ಬ್ರಿಟನ್‌ ವೈರಸ್‌ ರಾಜ್ಯಕ್ಕೆ ಬಂತಾ..? ಸೀಕ್ವೆನ್ಸ್ ವರದಿ ಪ್ರಕಟ

By Suvarna News  |  First Published Dec 25, 2020, 7:00 AM IST

ಬ್ರಿಟನ್‌ ವೈರಸ್‌ ಸೀಕ್ವೆನ್‌್ಲ ವರದಿ ಇಂದು ಪ್ರಕಟ | ಭಾರತಕ್ಕೂ ಬಂತಾ ಹೊಸ ವೈರಸ್‌? ಇಂದು ವರದೀಲಿ ಸಿಗಲಿದೆ ಉತ್ತರ


ಬೆಂಗಳೂರು(ಡಿ.25): ಬ್ರಿಟನ್‌ನಿಂದ ಆಗಮಿಸಿದ್ದ ಪ್ರಯಾಣಿಕರ ಪೈಕಿ ಬುಧವಾರದ ವೇಳೆಗೆ ಕೊರೋನಾ ಸೋಂಕು ದೃಢಪಟ್ಟಿದ್ದ ಮೂರು ಮಂದಿಯ ಪಾಸಿಟಿವ್‌ ಮಾದರಿಗಳ ‘ಜೆನೆಟಿಕ್‌ ಸೀಕ್ವೆನ್ಸ್‌’ ಪರೀಕ್ಷಾ ವರದಿ ಬಹುತೇಕ ಶುಕ್ರವಾರ ಹೊರಬೀಳಲಿದ್ದು, ಇದು ರೂಪಾಂತರಗೊಂಡ ಕೊರೋನಾ ವೈರಾಣು ಹೌದೇ ಅಥವಾ ಅಲ್ಲವೇ ಎಂಬುದು ಸ್ಪಷ್ಟವಾಗಲಿದೆ.

ಹೀಗಾಗಿ ಶುಕ್ರವಾರ ಹೊರಬೀಳುವ ಮೊದಲ ಜೆನೆಟಿಕ್‌ ಸೀಕ್ವೆನ್ಸ್‌ ವರದಿ ಕುತೂಹಲ ಕೆರಳಿಸಿದೆ. ಬ್ರಿಟನ್‌ನಲ್ಲಿ ಪತ್ತೆಯಾಗಿರುವ ರೂಪಾಂತರಗೊಂಡ ವೈರಸ್‌ ಕೋವಿಡ್‌-19ಗಿಂತ ಶೇ.70ರಷ್ಟುವೇಗವಾಗಿ ಹರಡಲಿದೆ ಎಂಬ ಕಾರಣಕ್ಕೆ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

Latest Videos

undefined

ಶಾಲೆ ಆರಂಭದ ಘೋಷಣೆ ನಡುವೆಯೇ 15 ವಿದ್ಯಾರ್ಥಿಗಳಿಗೆ ಕೊರೋನಾ ಅಟ್ಯಾಕ್...!

ಬ್ರಿಟನ್‌ನಿಂದ ಬಂದವರ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಿ ಪ್ರತಿಯೊಬ್ಬರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಬುಧವಾರದ ವೇಳೆಗೆ ಮೂರು ಮಂದಿಗೆ ಸೋಂಕು ದೃಢಪಟ್ಟಿದ್ದು, ಮೂವರ ಪಾಸಿಟಿವ್‌ ಮಾದರಿಗಳನ್ನು ಜೆನೆಟಿಕ್‌ ಸೀಕ್ವೆನ್ಸ್‌ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ರಾಜ್ಯದಲ್ಲಿ ಪಾಸಿಟಿವ್‌ ಬಂದಿರುವ ಬ್ರಿಟನ್‌ ಪ್ರಯಾಣಿಕರ ಮಾದರಿಗಳನ್ನು ಬೆಂಗಳೂರಿನ ನಿಮ್ಹಾನ್ಸ್‌ ಪ್ರಯೋಗಾಲಯ, ಕೊಡಿಗೇಹಳ್ಳಿಯಲ್ಲಿರುವ ಎನ್‌ಸಿಬಿಸ್‌ (ನ್ಯಾಷನಲ್‌ ಸೆಂಟರ್‌ ಫಾರ್‌ ಬಯಾಲಜಿಕಲ್‌ ಸೈನ್ಸಸ್‌), ಜಿಕೆವಿಕೆ ಕ್ಯಾಂಪಸ್‌ನಲ್ಲಿರುವ ಇನ್ಸೆ$್ಟಮ್‌ (ಇನ್‌ಸ್ಟಿಟ್ಯೂಟ್‌ ಫಾರ್‌ ಸ್ಟೆಮ್‌ ಸೆಲ್‌ ಸೈನ್ಸ್‌ ಅಂಡ್‌ ರಿಜೆನರೇಟಿವ್‌ ಮೆಡಿಸಿನ್‌) ಹಾಗೂ ಐಐಎಸ್ಸಿ ಸಂಸ್ಥೆಗಳಲ್ಲಿ ಅಧ್ಯಯನ ನಡೆಸಲಾಗುತ್ತಿದೆ.

ರಾಜ್ಯದಲ್ಲಿ ನೈಟ್​ ಕರ್ಫ್ಯೂ ಕ್ಯಾನ್ಸಲ್: ಸಿಎಂ ಮಹತ್ವದ ಘೋಷಣೆ

ಮೊದಲ ದಿನದ ಮಾದರಿಗಳನ್ನು ನಿಮ್ಹಾನ್ಸ್‌ ಹಾಗೂ ಇನ್ಸೆ$್ಟಮ್‌ನಲ್ಲಿ ಪರೀಕ್ಷೆ ನಡೆಸುತ್ತಿದ್ದು, ಇದು ವೇಗವಾಗಿ ಹರಡುವ ರೂಪಾಂತರಗೊಂಡ ಕೊರೋನಾ ವೈರಾಣುವೇ ಅಥವಾ ಈಗಾಗಲೇ ರಾಜ್ಯದಲ್ಲಿರುವ ಕೋವಿಡ್‌-19 ವೈರಾಣುವೇ ಎಂಬುದು ತಿಳಿಯಲಿದೆ.

click me!