ಈಗಲೇ ಬಂಗ್ಲೆಗುಡ್ಡ ಅಗಿಯೋದಿಲ್ಲ, ಮೇಲ್ಭಾಗದಲ್ಲಿ ಸಿಗುವ ಅಸ್ತಿಪಂಜರ ಸಂಗ್ರಹಕ್ಕೆ ಎಸ್‌ಐಟಿ ನಿರ್ಧಾರ!

Published : Sep 15, 2025, 06:19 PM IST
dharmasthala case

ಸಾರಾಂಶ

ಧರ್ಮಸ್ಥಳದ ಬಂಗ್ಲೆಗುಡ್ಡ ಅಸ್ಥಿಪಂಜರ ಪ್ರಕರಣದ ತನಿಖೆಯಲ್ಲಿ ಹೊಸ ತಿರುವು ಪಡೆದುಕೊಂಡಿದೆ. ಎಸ್‌ಐಟಿ ತಂಡದ ಸ್ಥಳ ಭೇಟಿ ರದ್ದಾಗಿದ್ದು, ಅರಣ್ಯ ಇಲಾಖೆ ದಾಖಲೆ ಒದಗಿಸಲಿದೆ. ಉತ್ಖನನಕ್ಕೂ ಮುನ್ನ ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ಎಸ್‌ಐಟಿ ಮುಂದಾಗಿದೆ.

ದಕ್ಷಿಣ ಕನ್ನಡ (ಸೆ.15): ಧರ್ಮಸ್ಥಳದ ಬಂಗ್ಲೆಗುಡ್ಡ ಅಸ್ಥಿಪಂಜರ ಪತ್ತೆ ಪ್ರಕರಣದ ತನಿಖೆ ಹೊಸ ತಿರುವು ಪಡೆದಿದೆ. ರಾಜ್ಯ ಸರ್ಕಾರ ನಿಯೋಜನೆ ಮಾಡಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು ಸ್ಥಳಕ್ಕೆ ಭೇಟಿ ನೀಡುವುದನ್ನು ರದ್ದುಪಡಿಸಿದ್ದು, ಅದರ ಬದಲಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಗ್ಲೆಗುಡ್ಡದಲ್ಲಿನ ಅರಣ್ಯ ಪ್ರದೇಶದ ಬಗ್ಗೆ ಅಗತ್ಯ ದಾಖಲೆಗಳನ್ನು ಒದಗಿಸಲು ಒಪ್ಪಿಕೊಂಡಿದ್ದಾರೆ.

ಡಿಜಿಪಿ ಪ್ರಣಬ್ ಮೊಹಾಂತಿ ಅವರು ಬೆಂಗಳೂರಿಗೆ ತೆರಳುವ ಮುನ್ನ ಈ ನಿರ್ಧಾರ ಕೈಗೊಂಡಿದ್ದಾರೆ. ಆರಂಭದಲ್ಲಿ, ಎಸ್‌ಐಟಿ ತಂಡವು ಅಸ್ಥಿಪಂಜರಗಳನ್ನು ಹುಡುಕಲು ಬಂಗ್ಲೆಗುಡ್ಡದಲ್ಲಿ ಶೋಧ ಕಾರ್ಯ ಮತ್ತು ಉತ್ಖನನ ನಡೆಸಲು ಯೋಜಿಸಿತ್ತು. ಇದಕ್ಕಾಗಿ ಅರಣ್ಯ ಇಲಾಖೆಯ ಸಹಕಾರ ಕೇಳಲಾಗಿತ್ತು. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ಬಳಿಕ ದಾಖಲೆ ನೀಡಲು ಮುಂದಾಗಿದ್ದರು. ಆದರೆ, ಈಗ ಸ್ಥಳ ಭೇಟಿಯ ಬದಲು ನೇರವಾಗಿ ಉಪಗ್ರಹ ಚಿತ್ರಗಳು (ಸ್ಯಾಟಲೈಟ್ ಇಮೇಜ್) ಮತ್ತು ಇತರ ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಅರಣ್ಯದ ವಿಸ್ತೀರ್ಣ ಮತ್ತು ಮರಗಳ ಮಾಹಿತಿಯನ್ನು ನೀಡಲು ಅರಣ್ಯ ಇಲಾಖೆ ಒಪ್ಪಿಕೊಂಡಿದೆ.

