ಸವಣೂರಿನ 2 ಸಾವಿರ ವರ್ಷದ ಹುಣಸೆ ಮರ, ಮರುನಾಟಿ ಮಾಡಿದ ಕೃಷಿ ವಿಜ್ಞಾನಿಗಳು

By Sathish Kumar KHFirst Published Jul 13, 2023, 4:11 PM IST
Highlights

ಇತ್ತೀಚೆಗೆ ಗಾಳಿ ಮಳೆಯಿಂದ ಧರೆಗುರುಳಿದ್ದ ಹಾವೇರಿ ಜಿಲ್ಲೆ ಸವಣೂರಿನ 2 ಸಾವಿರ ವರ್ಷದ ದೊಡ್ಡ ಹುಣಸೆ ಮರವನ್ನು ಕೃಷಿ ವಿಜ್ಞಾನಿಗಳ ನೇತೃತ್ವದಲ್ಲಿ ಮರುನಾಟಿ ಮಾಡಲಾಗುತ್ತಿದೆ.

ಹಾವೇರಿ (ಜು.13): ರಾಜ್ಯದಲ್ಲಿ ರಾಜ ಮಹಾರಾಜ ಅಳ್ವಿಕೆ ಕಾಲದಿಂದಲೂ ಹುಣಸೆ ಹಣ್ಣುಗಳ ಫಲವನ್ನು ನೀಡುತ್ತಾ ಬಂದಿದ್ದ ಸುಮಾರು 2 ಸಾವಿರ ವರ್ಷದ ಹಾವೇರಿಯ ಅತಿ ದೊಡ್ಡ ಮತ್ತು ಧೀರ್ಘಾಯುಷ್ಯದ ಹುಣಸೆ ಮರ ಇತ್ತೀಚೆಗೆ ಗಾಳಿ ಮಳೆಯಿಂದ ಧರೆಗುರುಳಿತ್ತು. ಆದರೆ, ಹುಣಸೆ ಮರದ ಇತಿಹಾಸವನ್ನು ಅರಿತ ಸ್ಥಳೀಯರು ಧಾರವಾಡ ಕೃಷಿ ವಿಜ್ಞಾನಿಗಳ ನೇತೃತ್ವದಲ್ಲಿ ಮರು ನಾಟಿ ಮಾಡಲು ಮುಂದಾಗಿದ್ದಾರೆ.

ದೇಶ ಹಾಗೂ ರಾಜ್ಯದಲ್ಲಿ ಖ್ಯಾತಿಯಾಗಿರುವ ಹಾಗೂ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಕೇಳಲಾಗಿರುವ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಕಲ್ಮಟದ ಆವರಣದಲ್ಲಿರುವ ದೊಡ್ಡ ಹುಣಸೆ ಮರ ಕಳೆದ ವಾರ ಬಿರುಗಾಳಿ ಮಳೆಯಿಂದಾಗಿ ಧರೆಗುರುಳಿತ್ತು. ಆದರೆ, ಹುಣಸೆ ಮರಕ್ಕೆ ಧೀರ್ಘಾಯುಷ್ಯ ಇರುವುದು, ಅದರ ಐತಿಹಾಸಿಕ 2000 ವರ್ಷದ ಹಿನ್ನೆಲೆಯ ಇರುವುದರಿಂದ ಸ್ಥಳೀಯ ಗ್ರಾಮಸ್ಥರು ಈ ಮರವೇ ನಮಗೆ ಹೆಚ್ಚಿನ ಪ್ರಸಿದ್ಧಿಯನ್ನು ತಂದುಕೊಟ್ಟಿದೆ. ಈಗ ಮರವೇ ಬಿದ್ಧು ಹೋದರೆ ನಮ್ಮ ಗ್ರಾಮಕ್ಕೆ ಕೆಟ್ಟದಾಗುತ್ತದೆ ಎಂದು ಭಾವಿಸಿ ಪುನಃ ಈ ಬೃಹತ್‌ ಮರವನ್ನು ಮರುನಾಟಿ ಮಾಡಲು ಮುಂದಾಗಿದೆ.

Latest Videos

ಧರೆಗೆ ಉರುಳಿದ ಹಾವೇರಿಯ ಐತಿಹಾಸಿಕ ದೊಡ್ಡ ಹುಣಸೆ ಮರ!

ಇನ್ನು ಕಳೆದ ವಾರ ಧೆರೆಗೆ ಬಿದ್ದಿದ್ದ ದೊಡ್ಡ ಹುಣಸೆ ಮರವನ್ನು ಇಂದು ಮರು ನಾಟಿ ಮಾಡುವ ಕಾರ್ಯ ಆರಂಭವಾಗಿದೆ. ಬೃಹತ್ ಗಾತ್ರದ ದೊಡ್ಡ ಹುಣಸೆ ಮರವನ್ನು ಕ್ರೇನ್‌ಗಳು ಮತ್ತು ಜೆಸಿಬಿಗಳನ್ನು ಬಳಸಿ ಎತ್ತಿ ನಿಲ್ಲಿಸಿ ಮರುನಾಡಿ ಮಾಡಲು ಕಸರತ್ತು ಮಾಡಲಾಗುತ್ತಿದೆ. ನೆಲಕ್ಕುರುಳಿದ ಮರವನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯ ವಿಜ್ಞಾನಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ನೆಡಲು ವಿವಿಧ ಯೋಜನೆಗಳನ್ನು ರೂಪಿಸಿ ಇಂದು ಹುಣಸೇ ಪರವಿದ್ದ ಜಾಗದಲ್ಲಿಯೇ ಮರುನಾಟಿ ಮಾಡುತ್ತಿದ್ದಾರೆ. 

ದೊಡ್ಡ ಹುಣಸೆ ಮರ ಬೀಳಿಸಿದ ಗೆದ್ದಲು ಹುಳುಗಳು: ಸಾಮಾನ್ಯವಾಗಿ ಎಂತಹದ್ದೇ ಮಳೆ, ಬಿರುಗಾಳಿ ಬಂದರೂ ಮರಗಳು ಬೀಳುವುದಿಲ್ಲ. ಅದರಲ್ಲಿ ತೀವ್ರ ಆಳವಾಗಿ ಬೇರುಗಳನ್ನು ಬಿಟ್ಟುಕೊಳ್ಳುವ ಹುಣಸೆ ಮರಗಳು ಬಿದ್ದಿರುವ ಉದಾಹರಣೆಗಳೇ ಕಡಿಮೆ. ಅಂತಹದ್ದರಲ್ಲಿ 2 ಸಾವಿರ ವರ್ಷದ ಹಳೆ ಹುಣಸೆ ಮರ ಬಿದ್ದಿದ್ದಾದರೂ ಹೇಗೆ ಎಂದು ವಿಜ್ಞಾನಿಗಳು ಪರಿಶೀಲನೆ ಮಾಡಿದಾಗ ಹುಣಸೆ ಮರದ ಬಹುಭಾಗ ಬುಡಗಳನ್ನು ಗೆದ್ದಲು ಹುಳುಗಳು ಮೇಯ್ದುಬಿಟ್ಟಿವೆ. ಗೆದ್ದಿಲು ಹುಳುಗಳು ಹುಣಸೆ ಮರದಿಂದ ಬಿದ್ದಿರುವ ಒಣಗಿದ ಟೊಂಗೆ ಮತ್ತು ಎಲೆಗಳನ್ನು ತಿನ್ನುವ ಜೊತೆಗೆ ಮಣ್ಣು ಸಡಿಲಗೊಂಡಿದೆ. ಜೊತೆಗೆ, ಬೇರುಗಳ ಭಾಗಗಳನ್ನೂ ಗೆದ್ದಲು ಹುಳುಗಳು ತಿಂದು ಹಾಕಿದ್ದವು. ಈ ಗೆದ್ದಲು ಹುಳುಗ: ಕಾರಣದಿಂದಾಗಿಯೇ ದೊಡ್ಡ ಹುಣಸೆ ಮರ ಬಿದ್ದಿದೆ ಎಂದು ವಿಜ್ಞಾನಿಗಳು ಹಾಗೂ ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಮಳೆ ಕೊರತೆ: ಮೋಡ ಬಿತ್ತನೆಗೆ ಸರ್ಕಾರದಿಂದ ಅನುಮತಿ

ದೊಡ್ಡ ಹುಣಸೆ ಮರ ವೀಕ್ಷಣೆಗೆ ಕುಟುಂಬ ಸಮೇತ ಪ್ರವಾಸ: ಹಾವೇರಿ ಜಿಲ್ಲೆ ಸೇರಿದಂತೆ ಸುತ್ತಲಿನ ಜಿಲ್ಲೆಗಳ ಗ್ರಾಮಸ್ಥರು ಸವಣೂರಿನ ಮಠದ ದೊಡ್ಡ ಹುಣಸೆ ಮರವನ್ನು ವೀಕ್ಷಣೆ ಮಾಡಲು ಒಂದು ದಿನದ ಪ್ರವಾಸಕ್ಕೆ ಬರುತ್ತಿದ್ದರು. ಶಾಲಾ- ಕಾಲೇಜು ವಿದ್ಯಾರ್ಥಿಗಳನ್ನು ಕೂಡ ಇಲ್ಲಿದೆ ಹೊರ ಸಂಚಾರಕ್ಕಾಗಿ ಶಾಲಾ ಶಿಕ್ಷಕರು ಕರೆತರುತ್ತಿದ್ದರು. ಇನ್ನು ಸವಣೂರು ಪಟ್ಟಣದ ದೊಡ್ಡ ಹುಣಸೆ ಮರದ ಬಳಿಯಿರುವ ಕಲ್ಮಠದ ಪ್ರಸಿದ್ಧಿಯೂ ಹೆಚ್ಚಾಗಿತ್ತು. ಆದರೆ, ಈ ಮರ ಬಿದ್ದಿದ್ದರಿಂದ ಮಠಕ್ಕೂ ಭಕ್ತರ ಆಗಮನ ಕಡಿಮೆ ಆಗುತ್ತದೆ ಎಂಬ ಆತಂಕ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಗಮನಕ್ಕೆ ತಂದ ಗ್ರಾಮಸ್ಥರು ಮರವನ್ನು ಮರುನಾಟಿ ಮಾಡಲು ತೀರ್ಮಾನಿಸಿ ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದರು. ಅದರಂತೆ, ಕಳೆದೊಂದು ವಾರದಿಂದ ಮರವನ್ನು ಸಂರಕ್ಷಣೆ ಮಾಡಿದ ಅರಣ್ಯ ಅಧಿಕಾರಿಗಳು ಗುರುವಾರ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ಜೊತೆಗೂಡಿ ಮರು ನಾಟಿ ಮಾಡುತ್ತಿದ್ದಾರೆ. 

click me!