
ಬೆಂಗಳೂರು (ಆ.19): ಧರ್ಮಸ್ಥಳದಲ್ಲಿ 2003ರಲ್ಲಿ ನನ್ನ ಮಗಳು ಅನನ್ಯಾ ಭಟ್ ಕಳೆದು ಹೋಗಿದ್ದಾಳೆ ಎಂದು ಸುಜಾತಾ ಭಟ್ ತೋರಿಸಿದ ಫೋಟೋ, ಅವರು ರಿಲೇಷನ್‌ಶಿಪ್‌ನಲ್ಲಿದ್ದ ರಂಗಪ್ರಸಾದ್ ಅವರ ಸೊಸೆ ವಾಸಂತಿಗೆ ಹೋಲಿಕೆ ಆಗುತ್ತಿದೆ. ಆದರೆ, ಈ ಬಗ್ಗೆ ಸುಜಾತಾ ಭಟ್ ಸುವರ್ಣ ನ್ಯೂಸ್‌ನೊಂದಿಗೆ ಫೋನೋದಲ್ಲಿ ಮಾತನಾಡಿ, ವಾಸಂತಿ ಯಾರೆಂಬುದೇ ಗೊತ್ತಿಲ್ಲ. ಅದು ನನ್ನ ಮಗಳು ಅನನ್ಯಾ ಭಟ್‌ಳದ್ದೇ ಎಂದು ಸ್ಪಷ್ಟನೆ ನೀಡಿದ್ದಾರೆ.
ಸುವರ್ಣ ನ್ಯೂಸ್ ಪ್ರತಿನಿಧಿ: ಧರ್ಮಸ್ಥಳದಲ್ಲಿ ಕಳೆದುಹೋದ ನಿಮ್ಮ ಮಗಳು ಅನನ್ಯಾ ಭಟ್ ಅವರದ್ದು ಎಂದು ಕೊಟ್ಟಿರುವ ಫೋಟೋ ಸುಳ್ಳು ಅಂತಾ ಹೇಳಲಾಗುತ್ತಿದೆ. ನೀವು ತೋರಿಸಿರುವ ಫೋಟೋ ತಂಗಪ್ರಸಾದ್ ಅವರ ಸೊಸೆ ವಾಸಂತಿ ಅವರ ಫೋಟೋ ಎಂದು ಹೇಳಲಾಗುತ್ತಿದೆ?
ಸುಜಾತಾ ಭಟ್: ಸರ್ ನಾನು ಎಲ್ಲಿ ಕೊಡಬೇಕೋ ಅಲ್ಲಿ ಕೊಡ್ತೇನೆ, ನಾನು ಎಲ್ಲ ಕಡೆ ಕೊಡುವುದಿಲ್ಲ ಸರ್..
ಸುವರ್ಣ ನ್ಯೂಸ್ ಪ್ರತಿನಿಧಿ: ಆದ್ರೆ, ಅದು ಅನನ್ಯಾ ಭಟ್ ಫೋಟೋ ಅಲ್ಲವೆಂದು ಹೇಳಲಾಗುತ್ತಿದೆ? ರಂಗಪ್ರಸಾದ್ ಸೊಸೆ ವಾಸಂತಿ ಅವರ ಫೋಟೋವನ್ನು ಸುಜಾತಾ ಭಟ್ ತೋರಿಸಿದ್ದಾರೆ ಅಂತಾ ಹೇಳಲಾಗುತ್ತಿದೆ. ಇದಕ್ಕೆ ಏನು ಹೇಳ್ತೀರಿ?
ಸುಜಾತಾ : ಅದು ನನ್ನ ಮಗಳದ್ದೇ ಫೋಟೋ. ನನಗೂ, ವಾಸಂತಿಗೂ ಸಂಬಂಧವಿಲ್ಲ. ನನಗೆ ಅವರಾರೋ ಗೊತ್ತಿಲ್ಲ.
ಸುವರ್ಣ ನನ್ಯೂಸ್ ಪ್ರತಿನಿಧಿ: ನೀವು ಕೊಟ್ಟಿರುವ ಅನನ್ಯಾ ಭಟ್ ಫೋಟೋ ಮತ್ತು ರಂಗಪ್ರಸಾದ್ ಅವರ ಸೊಸೆ ವಾಸಂತಿ ಅವರ ಫೋಟೋ ಎರಡೂ ಸೇಮ್ ಇದೆ.
