
ಧರ್ಮಸ್ಥಳ (ಆ.24) ಧರ್ಮಸ್ಥಳ ವಿರುದ್ದ ಮಾಡಿದ ನೂರಾರು ಶವ ಹೂತಿಟ್ಟ ಗಂಭೀರ ಆರೋಪದ ಷಡ್ಯಂತ್ರ ಬಯಲಾಗುತ್ತಿದ್ದಂತೆ ದೂರುದಾರ ಚಿನ್ನಯ್ಯ ಅಲಿಯಾಸ್ ಮುಸುಕುದಾರಿ ದೂರುದಾರ ಅರೆಸ್ಟ್ ಆಗಿದ್ದಾನೆ. ನಿನ್ನೆ(ಆ.23) ಮುಸುಕುದಾರಿಯನ್ನು ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.ಮಾಸ್ಕ್ ಮ್ಯಾನ್ ಅರೆಸ್ಟ್ ಬೆನ್ನಲ್ಲೇ ಬುರುಡೆ ಗ್ಯಾಂಗ್ ಹಿಂದಿನ ಹಲವರಿಗೆ ನಡುಕು ಶುರುವಾಗಿದೆ. ಇದೇ ಪ್ರಕರಣ ಜೊತೆ ಭಾರಿ ಸದ್ದು ಮಾಡಿದ ಅನನ್ಯಾ ಭಟ್ ನಾಪತ್ತೆ ಪ್ರಕರಣದ ದೂರುದಾರೆ ಸುಜಾತಾ ಭಟ್‌ಗೆ ಸಂಕಷ್ಟ ಹೆಚ್ಚಾಗಿದೆ. ಇಂದು ಅಥವಾ ನಾಳೆ ಸುಜಾತಾ ಭಟ್ ವಿಚಾರಣೆ ನಡೆಸಲು ಎಸ್ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಇಷ್ಟೇ ಅಲ್ಲ ಯಾವುದೇ ಕ್ಷಣದಲ್ಲೂ ಸುಜಾತಾ ಭಟ್ ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಸುಜತಾ ಭಟ್ ಹಲವು ಗಂಭೀರ ಆರೋಪ ಮಾಡಿದ್ದಾರೆ. ದೂರಿನಲ್ಲಿ ಮಹತ್ವದ ವಿಚಾರ ಮುಂದಿಟ್ಟಿದ್ದಾರೆ. ಆದರೆ ಸುಜಾತಾ ಭಟ್ ದೂರಿನಲ್ಲಿ ಉಲ್ಲೇಖಿಸಿರುವ ಅಂಶಕ್ಕೂ, ನೈಜತೆಗೂ ಅಜಗಜಾಂತರ ವ್ಯತ್ಯಾಸವಿರುವುದನ್ನು ಎಸ್ಐಟಿ ಅಧಿಕಾರಿಗಳು ಗಮನಿಸಿದ್ದಾರೆ. ಇತ್ತ ಮಾಧ್ಯಮಗಳಿಗೆ ನೀಡುತ್ತಿರುವ ಹೇಳಿಕೆಯನ್ನು ಎಸ್ಐಟಿ ಅಧಿಕಾರಿಗಳು ಗಮನಿಸಿದ್ದಾರೆ. ವಯಸ್ಸಿನ ಕಾರಣದಿಂದ ಇಂದು ಅಥವಾ ನಾಳೆ ಸುಜಾತಾ ಭಟ್ ಅವರ ಮನೆಯಲ್ಲೇ ವಿಚಾರಣೆ ನಡೆಯುವ ಸಾಧ್ಯತೆ ಇದೆ. ತನ್ನಲ್ಲಿ ಕೆಲ ದಾಖಲೆ ಇವೆ. ಅದನ್ನು ಎಸ್ಐಟಿಗೆ ನೀಡುತ್ತೇನೆ ಎಂದು ಸುಜಾತಾ ಭಟ್ ಹೇಳಿದ್ದಾರೆ. ಇದುವರೆಗೂ ಯಾವುದೇ ದಾಖಲೆ ನೀಡಿಲ್ಲ. ವಿಚಾರಣೆ ವೇಳೆ ಸುಜಾತಾ ಭಟ್ ಅನನ್ಯಾ ಭಟ್ ಕುರಿತು ದಾಖಲೆ ನೀಡಲು ವಿಫಲರಾದರೆ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಅನನ್ಯಾ ಭಟ್ ನಾಪತ್ತೆ ಪ್ರಕರಣವನ್ನು ಎಸ್ಐಟಿಗೆ ವರ್ಗಾಯಿಸಿದ ಬೆನ್ನಲ್ಲೇ ಸುಜಾತಾ ಭಟ್ ಕಂಗಾಲಾಗಿದ್ದಾರೆ. ಈಗಾಗಲೇ ಏಷ್ಯಾನೆಟ್ ಸುವರ್ಣನ್ಯೂಸ್ ಸುಜಾತಾ ಭಟ್ ಆರರೋಪದ ಹಿಂದಿನ ಅಸಲಿ ಕತೆಗಳನ್ನು ಬಹಿರಂಗಪಡಿಸಿದೆ. ಇತ್ತ ಎಸ್ಐಟಿ ಅಧಿಕಾರಿಗಳು ಸುಜಾತಾ ಭಟ್ ಇತಿಹಾಸವನ್ನೇ ಕೆದಕಿದ್ದಾರೆ. ಸುಜಾತಾ ಭಟ್ ಹೇಳಿಕೆ, ಆಕೆಯ ಆರೋಪ, ಸತ್ಯಾಂಶ, ದಾಖಲೆಗಳನ್ನು ಎಸ್ಐಟಿ ಅಧಿಕಾರಿಗಳು ತರಿಸಿಕೊಂಡಿದ್ದಾರೆ.
ಸುಜಾತಾ ಭಟ್ ಹೇಳಿಕೆಗಳು ಎಸ್ಐಟಿ ಅಧಿಕಾರಿಗಳನ್ನೇ ಗೊಂದಲಕ್ಕೀಡು ಮಾಡಿದೆ. ಕ್ಷಣಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಸುಜಾತಭಟ್ ನೀಡಿರುವ ದೂರಿಗೂ, ಮಾಧ್ಯಮಗಳ ಮುಂದೆ ನೀಡ್ತಿರೋ ಹೇಳಿಕೆಗಳಿಗೂ ವ್ಯತ್ಯಾಸ ಕಾಣುತ್ತಿದೆ. ಪ್ರಾಥಮಿಕವಾಗಿ ಸುಜಾತ್ ಭಟ್ ಹೇಳಿಕೆ ದಾಖಲಿಸಲಾಗಿದೆ. ಇದೀಗ ವಿಚಾರಣೆ ನಡೆಯಲಿದೆ. ಇದಕ್ಕೆ ಪೂರಕವಾಗಿ ಎಸ್ಐಟಿ ಸುಜಾತಾ ಭಟ್ ಕುರಿತು ಸಂಪೂರ್ಣ ಇತಿಹಾಸ ತೆಗೆದಿದ್ದಾರೆ.
ಕೆಲ ದಿನಗಳ ಹಿಂದೆ ಸುಜಾತ ಭಟ್ ಬೆಂಗಳೂರಿನ ನಿವಾಸಕ್ಕೆ ಬಂದಿದ್ದ ಎಸ್ಐಟಿ ಬಳಿಕ ವಾಪಾಸ್ಸಾಗಿತ್ತು. ಸುಜಾತಭಟ್ ನೀಡಿದ್ದ ದೂರಿನ ಸಂಬಂಧ ಇದುವರೆಗೂ ಯಾವುದೇ ದಾಖಲೆಯನ್ನು ಎಸ್ಐಟಿಗೆ ಸಲ್ಲಸಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