ಬಂಗ್ಲೆಗುಡ್ಡದ ಕಾಡಿನಿಂದಲೇ ತಂದಿದ್ದ ತಲೆಬುರುಡೆ:

ಈ ದಾಖಲೆಗಳ ಆಧಾರದ ಮೇಲೆ ಎಸ್‌ಐಟಿ ತನಿಖೆಗೆ ಹೊಸ ರೂಪುರೇಷೆ ಹಾಕಿಕೊಳ್ಳಲಿದೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಚಿನ್ನಯ್ಯ ಒಂದು ಬುರುಡೆಯನ್ನು ಪೊಲೀಸರಿಗೆ ತಂದುಕೊಟ್ಟು ದೂರು ನೀಡಿದ್ದ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ವಿಠಲ ಗೌಡ, ತಾನು ಈ ಹಿಂದೆ ಬಂಗ್ಲೆಗುಡ್ಡದ ಕಾಡಿನಿಂದಲೇ ತಲೆಬುರುಡೆಯನ್ನು ತಂದಿದ್ದೆ ಎಂದು ಹೇಳಿಕೆ ನೀಡಿದ್ದನು. ಜೊತೆಗೆ, ಮಹಜರು ಸಂದರ್ಭದಲ್ಲಿ ಅಸ್ಥಿಪಂಜರಗಳನ್ನು ತೋರಿಸಿದ್ದಾಗಿಯೂ ಹೇಳಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಬಂಗ್ಲೆಗುಡ್ಡದಲ್ಲಿ ಅಸ್ಥಿಪಂಜರಗಳಿದ್ದರೆ ಅವುಗಳನ್ನು ಸಂಗ್ರಹಿಸಲು ಎಸ್‌ಐಟಿ ನಿರ್ಧರಿಸಿತ್ತು.

ರಾಯಚೂರು ಮೂವರು ಯುವತಿಯರ ಆತ್ಮಹ*ತ್ಯೆ ಯತ್ನ ಕೇಸ್; ರೋಚಕ ಟ್ವಿಸ್ಟ್ ಕೊಟ್ಟ ಲವ್ ಸ್ಟೋರಿ!

ಅಸ್ತಿಪಂಜರ ಸಂಗ್ರಹಕ್ಕೆ ನಿರ್ಧಾರ:

ಆದರೆ, ಈಗ ತನಿಖೆಯ ಆಳವಾದ ಅಧ್ಯಯನ ಹಾಗೂ ಹೆಚ್ಚಿನ ಮಾಹಿತಿ ಸಂಗ್ರಹದ ನಂತರವಷ್ಟೇ ಬಂಗ್ಲೆಗುಡ್ಡಕ್ಕೆ ಭೇಟಿ ನೀಡಲು ಎಸ್‌ಐಟಿ ಯೋಜಿಸಿದೆ. ಸದ್ಯಕ್ಕೆ, ಉತ್ಖನನದ ಬದಲು ಭೂಮಿಯ ಮೇಲ್ಭಾಗದಲ್ಲಿ ಸಿಗಬಹುದಾದ ಅಸ್ಥಿಪಂಜರಗಳನ್ನು ಸಂಗ್ರಹಿಸಲು ತಂಡ ನಿರ್ಧರಿಸಿದೆ. ಈ ತನಿಖೆಯ ಮುಂದಿನ ಹಂತವು ಅರಣ್ಯ ಇಲಾಖೆ ಒದಗಿಸುವ ದಾಖಲೆಗಳನ್ನು ಅವಲಂಬಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