ಸುಜಾತಾ ಭಟ್: ಅಲ್ಲ ಸರ್ ಅದು, ಅಲ್ಲ ಸರ್.
ಸುವರ್ಣ ನ್ಯೂಸ್ ಪ್ರತಿನಿಧಿ: ನಾವು ಚೆಕ್ ಮಾಡುವಾಗ ಎರಡೂ ಫೋಟೋ ಒಂದೇ ರೀತಿಯಾಗಿ ಕಾಣಿಸಿತು.
ಸುಜಾತಾ: ಇಲ್ಲ ಸರ್, ಬೇರೆ, ಬೇರೆ...
ಸುವರ್ಣ ನ್ಯೂಸ್ ಪ್ರತಿನಿಧಿ: ವಸಂತಾ ಅವರ ರೀತಿಯೇ ಅನನ್ಯಾ ಭಟ್ ಇದ್ರಾ?
ಸುಜಾತಾ: ಹೌದು, ನಮ್ಮ ಮನೆಯವರ ರೀತಿಯಲ್ಲಿ ಅನನ್ಯಾ ಇದ್ದರು. ಒಂದೇ ರೀತಿ ಇರಲಿಲ್ಲ. ಸುಮ್ಮನೆ ನಮ್ಮನ್ನ ಯಾಕೆ ತಲೆ ತಿಂತೀರಾ..
ಸುವರ್ಣ ನ್ಯೂಸ್ ಪ್ರತಿನಿಧಿ: ಉಡುಪಿ ಮೆಡಿಕಲ್ ಕಾಲೇಜಿನಲ್ಲಿ ಅನನ್ಯಾ ಭಟ್ ಬಗ್ಗೆ ಯಾವುದೇ ದಾಖಲಾತಿಗಳಿಲ್ಲವಲ್ಲ.?
ಸುಜಾತಾ ಭಟ್: ಎಲ್ಲ ದಾಖಲಾತಿಗಳನ್ನು ಸ್ಪಾಯಿಲ್ (ನಾಶ) ಮಾಡಿದ್ದಾರೆ.
ಸುವರ್ಣ ನ್ಯೂಸ್ ಪ್ರತಿನಿಧಿ: ನಿಮ್ಮ ಬಳಿ ಅನನ್ಯಾ ಸಿಇಟಿ ಪರೀಕ್ಷೆ ಬರೆದದ್ದು, ಅಡ್ಮಿಷನ್ ದಾಖಲೆಗಳಿವೆಯೇ?
ಸುಜಾತಾ : ನನ್ನ ಮನೆಗೆ ಬೆಂಕಿ ಕೊಟ್ಟಿದ್ದಾರೆ. ಎಲ್ಲ ದಾಖಲೆಗಳು ಸುಟ್ಟು ಹೋಗಿವೆ. ಇದು ನನ್ನ ಸ್ಪಷ್ಟನೆ.
ಸುವರ್ಣ ನ್ಯೂಸ್ ಪ್ರತಿನಿಧಿ: ನೀವು ಈ ಫೋಟೋ ಹೊರತಾಗಿ ಅನನ್ಯಾ ಭಟ್ ಇರುವಿಕೆಯನ್ನು ಯಾವುದೇ ದಾಖಲೆ ಕೊಟ್ಟು ಸಾಬೀತು ಮಾಡಲಿಲ್ಲ.
ಸುಜಾತಾ ಭಟ್: ನಾನು ಎಲ್ಲಿ ದಾಖಲೆಗಳನ್ನು ಕೊಡಬೇಕೋ ಅಲ್ಲಿ ಕೊಡುತ್ತೇನೆ. ಎಲ್ಲರಿಗೂ ಕೊಡಲು ಆಗೊಲ್ಲ.
ಸುವರ್ಣ ನ್ಯೂಸ್ ಪ್ರತಿನಿಧಿ: ಕೋಲ್ಕತ್ತಾದಲ್ಲಿ ಸಿಬಿಐ ಕಚೇರಿಯಲ್ಲಿ ಸ್ಟೆನೋಗ್ರಾಫರ್ ಆಗಿದ್ದು ನಿಜವೇ?
ಸುಜಾತಾ ಭಟ್: ಹೌದು..., ನಾನು ಗುತ್ತಿಗೆ ಆಧಾರದಲ್ಲಿ ಕಲ್ಕತ್ತಾದಲ್ಲಿ ಸಿಬಿಐ ಕಚೇರಿಯಲ್ಲಿ ಸ್ಟೆನೋಗ್ರಾಫರ್ ಆಗಿ ಕೆಲಸ ಮಾಡಿದ್ದೇನೆ.
