಮಿಗಳು ತಮ್ಮ ಸ್ವಾತಂತ್ರ್ಯ ಕಳಕೊಂಡು ಕುಂತಾರ ಎಂದು ರಾಜಕಾರಣಿಗಳ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ದಿಂಗಾಲೇಶ್ವರ ಸ್ವಾಮೀಜಿ, ರಾಜಕಾರಣಿಗಳಿಗೆ ಹೆದರಿ ಬಾಳೇವು ಮಾಡಕತ್ತಾವು ಸ್ವಾಮಿಗಳ ಮಂದಿ. ತಂದೆ ತಾಯಿ, ಬಂಧು ಬಳಗ ಮನಿನೇ ಬಿಟ್ಟ ಬಂದ್ಮೇಲೆ, ಇನ್ನೊಬ್ಬರ ಕೈಯಾಗ ಬಾಳೇ ಮಾಡೋದಂದ್ರ ಇದೆಂತಹ ಸನ್ಯಾಸತ್ವ. ಇವತ್ತು ಸ್ವಾಮಿಗಳನ್ನ ರಾಜಕಾರಣಿಗಳು ಸಹ ತಮ್ಮ ಕೈಯಾಗ ಇಟ್ಟುಕೊಂಡು ಹೋಗುವ ವ್ಯವಸ್ಥೆ ಆಗ್ತಿದೆ. ನಿಮ್ಮನ್ನಷ್ಟೇ ಅವರು ಕೈಯಾಗ ಇಟ್ಕೊಂಡಿಲ್ಲ. ಸ್ವಾಮೀಗಳ್ನ ಸಹಿತ ನಾವು ಹೇಳಿದಂಗ ಕಾರ್ಯಕ್ರಮ ಮಾಡಬೇಕು, ನಾವು ಹೇಳಿದವ್ರನ್ನ ಪತ್ರಿಕೇಲಿ ಹೆಸರು ಹಾಕಬೇಕು. ಎಲ್ಲಾ ನಾವು ಹೇಳಿದಂಗ ಆಗಬೇಕು ಅನ್ನೋ ಎಲ್ಲ ಮಂದೀನ ಕೈಯಾಗ ಇಟ್ಟುಕೊಂಡು ನಡೀಕತ್ತಾರ ಎಂದು ಕಿಡಿಕಾರಿದ್ದಾರೆ.
undefined
ಯಾವುದೇ ಸಮಾಜಕ್ಕೆ ನೋವುಂಟಾಗುವುದಿದ್ದರೆ ಜಾತಿಗಣತಿ ವರದಿ ಬಿಡುಗಡೆ ಮಾಡಬೇಡಿ: ದಿಂಗಾಲೇಶ್ವರ ಸ್ವಾಮೀಜಿ
ನಾನು ಯಾವುದೇ ಪಕ್ಷದ ಬಗ್ಗೆ ಯಾರನ್ನೇ ಕರದುಕೊಂಡು ಕುಳಿತರೂ ಇನ್ನೊಬ್ಬಾವ ಚಾಲು ಮಾಡ್ತಾನೆ. ನಮ್ಮ ಸ್ವಾಮಿಗಳದ್ದು ಎಷ್ಟರ ಮಟ್ಟಿಗೆ ಕಷ್ಟ ಐತಿ ಅಂದ್ರ. ಯಾವುದೇ ಪಕ್ಷದವ್ರು ಬಂದ್ರೂ ನಾವೇನು ಬ್ಯಾಡ ಅನ್ನಂಗಿಲ್ಲ. ಕೆಲವು ಜನ ಸ್ವಾಮೀಗಳು ರಾಜಕಾರಣಿಗಳ ಮನೆ ಕಸ ಹೊಡೆಯುವ ಆಳಿಗಿಂತ ಕನಿಷ್ಠ ಆಗುವಂತ ಕೆಟ್ಟ ಪರಿಸ್ಥಿತಿ ನಿರ್ಮಾಣ ಆಗಿದೆ. ಸನ್ಯಾಶಿಗಳು ಯಾವಾಗಲೂ ಆಧೀನದ ಕೆಲಸ ಮಾಡಬಾರದು. ಸ್ವಾತಂತ್ರ್ಯ ತೆಗೆದುಕೊಂಡು ಎಲ್ಲರನ್ನ ಸಮತಾ ದೃಷ್ಟಿಯಲ್ಲಿ ನೋಡಬೇಕು. ಜಾತಿ, ಗುಂಪು ಘರ್ಷಣೆ, ರಾಜಕಾರಣ, ಮೇಲು-ಕೀಳು ಅನ್ನೋದು ಏನಿದೆ ಅದನ್ನೆಲ್ಲ ತೊಡೆದುಹಾಕಬೇಕು ಅಂದಾಗ ಮಾತ್ರ ನಾಡಿಗೆ ಒಳ್ಳೆದಾಗುತ್ತೆ. ಅದುಬಿಟ್ಟು ಸ್ವಾಮಿಗಳೇ ಮುಲಾಜು ಕಾಯ್ದರೆ, ಏಕತೆ ಸಮಾನತೆ ಬರೋದಿಲ್ಲ ಎಂದರು.
ರಾಜಕಾರಣದಲ್ಲಿ ಧರ್ಮ ಇರಬೇಖು, ಆದರೆ ಧರ್ಮದಲ್ಲಿ ರಾಜಕಾರಣ ಬರಬಾರದು: ದಿಂಗಾಲೇಶ್ವರ ಸ್ವಾಮೀಜಿ
ಒಂದೇ ಜಾತಿಗೆ ಸ್ವಾಮಿ ಅದಾವ ಸ್ವಾಮೀನೇ ಅಲ್ಲ:
ಸ್ವಾಮಿಗಳು ಭಾವೈಕ್ಯತಾ ಮೂರ್ತಿಗಳಾಗಿರಬೇಕು. ರಾಜ್ಯದಲ್ಲಿರೋ ಯಾವ ಸಮಾಜದ ಸ್ವಾಮಿ ಅದಾನ, ಅವ ಎಲ್ಲಾ ಜಾತಿಗೆ ಮೀಸಲಾಗಿರಬೇಕು. ಅಂವ ಒಂದೇ ಜಾತಿಗೆ ಮೀಸಲಾಗ್ಯಾನ ಅಂದ್ರ ಅವ ಸ್ವಾಮೀನೇ ಅಲ್ಲ. ಕಾವಿ ಒಂದ ಜಾತಿಗೆ, ಒಂದ ವರ್ಗಕ್ಕೆ ಮೀಸಲಲ್ಲ. ಅದು ಎಲ್ಲಾ ವರ್ಗಕ್ಕೂ ಸಹ ಮೀಸಲು. ಎಲ್ಲಾ ಜಾತಿಯಲ್ಲಿ ಹುಟ್ಟಿದ ಹುಡುಗರನ್ನ ಸ್ವಾಮಿ ಮಾಡಬಹುದು. ಬ್ರಾಹ್ಮಣರ, ಜಂಗಮರ ಸ್ವಾಮಿಗಳಾಬೇಕು ಅಂತೇನಿಲ್ಲ. ಯಾವ ಜಾತಿಯಲ್ಲಿ ಹುಟ್ಟಿದ್ರೂ ಸ್ವಾಮಿ ಆಗೋಕೆ ಬರುತ್ತೆ. ಆದ್ರೆ ಸ್ವಾಮಿ ಆದ್ಮೇಲೆ ಜಾತಿ ಕೆಲಸ ಮಾಡೋಕೆ ಬರಲ್ಲ. ಜಾತಿ ತಾರತಮ್ಯ, ಬಡವ-ಶ್ರೀಮಂತ ದೂರ ಮಾಡಬೇಕು ಎಂದ ದಿಂಗಾಲೇಶ್ವರ ಸ್ವಾಮೀಜಿ