ಸುವರ್ಣ ನ್ಯೂಸ್ ಪ್ರತಿನಿಧಿ: ಎಷ್ಟು ವರ್ಷ ಸಿಬಿಐನಲ್ಲಿ ಕೆಲಸ ಮಾಡಿದ್ದೀರಿ?
ಸುಜಾತಾ ಭಟ್: ನಾನು ಇಷ್ಟು ವರ್ಷ ಅಂತಾ ಎಲ್ಲಿಯೂ ಕೆಲಸ ಮಾಡಿಲ್ಲ. ಅವರು ಎಲ್ಲಿ, ಎಲ್ಲಿಗೆ ಕರೆಯುತ್ತಾರೋ ಅಲ್ಲಿಗೆ ಕೆಲಸ ಮಾಡಲು ಹೋಗುತ್ತಿದ್ದೆ. ನಾನು ಕೋಲ್ಕತ್ತಾದಲ್ಲಿ ಪರ್ಮನೆಂಟ್ ಆಗಿರಲಿಲ್ಲ, ರಿಪ್ಪನ್‌ಪೇಟೆಗೂ ಬಂದು ಹೋಗುತ್ತಿದ್ದೆ.
ಸುವರ್ಣ ನ್ಯೂಸ್ ಪ್ರತಿನಿಧಿ: 2003ರಲ್ಲಿ ರಿಪ್ಪನ್‌ಪೇಟೆ ಪ್ರಭಾಕರ್ ಬಾಳಿಗ ಅವರೊಂದಿಗೆ ಇದ್ದಿದ್ದು ಸತ್ಯವೇ?
ಸುಜಾತಾ ಭಟ್: ಹೌದು, ನಾನು ಅವರೊಂದಿಗೆ ಇದ್ದಿದ್ದು, ಸತ್ಯ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಅನಾಮಿಕ ವ್ಯಕ್ತಿಯೊಬ್ ದೂರು ಕೊಟ್ಟ ಒಂದೆರಡು ದಿನಗಳ ಅಂತರದಲ್ಲಿ ಸುಜಾತಾ ಭಟ್ ಎನ್ನುವ ಮಹಿಳೆ, ನನ್ನ ಮಗಳೂ ಕೂಡ ಧರ್ಮಸ್ಥಳದಲ್ಲಿ 2003ರಲ್ಲಿ ನಾಪತ್ತೆ ಆಗಿದ್ದಾಳೆ. ಉಡುಪಿ ಮಣಿಪಾಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮಾಡುತ್ತಿದ್ದ ಮಗಳು ಧರ್ಮಸ್ಥಳಕ್ಕೆ ಪ್ರವಾಸಕ್ಕೆ ಬಂದಾಗ ನಾಪತ್ತೆ ಆಗಿದ್ದಾಳೆ. ಇದೀಗ ನೂರಾರು ಮಹಿಳೆಯರ ಅಸ್ತಿಪಂಜರ ಹುಡುಕಾಟದಲ್ಲಿ ಯುವತಿಯರ ಶವ ಸಿಕ್ಕಿದರೆ, ಅದನ್ನು ನನ್ನ ಡಿಎನ್‌ಎಗೆ ಹೋಲಿಕೆ ಮಾಡಿ ಮೂಳೆಗಳನ್ನಾದರೂ ಕೊಡಿ. ಸನಾತನ ಹಿಂದೂ ಧರ್ಮದ ಪ್ರಕಾರ ವಿಧಿವಿಧಾನ ನೆರವೇರಿಸಬೇಕು ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸುಜಾತಾ ಭಟ್ ಸುಳ್ಳು ದೂರು ಕೊಟ್ಟಿದ್ದಾರಾ? ಮಗಳು ಅನನ್ಯಾ ಹುಟ್ಟಿದ್ದೇ ಸುಳ್ಳಾ? ಎಂಬ ಅನುಮಾನಗಳು ಕಾಡುತ್ತಿವೆ. ಈ ಹಿನ್ನೆಲೆಯಲ್ಲಿ ಸುಜಾತಾ ಭಟ್ ಅವರನ್ನು ಸುವರ್ಣ ನ್ಯೂಸ್ ಪ್ರತಿನಿಧಿ ನೇರವಾಗಿ ಮಾತನಾಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